ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃವಿಯೋಗ

ಸುದ್ದಿಗಳು News

Posted by vidyamaana on 2024-06-30 19:31:43 |

Share: | | | | |


ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃವಿಯೋಗ

ಕೋಟ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ತಾಯಿ, ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್‍ತಿ (97) ವಯೋಸಹಜ ಅಸೌಖ್ಯದಿಂದ

ಜೂ.30ರಂದು ನಿಧನ ಹೊಂದಿದರು. ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ

 Share: | | | | |


ಮಂಗನ ಕಾಯಿಲೆಗೆ ಶಿವಮೊಗ್ಗದ ಯುವತಿ ಬಲಿ

Posted by Vidyamaana on 2024-01-09 09:59:52 |

Share: | | | | |


ಮಂಗನ ಕಾಯಿಲೆಗೆ ಶಿವಮೊಗ್ಗದ ಯುವತಿ ಬಲಿ

ಶಿವಮೊಗ್ಗ, ಜ 09: ಮಾರಣಾಂತಿಕ ರೋಗ ಮಂಗನ ಕಾಯಿಲೆಗೆ ಹೊಸನಗರ ತಾಲೂಕು ಅರಮನೆ ಕೊಪ್ಪ ಗ್ರಾಮದ 18 ವರ್ಷ ಯುವತಿ ಸಾವನ್ನಪ್ಪಿದ್ದಾರೆ.


ಕಳೆದ ವಾರ ಯುವರಿಗೆ ಜ್ವರ ಕಾಣಿಸಿಕೊಂಡಿತ್ತು. ನಂತರ ತೀವ್ರ ಜ್ವರಕ್ಕೆ ತುತ್ತಾಗಿದ್ದ ಯುವತಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಜ್ವರ ಕಡಿಮೆಯಾಗದ ಕಾರಣಕ್ಕೆ ಯುವತಿಯನ್ನು ಶುಕ್ರವಾರ ಮಣಿಪಾಲಕ್ಕೆ ಶಿಫ್ಟ್ ಮಾಡಲಾಗಿತ್ತು. ಯುವತಿಯು ಅರಮನೆಕೊಪ್ಪದ ನಿವಾಸಿಯಾಗಿದ್ದು, ಈಕೆಗೆ ಜ್ವರ ಬಂದು ಒಂದೆರಡು ದಿನವಾದರೂ ಕಡಿಮೆಯಾಗದ ಕಾರಣಕ್ಕೆ ಹೊಸನಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಂದಾಗ ತಪಾಸಣೆ ನಡೆಸಿ ವೈದ್ಯರು, ಅನುಮಾನಗೊಂಡು ರಕ್ತ ಪರೀಕ್ಷೆ ನಡೆಸಿದಾಗ ಯುವತಿಯ ರಕ್ತದಲ್ಲಿ ಪ್ಲೇಟ್​ಲೆಟ್ ಕಡಿಮೆಯಾಗಿತ್ತು. ಆರ್​ಟಿಪಿಸಿಆರ್ ನಲ್ಲಿ ಮೊದಲು ಪರೀಕ್ಷಿಸಿದಾಗ ನೆಗೆಟಿವ್ ಬಂದಿತ್ತು. ಮತ್ತೆರಡು ಬಾರಿ ಪರೀಕ್ಷಿಸಿದಾಗ ಕೆಎಫ್​ಡಿ(ಕ್ಯಾಸನೂರು ಫಾರೆಸ್ಟ್ ಡಿಸೀಸ್) ಪಾಸಿಟಿವ್ ಬಂದಿತ್ತು ಎಂದರು. ದುರಾದೃಷ್ಟವಶಾತ್​ ಯುವತಿ ಸೋಮವಾರ ಸಂಜೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.


ಯುವತಿಯಲ್ಲಿ ರಕ್ತದಲ್ಲಿ‌ ಪ್ಲೇಟ್ಲೆಟ್ ಕಡಿಮೆ ಆದಾಗ ಇವರಲ್ಲಿ ಮೆದುಳು ಜ್ವರ ಕಾಣಿಸಿಕೊಂಡಿತ್ತು. ಇದಕ್ಕೂ ಸಹ ಚಿಕಿತ್ಸೆ ಕೊಡಲಾಗಿತ್ತು. ಶಿವಮೊಗ್ಗದ ಆಸ್ಪತ್ರೆಯಲ್ಲಿ ಇದ್ದಾಗ ಯುವತಿಗೆ ರಕ್ತವನ್ನು ನೀಡಲಾಗಿತ್ತು. ಎಬಿಕೆ ಆರೋಗ್ಯ ಕಾರ್ಡ್​ ಮೂಲಕ ಯುವತಿಗೆ ಚಿಕಿತ್ಸೆಗೆ ಕೊಡಿಸಲಾಗಿತ್ತು. ಇನ್ನು ಅರಮನೆಕೊಪ್ಪ ಭಾಗದಲ್ಲಿ ಕೆಎಫ್​ಡಿಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಈ ಭಾಗದಲ್ಲಿ ಸುಮಾರು 10 ವರ್ಷಗಳ ನಂತರ ಕೆಎಫ್​ಡಿ ಕಾಣಿಸಿಕೊಂಡಿದೆ. ಈ ಮೂಲಕ ಕೆಎಫ್​ಡಿಗೆ ಮೊದಲ ಸಾವು ಇದಾಗಿದೆ ಎಂದು ತಿಳಿಸಿದರು.

ಟೊಮೆಟೋ ಅಂಗಡಿಗೆ ಬೌನ್ಸರ್ ನೇಮಿಸಿದ್ದ ವ್ಯಾಪಾರಿ ಅಜಯ್ ಫೌಜಿ ಬಂಧನ

Posted by Vidyamaana on 2023-07-12 17:06:37 |

Share: | | | | |


ಟೊಮೆಟೋ ಅಂಗಡಿಗೆ ಬೌನ್ಸರ್ ನೇಮಿಸಿದ್ದ ವ್ಯಾಪಾರಿ ಅಜಯ್ ಫೌಜಿ ಬಂಧನ

ವಾರಾಣಸಿ: ಟೊಮೆಟೋಗಳನ್ನು ರಕ್ಷಿಸಿಕೊಳ್ಳಲು ಬೌನ್ಸರ್ ಗಳನ್ನು ನೇಮಿಸಿದ್ದ ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಮಾಜವಾದಿ ಪಕ್ಷದ ಕಾರ್ಯಕರ್ತ ಅಜಯ್ ಫೌಜಿ ಎಂಬವರು ರವಿವಾರ ವಾರಣಾಸಿಯ ಲಂಕಾ ಪ್ರದೇಶದಲ್ಲಿ ತರಕಾರಿ ಮಾರಾಟಗಾರರ ಅಂಗಡಿಯೊಂದರಲ್ಲಿ ಎರಡು ಬೌನ್ಸರ್ ಗಳನ್ನು ನಿಯೋಜಿಸಿದ್ದರು. ಇದು ಟೊಮೆಟೊ ಬೆಲೆಯ ಬಗ್ಗೆ ಚೌಕಾಶಿ ಮಾಡುವಾಗ ಖರೀದಿದಾರರು ಆಕ್ರಮಣಕಾರಿ ವರ್ತನೆ ತೋರುವುದನ್ನು ತಡೆಯಲು ಕೈಗೊಂಡ ಕ್ರಮ ಎಂದು ಅವರು ಹೇಳಿದ್ದರು.

ಅಂಗಡಿ ಮಾಲೀಕ ರಾಜ್ ನಾರಾಯಣ್ ನನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗಿದ್ದು, ನಾಟಕೀಯ ಪ್ರತಿಭಟನೆ ನಡೆಸಿದ ಅಜಯ್ ಫೌಜಿ ಹಾಗೂ ಇಬ್ಬರು ಬೌನ್ಸರ್ ಗಳು ಪರಾರಿಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ನಾರಾಯಣ್ ಮತ್ತು ವಿಕಾಸ್ ನನ್ನು ಐಪಿಸಿ ಸೆಕ್ಷನ್ 153 ಗಲಭೆಗೆ ಪ್ರಚೋದನೆ, 291 (ತಪ್ಪು ಪುನರಾವರ್ತನೆ) ಹಾಗೂ 505 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪಕ್ಷ ಬದಲಾದಂತೆ ಹಿಂದೂ ಉಲಿ ಯ ವೇಷವೂ ಬದಲಾಗುತ್ತದೆ ಕಾಂಗ್ರೆಸ್ ಕಿಡಿ

Posted by Vidyamaana on 2023-12-12 12:03:02 |

Share: | | | | |


ಪಕ್ಷ ಬದಲಾದಂತೆ ಹಿಂದೂ ಉಲಿ ಯ ವೇಷವೂ ಬದಲಾಗುತ್ತದೆ ಕಾಂಗ್ರೆಸ್ ಕಿಡಿ

ಬೆಂಗಳೂರು :ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಸ್ಲಿಂರೊಂದಿಗೆ ಹೊಂದಿರುವ ಸಂಬಂಧ, ವ್ಯವಹಾರದಲ್ಲಿನ ಪಾಲುದಾರಿಕೆ ಕುರಿತ ವಿವಿಧ ಫೋಟೋಗಳನ್ನು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಕಿಡಿಕಾರುತ್ತಿದೆ. ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಸಿಸ್ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಮುಸ್ಲಿಂ ಮೌಲ್ವಿ ತನ್ವಿರ್ ಪೀರಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಸ್ಲಿಂರೊಂದಿಗೆ ಹೊಂದಿರುವ ಸಂಬಂಧ, ವ್ಯವಹಾರದಲ್ಲಿನ ಪಾಲುದಾರಿಕೆ ಕುರಿತ ವಿವಿಧ ಫೋಟೋಗಳನ್ನು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಕಿಡಿಕಾರುತ್ತಿದೆ.ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶನಿವಾರ ಫೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್, ರಾಜಕೀಯ ಪಕ್ಷ ಬದಲಾದಂತೆ ಹಿಂದೂ ಉಲಿಯ ವೇಷವೂ ಬದಲಾಗುತ್ತಿದೆ ಎಂದು ಟೀಕಿಸಿದೆ.ಮುಸ್ಲಿಮರೊಂದಿಗೆ ವ್ಯಾಪಾರ, ವ್ಯವಹಾರ. ಮುಸ್ಲಿಮರೊಂದಿಗೆ ಬದುಕು. ಹೊರಗೆ ಮಾತ್ರ ಮುಸ್ಲಿಮರ ಮೇಲೆ ದ್ವೇಷ ಭಾಷಣ. ಬಸನಗೌಡ ಪಾಟೀಲ್ ಯತ್ನಾಳ್ ಅವರೇ, ಮುಸ್ಲಿಂ ಟೋಪಿಯಲ್ಲಿ ನೀವು ತುಂಬಾ ಚೆನ್ನಾಗಿ ಕಾಣ್ತಿದಿರಿ! ನೀವು ಮುಸ್ಲಿಮರೊಂದಿಗೆ ವ್ಯಾಪಾರ ಮಾಡಿಕೊಂಡು, ಜನತೆಗೆ ದ್ವೇಷ ತುಂಬುವ ನಿಮ್ಮ ಬೂಟಾಟಿಕೆಯನ್ನು ಇನ್ನಾದರೂ ಬಿಡಿ ಎಂದು ತಾಕೀತು ಮಾಡಿದೆ.

ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ: ಶೆಟ್ಟರ್ ಕ್ಷೇತ್ರಕ್ಕೆ ಹೊಸ ಮುಖ ; ರಾಮದಾಸ್ ಗೆ ಕೊಕ್

Posted by Vidyamaana on 2023-04-17 13:51:21 |

Share: | | | | |


ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ: ಶೆಟ್ಟರ್ ಕ್ಷೇತ್ರಕ್ಕೆ ಹೊಸ ಮುಖ ; ರಾಮದಾಸ್ ಗೆ ಕೊಕ್

ಬೆಂಗಳೂರು : ಬಹುನಿರೀಕ್ಷಿತ ಬಿಜೆಪಿಯ 10 ಅಭ್ಯರ್ಥಿಗಳ ಮೂರನೇ ಪಟ್ಟಿ ಸೋಮವಾರ ಸಂಜೆ ಬಿಡುಗಡೆಯಾಗಿದ್ದು , 224 ಕ್ಷೇತ್ರಗಳ ಪೈಕಿ ಶಿವಮೊಗ್ಗ ನಗರ ಮತ್ತು ಮಾನ್ವಿ ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಬಾಕಿ ಉಳಿದಿದೆ.ಜಗದೀಶ್ ಶೆಟ್ಟರ್ ಅವರು ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಮಹೇಶ್ ಟೆಂಗಿನಕಾಯಿ ಅವರಿಗೆ ಟಿಕೆಟ್ ನೀಡಲಾಗಿದೆ. ಮೈಸೂರಿನ ಕೆಆರ್ ಕ್ಷೇತ್ರದಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಟಿಕೆಟ್ ಕೈತಪ್ಪಿದ್ದು ಅಲ್ಲಿ ಶ್ರೀವತ್ಸ ಅವರಿಗೆ ಟಿಕೆಟ್ ನೀಡಲಾಗಿದೆ.ಅರವಿಂದ್ ಲಿಂಬಾವಳಿ ಅವರು ಪ್ರತಿನಿಧಿಸುತ್ತಿದ್ದ ಮಹದೇವಪುರ ಎಸ್ ಸಿ ಮೀಸಲು ಕ್ಷೇತ್ರದಲ್ಲಿ ಅವರ ಪತ್ನಿ ಮಂಜುಳಾ ಅವರಿಗೆ ನೀಡಲಾಗಿದೆ.

ವಿ.ಸೋಮಣ್ಣ ಅವರು ಪ್ರತಿನಿಧಿಸುತ್ತಿದ್ದ ಗೋವಿಂದರಾಜ ನಗರ ಕ್ಷೇತ್ರಕ್ಕೆ ಉಮೇಶ್ ಶೆಟ್ಟಿ ಅವರಿಗೆ ಟಿಕೆಟ್ ನೀಡಲಾಗಿದೆ. ನಾಗಠಾಣ ಎಸ್ ಸಿ ಮೀಸಲು ಕ್ಷೇತ್ರಕ್ಕೆ ಸಂಜೀವ ಐಹೊಳೆ, ಸೇಡಂಗೆ ರಾಜ್ ಕುಮಾರ್ ಪಾಟೀಲ್ , ಕೊಪ್ಪಳ ಕ್ಷೇತ್ರಕ್ಕೆ ಮಂಜುಳಾ ಅಮರೇಶ್ , ರೋಣಕ್ಕೆ ಕಳಕಪ್ಪ ಬಂಡಿ , ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ಬಿ.ರಾಮಣ್ಣ, ಹೆಬ್ಬಾಳ ಕ್ಷೇತ್ರದಲ್ಲಿ ಕಟ್ಟಾ ಜಗದೀಶ್ ಅವರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲಾಗಿದೆ.

ನಂದಾವರ : ಗುಡ್ಡ ಜರಿದು ಅವಘಡ ಮೃತ ಕುಟುಂಬಕ್ಕೆ 5ಲಕ್ಷ ಪರಿಹಾರ ಡಿ.ಸಿ.ಮುಲೈ ಮುಗಿಲನ್

Posted by Vidyamaana on 2023-07-07 07:18:18 |

Share: | | | | |


ನಂದಾವರ : ಗುಡ್ಡ ಜರಿದು ಅವಘಡ ಮೃತ ಕುಟುಂಬಕ್ಕೆ 5ಲಕ್ಷ ಪರಿಹಾರ ಡಿ.ಸಿ.ಮುಲೈ ಮುಗಿಲನ್

ಬಂಟ್ವಾಳ : ಮನೆಗೆ ಗುಡ್ಡ ಜರಿದು ಮಹಿಳೆಯೋರ್ವಳು ಮೃತಪಟ್ಟ ಸಜಿಪ ಮುನ್ನೂರು ಗ್ರಾಮದ ನಂದಾವರದ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಭೇಟಿ ನೀಡಿದ್ದಾರೆ 

ಅವಘಡ ಸಂಭವಿಸಿದ ಕುಟುಂಬಕ್ಕೆ ರೂ. ಐದು ಲಕ್ಷ ಪರಿಹಾರ ಮತ್ತು ಮನೆ ರಿಪೇರಿಗೆ 1.20 ಲಕ್ಷಪರಿಹಾರವನ್ನು ಸರಕಾರದಿಂದ ನೀಡುವ ಭರವಸೆ ನೀಡಿದರು.

https://vidyamaana.com/news/hill-collapses-on-house-woman-dies-young-woman-rescued



ಜೊತೆಗೆ ತಾಲೂಕಿನಲ್ಲಿ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ತಾಲುಕಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಹಶಿಲ್ದಾರ್ ಎಸ್.ವಿ.ಕೂಡಲಗಿ, ತಾ.ಪಂ. ಕಾರ್ಯ ನಿರ್ವಹಣಾ ಧಿಕಾರಿ ರಾಜಣ್ಣ , ಪಿಡಿಒ ಲಕ್ಷಣ್ ಮತ್ತು ಇಲಾಖಾ ಅಧಿಕಾರಿಗಳು  ಉಪಸ್ಥಿತರಿದ್ದರು.

ಮುಂಬೈ ಹೋರ್ಡಿಂಗ್‌ ದುರಂತ: ರಹಸ್ಯ ಕಾರ್ಯಾಚರಣೆ ನಡೆಸಿ ಆರೋಪಿಯ ಬಂಧಿಸಿದ ಪೊಲೀಸರು

Posted by Vidyamaana on 2024-05-17 22:41:35 |

Share: | | | | |


ಮುಂಬೈ ಹೋರ್ಡಿಂಗ್‌ ದುರಂತ: ರಹಸ್ಯ ಕಾರ್ಯಾಚರಣೆ ನಡೆಸಿ ಆರೋಪಿಯ ಬಂಧಿಸಿದ ಪೊಲೀಸರು

ಮುಂಬೈ ನಲ್ಲಿ ಜಾಹೀರಾತು ಫಲಕ ಬಿದ್ದು 16 ಜೀವಗಳನ್ನು ಬಲಿ ಪಡೆದಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮುಂಬೈನ ಘಾಟ್ಕೋಪರ್ ಹೋರ್ಡಿಂಗ್(Hoarding)​ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಮುಂಬೈನಲ್ಲಿ ಸೋಮವಾರ ಬೀಸಿದ ಬಿರುಗಾಳಿಗೆ ಘಾಟ್ಕೋಪರ್​ನ ಪೆಟ್ರೋಲ್​ ಬಂಕ್ ಮೇಲೆ ಬೃಹತ್ ಗಾತ್ರದ ಹೋರ್ಡಿಂಗ್​ ಬಿದ್ದಿತ್ತು. ಇದರ ಕೆಳಗೆ ಸಾಕಷ್ಟು ಮಂದಿ ಸಿಲುಕಿಕೊಂಡಿದ್ದರು. ಇವರ ರಕ್ಷಣೆಗೆ ಕೇಂದ್ರ ವಿಪತ್ತು ನಿರ್ವಹಣಾ ತಂಡ ಧಾವಿಸಿತ್ತು. ಸುಮಾರು 66 ಗಂಟೆಗಳ ಕಾರ್ಯಾಚರಣೆ ಗುರುವಾರ ಅಂತ್ಯಗೊಂಡಿದ್ದು, 16 ಮಂದಿ ಶವಗಳು ಪತ್ತೆಯಾಗಿದೆ.



Leave a Comment: