ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ಚಾಲಕನ ನಿಯಂತ್ರಣ ತಪ್ಪಿ ಕೋಳಿ ಸಾಗಾಟದ ಟೆಂಪೊ ಪಲ್ಟಿ; ಚಾಲಕ ಸೇರಿದಂತೆ ಮತ್ತೋರ್ವ ಅಪಾಯದಿಂದ ಪಾರು

Posted by Vidyamaana on 2023-12-01 15:59:59 |

Share: | | | | |


ಚಾಲಕನ ನಿಯಂತ್ರಣ ತಪ್ಪಿ ಕೋಳಿ ಸಾಗಾಟದ ಟೆಂಪೊ ಪಲ್ಟಿ; ಚಾಲಕ ಸೇರಿದಂತೆ ಮತ್ತೋರ್ವ ಅಪಾಯದಿಂದ ಪಾರು

ವಿಟ್ಲ: ಪಡೂರು ಗ್ರಾಮದ ಕಡಂಬು ಸಮೀಪದ ರಾದುಕಟ್ಟೆ ಎಂಬಲ್ಲಿ ಕೋಳಿ ಸಾಗಾಟದ ಟೆಂಪೊ ಒಂದು ಪಲ್ಟಿಯಾದ ಘಟನೆ ನಡೆದಿದೆ.


ಸಾಲೆತ್ತೂರು ಕಡೆಗೆ ತಮಿಳುನಾಡು ಗಡಿಭಾಗದಿಂದ ವಿಟ್ಲ ಮೂಲಕ ಕೋಳಿ ಸಾಗಾಟ ಮಾಡುತ್ತಿದ್ದ ಟೆಂಪೊ ಕಡಂಬು ಸಮೀಪದ ರಾದುಕಟ್ಟೆ ಎಂಬಲ್ಲಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.


ಇನ್ನು ವಾಹನದಲ್ಲಿದ್ದ ಚಾಲಕ ಸಹಿತ ಮತ್ತೋರ್ವ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಲಾರಿ ಪಲ್ಟಿಯಾದ ರಭಸಕ್ಕೆ ರಸ್ತೆಗೆ ಅಡ್ಡವಾಗಿ ಬಿದ್ದಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.

ದರ್ಬೆಯಲ್ಲಿ ಫಿಸಿಯೋಗ ಸೆಂಟರ್ ಮಾ‌ರ್ಚ್ 15ರಂದು ಶುಭಾರಂಭ

Posted by Vidyamaana on 2024-03-14 17:13:35 |

Share: | | | | |


ದರ್ಬೆಯಲ್ಲಿ ಫಿಸಿಯೋಗ ಸೆಂಟರ್ ಮಾ‌ರ್ಚ್ 15ರಂದು ಶುಭಾರಂಭ

ಪುತ್ತೂರು: ಇಲ್ಲಿನ ದರ್ಬೆ ಹಿತಾ ಆಸ್ಪತ್ರೆ ಮುಂಭಾಗದಲ್ಲಿ ಆಯು ಫಿಸಿಯೋಗ ಸೆಂಟರ್ ಮಾ. 15ರಂದು ಶುಭಾರಂಭಗೊಳ್ಳಲಿದೆ.

ಫಿಸಿಯೋ ಥೆರಪಿ, ಯೋಗ ಥೆರಪಿ, ಪಂಚಕರ್ಮ ಥೆರಪಿ, ಲೀಚ್ ಥೆರಪಿ, ಅಕ್ಯುಪಂಕ್ಚರ್ ಥೆರಪಿ, ಕಪ್ಪಿಂಗ್ / ಹಿಜಾಮ ಥೆರಪಿ, ಟ್ರಾಕ್ಷನ್ ಮಸಾಜ್, ವ್ಯಾಕ್ಸ್ ಥೆರಪಿ, ಕಾಸ್ಮೆಟಿಕ್ ಥೆರಪಿ, ಸೈಕ್ಯಾಟ್ರಿಕ್ ಕೌನ್ಸೆಲಿಂಗ್ ಮೊದಲಾದ ಸೌಲಭ್ಯಗಳನ್ನು ಸಂಸ್ಥೆ ನೀಡಲಿದೆ.

ಉತ್ತಮ ಸೇವೆಗಾಗಿ ಸಮರ್ಥ ಫ್ಯಾಕಲ್ಟಿಯನ್ನು ಸಂಸ್ಥೆ ಹೊಂದಿದೆ. ಡಾ. ಕ್ಷಮಾ ಕಶ್ಯಪ್, ಡಾ. ಶಿಲ್ಪ ಭಟ್ ಜಿ.ಎಸ್., ಡಾ. ಸುಶ್ಮಿತಾ ಎಂ.ಎಂ., ನಿತೇಶ್ ಕುಮಾರ್, ಎನ್. ಪೂಜಾ, ತುಳಸಿ ಎನ್., ಸಾನಿಯ ಯು. ಫ್ಯಾಕಲ್ಟಿಯಲ್ಲಿದ್ದಾರೆ.


ಪ್ರತಿದಿನ ಬೆಳಿಗ್ಗೆ 5.45ರಿಂದ 6.45ರವರೆಗೆ ಹಾಗೂ ಸಂಜೆ 5.45 6.45ರವರೆಗೆ ಯೋಗ ಕ್ಲಾಸ್ ಕೂಡ ನಡೆಯಲಿದೆ. ಇದರೊಂದಿಗೆ ಫಿಸಿಯೋ ಥೆರಪಿ ಹೋಮ್ ವಿಸಿಟ್ ಸೌಲಭ್ಯವೂ ಲಭ್ಯ ಎಂದು ಡಾ. ಪ್ರದೀಪ್ ಕುಮಾರ್ ಮಾಧ್ಯಮ ಪ್ರಕಟಣೆ ತಿಳಿಸಿದ್ದಾರೆ 

ಕುರಿಯ : ಪತಿ ಮನೆಯಲ್ಲೇ ನೇಣಿಗೆ ಶರಣಾದ ನವ ವಿವಾಹಿತೆ

Posted by Vidyamaana on 2024-02-05 17:03:20 |

Share: | | | | |


ಕುರಿಯ : ಪತಿ ಮನೆಯಲ್ಲೇ ನೇಣಿಗೆ ಶರಣಾದ ನವ ವಿವಾಹಿತೆ

ಪುತ್ತೂರು :ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಕ್ಕಾಜೆ ರಾಮ್ಮಣ್ಣ ಗೌಡ ಮತ್ತು ಪುಪ್ಪ ದಂಪತಿ ಪುತ್ರಿ ನವವಿವಾಹಿತೆ ಶೋಭಾ (26ವ.) ನೇಣು ಬಿಗಿದು ಪತಿ ಮನೆಯಲ್ಲಿ ಆತ್ಯಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಕುರಿಯ ಗಡಾಜೆ  ಫೆ.4 ರಂದು ನಡೆದಿದೆ.


 ಶೋಭಾ ರವರನ್ನು ಕಳೆದ ಒಂದೂವರೆ ತಿಂಗಳ ಹಿಂದೆ ಪುತ್ತೂರು  ಕುರಿಯ ಗಡಾಜೆ ರೋಹಿತ್ ರವರಿಗೆ ಮದುವೆ ಮಾಡಿ ಕೊಡಲಾಗಿತ್ತು.ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿಗೆ ಕಾರಣ ತನಿಖೆಯಿಂದ ತಿಳಿಯಬೇಕಾಗಿದೆ.

SDPI ಅಭ್ಯರ್ಥಿ ಶಾಫಿ ಬೆಳ್ಳಾರೆ ಪರ ಮಹಿಳಾ ಘಟಕದಿಂದ ಮತಯಾಚನೆ

Posted by Vidyamaana on 2023-04-27 15:59:41 |

Share: | | | | |


SDPI ಅಭ್ಯರ್ಥಿ ಶಾಫಿ ಬೆಳ್ಳಾರೆ ಪರ ಮಹಿಳಾ ಘಟಕದಿಂದ ಮತಯಾಚನೆ

ಪುತ್ತೂರು: ಕೂರ್ನಡ್ಕ ಪರಿಸರದಲ್ಲಿ SDPI ಅಭ್ಯರ್ಥಿ ಶಾಫಿ ಬೆಳ್ಳಾರೆ ಪರವಾಗಿ ಮಹಿಳಾ ಘಟಕದಿಂದ ಮತಯಾಚನೆ ನಡೆಯಿತು.

ಪ್ರತಿ ಮನೆಮನೆಗೆ ತೆರಳಿದ ಮಹಿಳಾ ಘಟಕದ ಪ್ರಮುಖರು ಅಭ್ಯರ್ಥಿ ಪರ ಬಿರುಸಿನ ಪ್ರಚಾರ ಕಾರ್ಯ ನಡೆಸಿದರು. ಶಾಫಿ ಬೆಳ್ಳಾರೆ ನಿರಪರಾಧಿಯಾಗಿದ್ದು, ಸುಳ್ಳು ಆರೋಪದ ಮೇಲೆ ಜೈಲಿಗಟ್ಟಲಾಗಿದೆ. ಆದ್ದರಿಂದ ನೊಂದವರ ಧ್ವನಿಯಾಗಿ ಮತ ಚಲಾಯಿಸುವಂತೆ ವಿನಂತಿಸಿಕೊಂಡರು.

ನಾಪತ್ತೆತೆಯಾಗಿದ್ದ ವಿದ್ಯಾರ್ಥಿ ಮಂಗಳೂರಿನಲ್ಲಿ ಪತ್ತೆ

Posted by Vidyamaana on 2024-01-23 15:50:14 |

Share: | | | | |


ನಾಪತ್ತೆತೆಯಾಗಿದ್ದ ವಿದ್ಯಾರ್ಥಿ ಮಂಗಳೂರಿನಲ್ಲಿ ಪತ್ತೆ


ಸುಳ್ಯ ; ಕಾಣಿಯೂರು ಖಾಸಗಿ   ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಲೋಕನಾಥ್ ಎಂಬವರ ಮಗ ಶ್ರೇಯಸ್   (15 ವ ) ಜ .23 ರಂದು ಬೆಳಿಗ್ಗೆ ನಾಪತ್ತೆಯಾಗಿದ್ದು, ಇದೀಗ ಮಂಗಳೂರಿನಲ್ಲಿ ಪತ್ತೆಯಾಗಿದ್ದಾನೆ.

ಬಾಲಕನನ್ನು ಬಂದರು ಪೊಲೀಸರು ಪತ್ತೆ ಹಚ್ಚಿದ್ದು, ಮನೆಯವರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಫಾಝಿಲ್ ಮಸೂದ್ ಜಲೀಲ್ ದೀಪಕ್ ರಾವ್ ಕುಟುಂಬಗಳಿಗೆ ಸರಕಾರದಿಂದ ತಲಾ 25 ಲಕ್ಷ ರೂ. ಪರಿಹಾರ: ಆದೇಶ

Posted by Vidyamaana on 2023-06-16 17:01:20 |

Share: | | | | |


ಫಾಝಿಲ್ ಮಸೂದ್ ಜಲೀಲ್ ದೀಪಕ್ ರಾವ್ ಕುಟುಂಬಗಳಿಗೆ ಸರಕಾರದಿಂದ ತಲಾ 25 ಲಕ್ಷ ರೂ. ಪರಿಹಾರ: ಆದೇಶ

ಮಂಗಳೂರು, ಜೂ.16: ದ.ಕ.ಜಿಲ್ಲೆಯಲ್ಲಿ ಮತೀಯ ದುಷ್ಕರ್ಮಿಗಳಿಂದ ಕೊಲೆಯಾದ ನಾಲ್ಕು ಮಂದಿಯ ಕುಟುಂಬಗಳಿಗೆ ಮುಖ್ಯಮಂತ್ರಿಯ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಕಳೆದ ವರ್ಷದ ಜುಲೈ 19ರಂದು ಬೆಳ್ಳಾರೆಯ ಮಸೂದ್, 28ರಂದು ಮಂಗಳಪೇಟೆಯ ಮುಹಮ್ಮದ್ ಫಾಝಿಲ್, ಕಳೆದ ವರ್ಷದ ಡಿಸೆಂಬರ್ 24ರಂದು ಕಾಟಿಪಳ್ಳದ ಅಬ್ದುಲ್ ಜಲೀಲ್ ಹಾಗೂ 2018ರ ಜನವರಿ 3ರಂದು ಕಾಟಿಪಳ್ಳದ ದೀಪಕ್ ರಾವ್ ಅವರನ್ನು ದುಷ್ಕರ್ಮಿಗಳು ಕೊಲೆಗೈದಿದ್ದರು ಎಂದು ಪ್ರಕರಣ ದಾಖಲಾಗಿತ್ತು.

ರಾಜ್ಯ ಪೊಲೀಸ್ ಇಲಾಖೆಯ ಮಹಾನಿರ್ದೇಶಕರು ಸರಕಾರದ ವತಿಯಿಂದ ಪರಿಹಾರ ಧನ ಮಂಜೂರು ಮಾಡು ವಂತೆ ಒಳಾಡಳಿತ ಇಲಾಖೆಯನ್ನು ಕೋರಿದ ಮೇರೆಗೆ ಈ ಪರಿಹಾರ ಘೋಷಿಸಲಾಗಿದ್ದು, ಜೂ.19ರಂದು ಪರಿಹಾರದ ಧನದ ಚೆಕ್ ಪಡೆಯುವಂತೆ ಸೂಚಿಸಲಾಗಿದೆ



Leave a Comment: