ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


BREAKING : ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ಪ್ರಜ್ವಲ್‌ ರೇವಣ್ಣ ಆಗಮನ : SIT ಅಧಿಕಾರಿಗಳ ಮುಂದೆ ಶರಣು

Posted by Vidyamaana on 2024-05-05 13:41:54 |

Share: | | | | |


BREAKING : ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ಪ್ರಜ್ವಲ್‌ ರೇವಣ್ಣ ಆಗಮನ : SIT ಅಧಿಕಾರಿಗಳ ಮುಂದೆ ಶರಣು

ಬೆಂಗಳೂರು : ವಿದೇಶದಲ್ಲಿರುವ ಸಂಸದ ಪ್ರಜ್ವಲ್‌ ರೇವಣ್ಣನವರು ಇಂದು ಮಧ್ಯಾಹ್ನ 3 ಗಂಟೆಗೆ ದುಬೈನಿಂದ ಬೆಂಗಳೂರಿಗೆ ಆಗಮಿಸಲಿದ್ದು, ಎಸ್ ಐಟಿ ಅಧಿಕಾರಿಗಳ ಮುಂದೆ ಶರಣಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಒಂದು ವೇಳೆ ಪ್ರಜ್ಚಲ್‌ ರೇವಣ್ಣ ಭಾರತಕ್ಕೆ ಆಗಮಿಸದೇ ಹೋದರೆ ಸಿಬಿಐ ನೇರವಿನೊಂದಿಗೆ ರಾಜ್ಯದ ಪೊಲೀಸರು ಅವರು ಇರುವ ಜಾಗಕ್ಕೆ ಹೋಗಿ ಅವರನ್ನು ತಮ್ಮ ವಶಕ್ಕೆಪಡೆದುಕೊಂಡು ರಾಜ್ಯಕ್ಕೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಪರಾಧ ಹಿನ್ನೆಲೆ ಪತ್ತೆಗೆ ಡಿಜಿಟಲ್ ಟಚ್ | ಈ ತಂತ್ರಜ್ಞಾನದಲ್ಲಿದೆ ಆರೋಪಿಯ ಪೂರ್ಣ ವಿವರ | ದ.ಕ. ಜಿಲ್ಲಾ ಪೊಲೀಸರಿಂದ ವಿನೂತನ ಕಾರ್ಯಾಚರಣೆ

Posted by Vidyamaana on 2023-02-19 09:37:18 |

Share: | | | | |


ಅಪರಾಧ ಹಿನ್ನೆಲೆ ಪತ್ತೆಗೆ ಡಿಜಿಟಲ್ ಟಚ್ | ಈ ತಂತ್ರಜ್ಞಾನದಲ್ಲಿದೆ ಆರೋಪಿಯ ಪೂರ್ಣ ವಿವರ | ದ.ಕ. ಜಿಲ್ಲಾ ಪೊಲೀಸರಿಂದ ವಿನೂತನ ಕಾರ್ಯಾಚರಣೆ

ಪುತ್ತೂರು: ರಾತ್ರಿ ವೇಳೆ ಜರಗುವ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚುವ ಹಿನ್ನೆಲೆಯಲ್ಲಿ ನೂತನ MCCTNS ( Mobile Crime and Criminal Tracking Network System) ಪೋರ್ಟಬಲ್ ಸ್ಕ್ಯಾನರ್ ಬಳಕೆಗೆ ದ.ಕ. ಜಿಲ್ಲಾ ಪೊಲೀಸರು ಚಾಲನೆ ನೀಡಿದ್ದಾರೆ.


ರಾತ್ರಿ ಗಸ್ತು ಕರ್ತವ್ಯದ ವೇಳೆ ಕಾಣಸಿಗುವ ಅಪರಿಚಿತ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಅಪರಾಧ ಚಟುವಟಿಕೆಯನ್ನು ತಿಳಿದುಕೊಳ್ಳಲು ಈ ತಂತ್ರಜ್ಞಾನ ನೆರವಾಗಲಿದೆ. ಆ ವ್ಯಕ್ತಿಯ ಬೆರಳಚ್ಚನ್ನು ತೆಗೆದುಕೊಳ್ಳುವ ಈ ಪೋರ್ಟಬಲ್ ಸ್ಕ್ಯಾನರ್, ಆತ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದರೆ ಅದರ ಸಂಪೂರ್ಣ ವಿವರವನ್ನು ತಕ್ಷಣದಲ್ಲೇ ನೀಡಲಿದೆ. ಮೌಖಿಕ ವಿಚಾರಣೆಯ ಜೊತೆಗೆ ತಂತ್ರಾಂಶದ ಮೂಲಕ ಪರಿಶೀಲಿಸಿದಾಗ ದೊರೆಯುವ ಮಾಹಿತಿ ಆಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯ.

ಅಬುದಾಬಿ : 33 ಕೋಟಿ ಬಹುಮಾನ ಗೆದ್ದ ಕೇರಳದ ರಾಜೀವ್‌

Posted by Vidyamaana on 2024-02-11 08:46:14 |

Share: | | | | |


ಅಬುದಾಬಿ : 33 ಕೋಟಿ ಬಹುಮಾನ ಗೆದ್ದ ಕೇರಳದ ರಾಜೀವ್‌

ಅಬುಧಾಬಿ: ಯುಎಇ ಯಲ್ಲಿ ನೆಲೆಸಿರುವ ಕೇರಳದ ರಾಜೀವ್‌ ಅರಿಕ್ಕಾಟ್‌ ಅವರಿಗೆ ಅಬುದಾಬಿ ಲಾಟರಿಯಲ್ಲಿ ಬರೋಬ್ಬರಿ 33 ಕೋಟಿ ರೂ.(15 ಮಿಲಿಯನ್‌ ದಿರ್ಹಾಮ್‌) ಬಂಪರ್‌ ಬಹುಮಾನ ಬಂದಿದೆ. ಅವರು ತಮ್ಮ ಮಕ್ಕಳ ಜನ್ಮದಿನಕ್ಕೆ ಹೋಲುವ ನಂಬರಿನ ಲಾಟರಿ ಟಿಕೆಟ್‌ ಖರೀದಿಸಿದ್ದರು. ಇದು ಅವರಿಗೆ ಅದೃಷ್ಟವಾಗಿ ಮೊದಲ ಬಹುಮಾನ ಗಳಿಸುವಂತೆ ಮಾಡಿದೆ. ಅಬುಧಾಬಿಯ ಅರ್ಕಿಟೆಕ್ಚರ್‌ ಸಂಸ್ಥೆ ಅಲ್‌ ಐನ್‌ನಲ್ಲಿ ರಾಜೀವ್‌ ಕೆಲಸ ಮಾಡುತ್ತಿದ್ದಾರೆ. “ನಾನು 3 ವರ್ಷಗಳಿಂದ ಬಿಗ್‌ ಟಿಕೆಟ್‌ ಲಾಟರಿಗಳನ್ನು ಖರೀದಿಸುತ್ತಿದ್ದೇನೆ. ಮೊತ್ತವನ್ನು 19 ಜನರೊಂದಿಗೆ ಸಮಾನವಾಗಿ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.

123 ಸ್ಥಾನ ಬರದಿದ್ದರೆ ಪಕ್ಷ ವಿಸರ್ಜಿಸುತ್ತೇವೆ ಎಂದಿದ್ದ ಕುಮಾರಸ್ವಾಮಿ

Posted by Vidyamaana on 2023-07-14 16:02:32 |

Share: | | | | |


123 ಸ್ಥಾನ ಬರದಿದ್ದರೆ ಪಕ್ಷ ವಿಸರ್ಜಿಸುತ್ತೇವೆ ಎಂದಿದ್ದ ಕುಮಾರಸ್ವಾಮಿ

ಬೆಂಗಳೂರು: ಕರ್ನಾಟಕ ವಿಧಾನಮಂಡಲ ಮುಂಗಾರು ಜಂಟಿ ಅಧಿವೇಶನ ಮುಂದುವರಿದಿದೆ. ವಿಧಾನ ಪರಿಷತ್​​ನಲ್ಲಿ ರಾಜ್ಯಪಾಲರ ಭಾಷಣದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.  


5 ಚುನಾವಣೆಗಳ ಪೈಕಿ 2 ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದ ಸಿದ್ದರಾಮಯ್ಯ ಕಾಂಗ್ರೆಸ್​​ ಚುನಾವಣೆ ವೇಳೆ 5 ಗ್ಯಾರಂಟಿ ಘೋಷಣೆ ಮಾಡಿದ್ದೆವು. ಜನ ನಮ್ಮ ಪಕ್ಷವನ್ನು ನಂಬುತ್ತಾರೆ ನಿಮ್ಮನ್ನು ನಂಬಲ್ಲ. ಜೆಡಿಎಸ್​ ಕೂಡ ಪಂಚರತ್ನ ಘೋಷಣೆ ಮಾಡಿತ್ತು. ಹೆಚ್ ​ಡಿ ಕುಮಾರಸ್ವಾಮಿ 123 ಸ್ಥಾನ ಬರದಿದ್ದರೆ ಪಕ್ಷ ವಿಸರ್ಜಿಸುತ್ತೇವೆ ಎಂದಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.

 ಜೆಡಿಎಸ್ (JDS)​​ ಶೇಕಡಾವಾರು ಮತ ಶೇ.19ರಿಂದ ಶೇ.13ಕ್ಕೆ ಕುಸಿದಿದೆ. 2005ರವರೆಗೆ ನಾನು ಜೆಡಿಎಸ್​ನಲ್ಲೇ ಇದ್ದೆ. ನಾನು ಜೆಡಿಎಸ್​ ಬಿಡಲಿಲ್ಲ, ನನ್ನನ್ನು ಪಕ್ಷದಿಂದ ಉಚ್ಚಾಟಿಸಿದರು. ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ನನ್ನನ್ನು ಉಚ್ಚಾಟಿಸಿದರು. ಕಾಂಗ್ರೆಸ್​​ ಪಕ್ಷದಿಂದ 2 ಬಾರಿ ಸಿಎಂ ಆಗುವ ಅವಕಾಶ ಸಿಕ್ಕಿದೆ. ಕಾಂಗ್ರೆಸ್​ಗೆ ನಾನು ಚಿರಋಣಿ ಆಗಿರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಂಚನೆ ಪ್ರಕರಣ : ಮುಸ್ಲಿಮ್ ಲೀಗ್ ನಾಯಕರ ಆಸ್ತಿ ಮುಟ್ಟುಗೋಲು

Posted by Vidyamaana on 2023-08-23 16:00:45 |

Share: | | | | |


ವಂಚನೆ ಪ್ರಕರಣ : ಮುಸ್ಲಿಮ್ ಲೀಗ್ ನಾಯಕರ ಆಸ್ತಿ ಮುಟ್ಟುಗೋಲು

ಕಾಸರಗೋಡು: ಫ್ಯಾಶನ್‌ ಗೋಲ್ಡ್‌ ಠೇವಣಿ ವಂಚನೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಮುಸ್ಲಿಂ ಲೀಗ್‌ ನಾಯಕರಾದ ಚಂದೇರದ ಪೂಕೋಯ ತಂಙಳ್‌, ಮಾಜಿ ಶಾಸಕ ಎಂ.ಸಿ. ಖಮರುದ್ದೀನ್‌ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.


ಅನಿಯಂತ್ರಿತ ಠೇವಣಿ ಯೋಜನೆ ನಿಷೇಧ ಕಾನೂನು ಪ್ರಕಾರ ಹೊಣೆಗಾರಿಕೆಯುಳ್ಳ ರಾಜ್ಯ ಮಟ್ಟದ ಅಧಿಕಾರಿಯಾದ ರಾಜ್ಯ ಫಿನಾನ್ಸ್‌ ಸೆಕ್ರೆಟರಿ ಸಂಜಯ್‌ಎಂ. ಕೌಲ್‌ ಅವರು ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಆದೇಶ ಹೊರಡಿಸಿದ್ದಾರೆ. ಪ್ರಕರಣದ ತನಿಖೆಗೆ ಮೇಲ್ನೋಟ ವಹಿಸುವ ಕಣ್ಣೂರು ಕ್ರೈಂ ಬ್ರ್ಯಾಂಚ್‌ ಎಸ್‌ಪಿ ಪಿ.ವಿ. ಸದಾನಂದನ್‌ ಅವರ ವರದಿಯ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ.


ಕಂಪೆನಿಯ ಚೇರ್ಮನ್‌ ಆಗಿರುವ ಖಮರುದ್ದೀನ್‌, ಪೂಕೋಯ ತಂಙಳ್‌ ಅವರ ಹೆಸರಿನಲ್ಲಿ ಪಯ್ಯನ್ನೂರು ನಗರದಲ್ಲಿ ಕಾರ್ಯಾಚರಿಸುತ್ತಿರುವ ನಾಲ್ಕು ಕೊಠಡಿಗಳನ್ನೊಳಗೊಂಡ ಫ್ಯಾಶನ್‌ ಆರ್ನಮೆಂಟ್‌ ಜ್ಯುವೆಲ್ಲರಿ ಕಟ್ಟಡ ಹಾಗೂ ಬೆಂಗಳೂರು ಸಿಲಿಕುಂಡ ವಿಲೇಜ್‌ನಲ್ಲಿ ಪೂಕೋಯ ತಂಙಳ್‌ ಹೆಸರಿನಲ್ಲಿರುವ 1 ಎಕ್ರೆ ಭೂಮಿ ಮುಟ್ಟುಗೋಲು ಹಾಕಿಕೊಂಡ ಸೊತ್ತುಗಳಲ್ಲಿ ಒಳಗೊಂಡಿದೆ

ಡಾ. ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪುತ್ತೂರು, ಬೆಳ್ತಂಗಡಿ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು

Posted by Vidyamaana on 2023-12-26 16:47:48 |

Share: | | | | |


ಡಾ. ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪುತ್ತೂರು, ಬೆಳ್ತಂಗಡಿ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು

ಪುತ್ತೂರು: ಶ್ರೀರಂಗಪಟ್ಟಣದಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪದಡಿಯಲ್ಲಿ ಆರ್ ಎಸ್‌ ಎಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಮೂರು  ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಾಗಿವೆ.ವುಮೆನ್ ಇಂಡಿಯಾ ಮೂವ್ ಮೆಂಟ್ ನಿಂದ ಸಂಘಟನೆಯಿಂದ ಪುತ್ತೂರು ನಗರ ಹಾಗೂ ಉಪ್ಪಿನಂಗಡಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪುತ್ತೂರು ನಗರ ಠಾಣೆಯಲ್ಲಿ ವುಮೆನ್ ಇಂಡಿಯಾ ಮೂವ್ ಮೆಂಟ್

ಸಂಘಟನೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷೆ ಝಾಹಿದಾ ಸಾಗರ್ ಮತ್ತು ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಕಾರ್ಯದರ್ಶಿ ಸೌಧ ಮಠ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ WIM ಬೆಳ್ತಂಗಡಿ ಕ್ಷೇತ್ರ ಸಮಿತಿ ಸದಸ್ಯರಾದ ಆಶಿಕಾ, ಅಝೀನಾ ಚಾರ್ಮಾಡಿ, ಸಾಹಿನಾ, ಆಯಿಷಾ, ಮರಿಯಮ್ಮ ದೂರು ನೀಡಿದ್ದಾರೆ.


ಮಂಡ್ಯ ಜಿಲ್ಲೆಯಲ್ಲಿ ನಡೆದ ಸಮಾವೇಶದಲ್ಲಿ  ಉದ್ದೇಶಪೂರ್ವಕವಾಗಿ ಮಹಿಳೆಯರ ಅವಹೇಳನ ಮಾಡಿರುವ ಆರೋಪದಡಿಯಲ್ಲಿ ದೂರು ನೀಡಲಾಗಿದೆ.


ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಭಾನುವಾರ ನಡೆದಿದ್ದ ಹನುಮ ಸಂಕೀರ್ತನಾ ಯಾತ್ರೆಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾಡಿದ್ದ ಭಾಷಣ ವಿವಾದಕ್ಕೆಡೆಯಾಗಿತ್ತು.



Leave a Comment: