ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಸುದ್ದಿಗಳು News

Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23

Share: | | | | |


ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”

ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.

ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.

ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.

ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!

ಡಾ. ಶಿವರಾಮ ಭಟ್ ಗುರು:

ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ‌. ಶಿವರಾಮ ಭಟ್ ಎಂದು ನಂಬಿದ್ದರು.

ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!

ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.

 Share: | | | | |


ಇಂದು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರಿಂದ ಪುತ್ತೂರಿನಲ್ಲಿ ಬೃಹತ್ ರೋಡ್ ಶೋ -ಮತಯಾಚನೆ

Posted by Vidyamaana on 2023-05-08 01:32:03 |

Share: | | | | |


ಇಂದು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರಿಂದ ಪುತ್ತೂರಿನಲ್ಲಿ ಬೃಹತ್ ರೋಡ್ ಶೋ -ಮತಯಾಚನೆ

ಪುತ್ತೂರು: ಪ್ರತಿಯೊಬ್ಬ ಕಾರ್ಯಕರ್ತನೂ ನಮ್ಮ ಸ್ಟಾರ್ ಪ್ರಚಾರಕ ಎಂಬ ಘೋಷವಾಕ್ಯದೊಂದಿಗೆ ಮೇ 8ರಂದು ಮಧ್ಯಾಹ್ನ ಗಂಟೆ 1ರಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರಿಂದ ಕಾರ್ಯಕರ್ತರೊಂದಿಗೆ ಬೊಳುವಾರುನಿಂದ ದರ್ಬೆ ವೃತ್ತದ ತನಕ ಬೃಹತ್ ರೋಡ್ ಶೋ ಮತ್ತು ಮತಯಾಚನೆ ನಡೆಯಲಿದೆ.

ನಮ್ಮ ಚಿಹ್ನೆ ಬ್ಯಾಟ್ ಎಂಬ ಘೋಷಣೆಯೊಂದಿಗೆ ಹಿಂದುತ್ವಕ್ಕಾಗಿ ಕಾರ್ಯಕರ್ತರ ಗೆಲುವಾಗಲಿ ಎಂದು ಮಹಾಸಂಗಮ ರೋಡ್ ಶೋ ನಡೆಯಲಿದೆ.ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ರೋಡ್ ಶೋದಲ್ಲಿ ಭಾಗವಹಿಸುವಂತೆ ಅವರ ಬೆಂಬಲಿಗರು ವಿನಂತಿಸಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ಮಳೆ ಹಾನಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ

Posted by Vidyamaana on 2023-07-06 07:04:55 |

Share: | | | | |


ಕರಾವಳಿ ಜಿಲ್ಲೆಗಳಲ್ಲಿ ಮಳೆ ಹಾನಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ

ಬೆಂಗಳೂರು: ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿ ಸಂಭವಿಸಿದ್ದು ಕೂಡಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಮಂಕಾಳ ವೈದ್ಯ ಅವರಿಗೆ ಸಿಎಂ ಸೂಚನೆ ನೀಡಿದ್ದಾರೆ.


ಮಳೆ ಹಾನಿ ಕುರಿತು ಮುಖ್ಯ ಕಾರ್ಯದರ್ಶಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಪರಿಹಾರ ಕಾಮಗಾರಿಗಳಿಗೆ ಅಧಿಕಾರಿಗಳನ್ನು ತುರ್ತಾಗಿ ಸಜ್ಜುಗೊಳಿಸುವಂತೆ ಆದೇಶಿಸಿದ್ದಾರೆ.

ನಾನು ರಾಜಕೀಯಕ್ಕೆ ಬಂದಿರುವುದು ಬಡವರ ಸೇವೆ ಮಾಡಲು:ಅಶೋಕ್ ರೈ

Posted by Vidyamaana on 2023-05-03 10:05:42 |

Share: | | | | |


ನಾನು ರಾಜಕೀಯಕ್ಕೆ ಬಂದಿರುವುದು ಬಡವರ ಸೇವೆ ಮಾಡಲು:ಅಶೋಕ್ ರೈ

ಪುತ್ತೂರು: ನಾನು ರಾಜಕೀಯಕ್ಕೆ ಬಂದ ಮೇಲೆ ಯಾರನ್ನೂ ವೈಯುಕ್ತಿಕವಾಗಿ ದೂಷಿಸುವ ಕೆಲಸವನ್ನು ಮಾಡಿಲ್ಲ, ಈಗಲೂ ಮಾಡಿಲ್ಲ, ಮುಂದೆಯೂ  ಮಾಡುವುದಿಲ್ಲ, ನಾನು ರಾಜಕೀಯಕ್ಕೆ ಬಂದಿರುವುದು ಬಡವರ ಸೇವೆ ಮಾಡಲು ಕ್ಷೆತ್ರವನ್ನು ಅಭಿವೃದ್ದಿ ಮಡುವುದಕ್ಕೋಸ್ಕರವಾಗಿದ್ದು ನಾನು ಮಾಡಿದ ಭಾಷಣವನ್ನು ತಿರುಚುವ ಕೆಲಸವನ್ನು ಬಿಜೆಪಿಗರು ತೆರೆಮರೆಯಲ್ಲಿ ಮಾಡುತ್ತಿದ್ದು ನೀವು ಆ ಕೆಲಸವನ್ನು ಬಿಟ್ಟು ನೀವು ಅಭಿವೃದ್ದಿ ಕೆಲಸ ಮಡಿದ್ದರೆ ಅದನ್ನು ಚರ್ಚಿಸುವ ಬನ್ನಿ ಎಂದು ಬಿಜೆಪಿಗೆ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಸವಾಲು ಹಾಕಿದ್ದಾರೆ.

ವಿಟ್ಲದ ಚಂದಳಿಕೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಪುತ್ತೂರಿನಲ್ಲಿ ಕಳೆದ ಐದು ವರ್ಷದಿಂದ ಯಾವುದೇ ಅಭಿವೃದ್ದಿ ಕೆಲಸಗಳು ನಡೆದಿಲ್ಲ. ಕಳೆದ ಚುನಾವಣೆಯ ಸಮಯದಲ್ಲಿ ಬಿಜೆಪಿ ನೀಡಿದ ಆಶ್ವಾಸನೆ ಈಡೇರಿಸಿಲ್ಲ. ಪುತ್ತೂರು ನಗರದಲ್ಲಿ ಒಳಚರಂಡಿ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು ಮಾಡಿಲ್ಲ, ಪುತ್ತೂರಿನಲ್ಲಿ ರಿಂಗ್ ರೋಡ್ ಮಾಡುವುದಾಗಿ ಹೇಳಿದ್ದರು, ಬ್ರಹ್ಮನಗರದಲ್ಲಿ ಫ್ಲ್ಯಾಟ್ ನಿರ್ಮಿಸಿವುದಾಗಿ ಹೇಳಿದ್ದರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ರೂಪಿಸುವುದಾಗಿ ಹೇಳಿದ್ದರು, ವಿಟ್ಲದಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು, ಉಪ್ಪಿನಂಗಡಿಯಲ್ಲಿ ಹೈಟೆಕ್ ಬಸ್ ನಿಲ್ದಾಣ ಮಾಡುವುದಾಗಿ ಮಾತುಕೊಟ್ಟಿದ್ದರು, ಮನೆ ಇಲ್ಲದ ಬಡವರಿಗೆ ಮನೆ ನಿರ್ಮಾಣ ಮಾಡುವುದಾಗಿ ಹೇಳಿದ್ದರು ಇದರಲ್ಲಿ ಯಾವುದನ್ನಾದರೂ ಮಾಡಿದ್ದಾರ? ಎಂದು ಪ್ರಶ್ನಿಸಿದ ಅಶೋಕ್ ರೈ ರಸ್ತೆಗೆ ಅಷ್ಟು ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಫ್ಲೆಕ್ಸ್ ಹಾಕಿಸಿ ಕಳಪೆ ಕಾಮಗಾರಿ ನಡೆಸಿ ಅದರ ಮೂಲಕ ೬೦ % ಕಮಿಷನ್ ಹೊಡೆದದ್ದನ್ನು ಬಿಟ್ಟರೆ ಏನೂ ಮಾಡಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ವರ್ಷಕ್ಕೆ ನೂರಾರು ಮನೆಗಳನ್ನು ಬಡವರಿಗೆ ನೀಡಲಾಗುತ್ತಿತ್ತು ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮನೆ ನೀಡಿಲ್ಲ. ಶಾಲಾ ಮಕ್ಕಳ ಶೂ ಭಾಗ್ಯ, ಕ್ಷೀರ ಭಾಗ್ಯ, ಮೊಟ್ಟೆ ಭಾಗ್ಯ , ಇಂದಿರಾ ಕ್ಯಾಂಟೀನ್ ಎಲ್ಲವನ್ನೂ ಬಂದ್ ಮಡಿದ್ದೇ ಬಿಜೆಪಿ ಸರಕಾರದ ಸಾಧನೆಯಾಗಿದೆ. ಕಾಂಗ್ರೆಸ್ ಸರಕಾರ ಬಡವರಿಗೆ ನೆರವು ನೀಡುವ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದು ಅದೆಲ್ಲವನ್ನೂ ಬಿಜೆಪಿ ಕೈ ಬಿಟ್ಟು ಕೇವಲ ಭಾಷಣದಲ್ಲಿ ಮಾತ್ರ ಬಡವರ ಬಾಯಿಗೆ ಸಿಹಿ ಹಂಚುವ ಕೆಲಸವನ್ನು ಮಾಡಿದೆ ಎಂದು ಅಶೋಕ್ ರೈ ಹೇಳಿದರು. ವೇದಿಕೆಯಲ್ಲಿ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಎಂ ಎಸ್ ಮಹಮ್ಮದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಗಿಡನೆಡುವುದು ಮಾತ್ರವಲ್ಲ ಅದನ್ನು ಪೋಷಣೆ ಮಾಡುವ ಜವಾಬ್ದಾರಿಯೂ ಇದೆ: ಶಾಸಕ ಅಶೋಕ್ ರೈ

Posted by Vidyamaana on 2024-06-24 13:44:56 |

Share: | | | | |


ಗಿಡನೆಡುವುದು ಮಾತ್ರವಲ್ಲ ಅದನ್ನು ಪೋಷಣೆ ಮಾಡುವ ಜವಾಬ್ದಾರಿಯೂ ಇದೆ: ಶಾಸಕ ಅಶೋಕ್ ರೈ

ಪುತ್ತೂರು: ಪ್ರತೀ ಮಳೆಗಾಲದಲ್ಲಿ ವನಮಹೋತ್ಸವ ಬಹಳ ಅಬ್ನರದಿಂದ ಆಚರಣೆ ಮಾಡುತ್ತೇವೆ, ಸಿಕ್ಕ ಸಿಕ್ಕಲ್ಲೆಲ್ಲ ಗಿಡ ನೆಡುತ್ತಾರೆ ಆದರೆ ಅದು ನೆಟ್ಟ ಬಳಿಕ ಏನಾಗಿದೆ ಎಂದು ನೋಡಬೇಕಾದ ಅಥವಾ ಅದನ್ನು ಆರೈಕೆ ಮಾಡಬೇಕಾದ ಜವಾವ್ದಾರಿಯೂ ನಮಗಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿಯಲ್ಲಿ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುವ‌ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.

ಪುತ್ತೂರು ಉಪ್ಪಿನಂಗಡಿ ರಸ್ತೆ ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ರಸ್ತೆ ಬದಿಗಳಲ್ಲಿಯೂ ಗಡಿಗಳನ್ನು ನೆಡುವಂತೆ ಸೂಚನೆ ನೀಡಿದ್ದೇನೆ. ಗಿಡಗಳನ್ನು ಪ್ರಾಣಿಗಳು ತಿನ್ನದಂತೆ ಅದಕ್ಕೆ ತಡೆ ಬೇಲಿ ಗೊಬ್ಬರ ಮತ್ತು ಕಾಲ ಕಾಲಕ್ಕೆ ಅದಕ್ಕೆ ಗೊಬ್ಬರವನ್ನೂ ಹಾಕುವಂತೆ ಸೂಚನೆ ನೀಡಿದ್ದೇನೆ. ಗಿಡ ನೆಟ್ಟು ಕಾರ್ಯಕ್ರಮ ಮಾಡಿ ಕೈ ತೊಳೆದುಕೊಂಡರೆ ಸಾಲದು ನೆಟ್ಟ ಗಿಡ ಮರವಾಗುವ ತನಕ ಅದನ್ನು ಉಳಿಸುವ ಜವಾಬ್ದಾರಿ ಇಲಾಖೆ ಮತ್ತು ಸಾರ್ವಜನಿಕರಿಗೆ. ರಸ್ತೆ ಬದಿ ನೆಟ್ಟ ಗಿಡ ನಮ್ಮ ಗಿಡ ಎಂಬ ಪ್ರೀತಿ ಸಾರ್ವಜನಿಕರಲ್ಲಿ‌ ಮೂಡಬೇಕಿದೆ.ಯಾವುದೇ ಕಾರಣಕ್ಕೂ ಸಾರ್ವಜನಿಕರು ನೆಟ್ಟ ಗಿಡವನ್ನು ಕೀಳಬೇಡಿ ಗಿಡಗಳು ಯಾರಿಗಾದರೂ ಬೇಕಾದಲ್ಲಿ ಇಲಾಖೆಯವರು ತಲುಪಿಸುವ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಿದರು.

ನಾಶವಾಗುತ್ತಿರುವ ಗಿಡಗಳ ಪೋಷಣೆ ಮಾಡಬೇಕು:

ಈಗಾಗಲೇ ಅನೇಕ ಕಾಟು ಹಣ್ಣಿನ ಗಿಡಗಳು‌ನಾಶವಾಗುತ್ತಿದೆ. ಕಾಟು ಮಾವು, ನೇರಳೆ ಸೇರಿದಂತೆ ಹೆಚ್ಚಿನ ಕಾಟು ಗಿಡಗಳು ವಿನಾಶದ ಅಂಚಿನಲ್ಲಿದೆ ಅದನ್ನು ರಸ್ತೆ ಬದಿಯಲ್ಲಿ ನೆಡುವ ಕೆಲಸ ನಡೆಯುತ್ತಿದೆ. ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ರೈ ಚಾರಿಟೇಬಲ್ ಟ್ರಸ್ಟ್ ವನಮಹೋತ್ಸವ ಕಾರ್ಯಕ್ರಮವನ್ನು ತಾಲೂಕಿನಾಧ್ಯಂತ ಜಂಟಿಯಾಗಿ  ನಡೆಸಲಾಗುತ್ತಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಈ ಬಾರಿ ವನಮಹೋತ್ಸವ ನಡೆಯಲಿದೆ ಎಂದು ಹೇಳಿದರು.

ಪ್ಯಾಲೆಸ್ತೀನ್ ಪರ ಘೋಷಣೆ ವಿವಾದ; ಪೊಳ್ಳು ಬೆದರಿಕೆಗೆ ಹೆದರುವುದಿಲ್ಲ: ಅಸಾದುದ್ದೀನ್ ಓವೈಸಿ

Posted by Vidyamaana on 2024-06-26 20:07:03 |

Share: | | | | |


ಪ್ಯಾಲೆಸ್ತೀನ್ ಪರ ಘೋಷಣೆ ವಿವಾದ; ಪೊಳ್ಳು ಬೆದರಿಕೆಗೆ ಹೆದರುವುದಿಲ್ಲ: ಅಸಾದುದ್ದೀನ್ ಓವೈಸಿ

ದೆಹಲಿ ಜೂನ್ 26: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಮಂಗಳವಾರ ಲೋಕಸಭೆಯಲ್ಲಿ ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಮಾಡಿದ ಹೇಳಿಕೆ ಭಾರೀ ರಾಜಕೀಯ ಗದ್ದಲಕ್ಕೆ ಕಾರಣವಾಗಿತ್ತು. ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಓವೈಸಿ ಅವರು ಪ್ಯಾಲೆಸ್ತೀನ್‌ನ ಯುದ್ಧ ಪೀಡಿತ ಪ್ರದೇಶಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಇದನ್ನು ಆಡಳಿತಾರೂಢ ಪಕ್ಷದ ಸಂಸದರು ಖಂಡಿಸಿದ್ದಾರೆ.

ಐದು ಬಾರಿ ಹೈದರಾಬಾದ್ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಓವೈಸಿ ಜೈ ತೆಲಂಗಾಣ ಮತ್ತು ಜೈ ಪ್ಯಾಲೆಸ್ತೀನ್ ಘೋಷಣೆಗಳನ್ನು ಕೂಗಿದ್ದರು. ಈ ಘೋಷಣೆಗೆ ಆಕ್ರೋಶ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ, ಓವೈಸಿ ಇಂಥಾ ಪೊಳ್ಳು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ನನಗೂ ಸಂವಿಧಾನದ ಬಗ್ಗೆ ಸ್ವಲ್ಪ ತಿಳಿದಿದೆ, ಈ ಪೊಳ್ಳು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಓವೈಸಿ ಹೇಳಿದ್ದಾರೆ.

ಅಸಾದುದ್ದೀನ್ ಓವೈಸಿ ಟ್ವೀಟ್

ತಂಗಿಯನ್ನು ಕಾಮಕ್ಕೆ ಬಳಸಿಕೊಂಡ ಗಂಡ: ಸೇಡು ತೀರಿಸಿಕೊಳ್ಳಲು ಪತ್ನಿ ಮಾಡಿದ್ದೇನು ಗೊತ್ತಾ..?

Posted by Vidyamaana on 2024-02-04 09:58:00 |

Share: | | | | |


ತಂಗಿಯನ್ನು ಕಾಮಕ್ಕೆ ಬಳಸಿಕೊಂಡ ಗಂಡ: ಸೇಡು ತೀರಿಸಿಕೊಳ್ಳಲು ಪತ್ನಿ ಮಾಡಿದ್ದೇನು ಗೊತ್ತಾ..?

ಬ್ರಝಿಲ್ :15 ವರ್ಷದ ಬಾಲಕಿಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡ ಪತಿ ವಿರುದ್ಧ ಪತ್ನಿ ಮಾರಣಾಂತಿಕ ಹಲ್ಲೆ ಮಾಡಿದ್ದಾಳೆ. ಗಂಡನ ಕೈ ಕಾಲು ಕಟ್ಟಿ ಹಾಕಿದ ಪತ್ನಿ, ಒಂದೇ ಎಟಿನಲ್ಲಿ ಗಂಡನ ಮರ್ಮಾಂಗ ಕತ್ತರಿಸಿದ್ದಾಳೆ. ಬಳಿಕ ಟಾಯ್ಲೆಟ್‌ಗೆ ಹಾಕಿ ಫ್ಲಶ್ ಮಾಡಿಬಿಟ್ಟಿ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ.ಆಯಟಿಬಯಾ ನಿವಾಸಿಯಾಗಿರುವ 39 ವರ್ಷದ ಪತಿಯ ಸ್ಥಿತಿ ಚಿಂತಾಜನಕವಾಗಿದೆ.ಇತ್ತ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. 


ಪತಿ ಹಾಗೂ ಪತ್ನಿ ಇಬ್ಬರು ಉದ್ಯೋಗ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಪತಿಯ ವರ್ತನೆಗಳು ಅನುಮಾನ ತರಿಸಿತ್ತು. ಕೆಲ ವಿಚಾರಗಳನ್ನು ತನ್ನಿಂದ ಮುಚ್ಚಿಡುತ್ತಿರುವ ಕುರಿತು ಅನುಮಾನಪಟ್ಟಿದ್ದಾಳೆ. ಇತ್ತ ಪತಿ ಕೆಲದಿಂದ ಬೇಗನೆ ಮನೆಗೆ ಬರುವುದು, ಕೆಲ ದಿನ ಕಲಸಕ್ಕೆ ರಜೆ ಹಾಕುವುದು ಸಾಮಾನ್ಯವಾಗಿತ್ತು. ಬರು ಬರುತ್ತಾ ಪತಿಯ ನಡೆ ಅನುಮಾನ ಹೆಚ್ಚಿಸಿದೆ.


ಪತಿಯ ಅಸಲಿ ಕತೆ ಪತ್ತೆ ಹಚ್ಚಳು ಪತ್ನಿ ನಿರ್ಧರಿಸಿದ್ದಾಳೆ. ಕೆಲಸಕ್ಕೆಂದು ತೆರಳಿದ ಪತಿಯನ್ನು ಹಿಂಬಾಸಿದ ಪತ್ನಿಗೆ ಅಚ್ಚರಿಯಾಗಿದೆ. ತನ್ನ 15 ವರ್ಷದ ತಂಗಿಯನ್ನು ಪುಸಲಾಯಿಸಿ, ಬೆದರಿಸಿ ಕಾಮಕ್ಕೆ ಬಳಸಿಕೊಂಡಿರುವುದು ಪತಿಗೆ ಗೊತ್ತಾಗಿದೆ. ಒಂದು ದಿನ ರೆಡ್ ಹ್ಯಾಂಡ್‌ಗಿ ತನ್ನ 15 ವರ್ಷದ ತಂಗಿ ಜೊತೆ ಮಲಗಿರುವಾಗಲೇ ಪತಿಯ ಕಾಮದಾಟವನ್ನು ಬಯಲು ಮಾಡಿದ್ದಾಳೆ. ಪತಿಯ ಎರಡು ಕೈ ಹಾಗೂ ಕಾಲುಗಳನ್ನು ಕಟ್ಟಿಹಾಕಿದ ಪತಿ ಮನಬಂದಂತೆ ಥಳಿಸಲು ಆರಂಭಿಸಿದ್ದಾಳೆ. ಆದರೆ ಇಷ್ಟಕ್ಕೆ ಕೋಪ ತಣ್ಣಗಾಗಲಿಲ್ಲ. ನೇರವಾಗಿ ಅಡುಮನೆಯಿಂದ ಚಾಕು ತಂದ ಪತ್ನಿ, ಪತಿಯ ಮರ್ಮಾಂಗವನ್ನೇ ಒಂದೇ ಏಟಿನಲ್ಲಿ ಕತ್ತರಿಸಿದ್ದಾಳೆ. ಬಳಿಕ ಮರ್ಮಾಂಗವನ್ನು ಟಾಯ್ಲೆಟ್‌ನಲ್ಲಿ ಬಿಸಾಡಿ ನೀರು ಹಾಕಿದ್ದಾಳೆ.


ಈ ದಾಳಿ ಬಳಿಕ ಪತ್ನಿ ನೇರವಾಗಿ ಮನೆಯಿಂದ ಹೊರಟು ಹೋಗಿದ್ದಾಳೆ. ಇತ್ತ ಚೀರಾಟ ಕೇಳಿ ಕೆಲ ದೂರದಲ್ಲಿರವ ನೆರೆಮನೆಯವರು ಆಗಮಿಸಿ ಈತನನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಇತ್ತ ಪತ್ನಿ ಪೊಲೀಸ್ ಠಾಣೆಗೆ ತೆರಳಿದ್ದಾಳೆ. ಪೊಲೀಸ್ ಠಾಣೆಗೆ ತೆರಳಿದ ಪತ್ನಿ, ಶುಭ ಸಂಜೆ ಆಫೀಸರ್, ನನ್ನ ಕುರಿತು ಹೇಳಿಕೊಳ್ಳಲು ಇಲ್ಲಿಗೆ ಆಗಮಿಸಿದ್ದೇನೆ. ನನ್ನ 15 ವರ್ಷದ ತಂಗಿ ಜೊತೆ ಮಲಗಿದ ಪತ್ನಿಯ ಮರ್ಮಾಂಗವನ್ನು ಕತ್ತರಿಸಿದ್ದೇನೆ ಎಂದಿದ್ದಾಳೆ. ಮಹಿಳೆಯನ್ನು ವಶಕ್ಕೆ ಪಡೆದು ಪೊಲೀಸರು ಈಕೆಯ ಪತಿಯ ಮಾಹಿತಿ ಪಡೆದು ಆಸ್ಪತ್ರೆಗೆ ತೆರಳಿದ್ದಾರೆ.ಪತಿ ಸ್ಥಿತಿ ಚಿಂತಾಜನಕವಾಗಿದೆ. ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.



Leave a Comment: