ಎಸ್ ಪಿ ಆವರಣದಲ್ಲೇ ಪತ್ನಿಯನ್ನು ಇರಿದು ಕೊಂದ ಪೊಲೀಸ್ ಕಾನ್‌ಸ್ಟೇಬಲ್

ಸುದ್ದಿಗಳು News

Posted by vidyamaana on 2024-07-01 12:44:53 |

Share: | | | | |


ಎಸ್ ಪಿ ಆವರಣದಲ್ಲೇ ಪತ್ನಿಯನ್ನು ಇರಿದು ಕೊಂದ ಪೊಲೀಸ್ ಕಾನ್‌ಸ್ಟೇಬಲ್

ಹಾಸನ: ಪೊಲೀಸ್‌ ಕಾನ್‌ಸ್ಟೇಬಲ್‌ (Police Constable) ಒಬ್ಬ ತನ್ನ ಪತ್ನಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ (SP) ಕಚೇರಿ ಆವರಣದಲ್ಲೇ ಇರಿದು (Stabbed) ಕೊಂದುಹಾಕಿದ (Murder Case) ಘಟನೆ ಹಾಸನದಲ್ಲಿ ನಡೆದಿದೆ.ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕಾನ್‌ಸ್ಟೇಬಲ್‌, ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ.

ಕಳೆದ ನಾಲ್ಕೈದು ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ನಡೆದಿತ್ತು. ಪೊಲೀಸ್ ಗಂಡನ ವಿರುದ್ಧ ದೂರು ನೀಡಲೆಂದು ಪತ್ನಿ ಮಮತಾ(37) ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿದ್ದರು. ಇದೇ ವೇಳೆ, ಹಿಂಬಾಲಿಸಿ ಬಂದಿದ್ದ ಲೋಕನಾಥ್ ಹಾಸನ ಎಸ್ಪಿ ಕಚೇರಿ ಎದುರಲ್ಲೇ ಪತ್ನಿಯ ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ.‌

ಮಹಿಳೆಯನ್ನು ಕೂಡಲೇ ಪೊಲೀಸರು ಆಸ್ಪತ್ರೆಗೆ ಒಯ್ದಿದ್ದು ಅಷ್ಟರಲ್ಲಿ ಸಾವು ಕಂಡಿದ್ದಾಳೆ.‌ ಆರೋಪಿ ಪತಿ ಲೋಕನಾಥ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 Share: | | | | |


ಮಲ್ಲಿಗೆ ಪ್ರಿಯೆ ಉಳ್ಳಾಲ್ತಿಗೆ ಚಿನ್ನದ ಮಲ್ಲಿಗೆ ಮೊಗ್ಗಿನ ಸರ, ರಜತ ಗಗ್ಗರ

Posted by Vidyamaana on 2024-05-27 22:17:01 |

Share: | | | | |


ಮಲ್ಲಿಗೆ ಪ್ರಿಯೆ ಉಳ್ಳಾಲ್ತಿಗೆ ಚಿನ್ನದ ಮಲ್ಲಿಗೆ ಮೊಗ್ಗಿನ ಸರ, ರಜತ ಗಗ್ಗರ

ಪುತ್ತೂರು: ಸೀಮೆಯೊಡತಿ, ಮಲ್ಲಿಗೆ ಪ್ರಿಯೆ, ಬಲ್ನಾಡ ಒಡತಿ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಂಡಿರುವ ಬಲ್ನಾಡು ಶ್ರೀ ಉಳ್ಳಾಲ್ತಿಗೆ ಬಂಗಾರ ಹಾಗೂ ಬೆಳ್ಳಿಯ ಆಭರಣ ಸಮರ್ಪಣೆಗೆ ಸಿದ್ಧತೆ ನಡೆಯುತ್ತಿದೆ.

ವರ್ಷಾವಧಿ ನಡೆಯುವ ನರ್ತನ ಸೇವೆಗೆ ಚಿನ್ನದ ಮಲ್ಲಿಗೆ ಮೊಗ್ಗಿನ ಸರ ಹಾಗೂ ಅಮ್ಮನವರ ಕಾಲಿಗೆ ರಜತ ಗಗ್ಗರ ಸಮರ್ಪಿಸಲು ಯೋಜನೆ ರೂಪಿಸಲಾಗಿದೆ. 2025ರ ಏಪ್ರಿಲ್ 28ರಂದು ಸಮರ್ಪಿಸಲು ಯೋಜಿಸಲಾಗಿದೆ.

ಪ್ರವೀಣ್​ ನೆಟ್ಟಾರು ಹತ್ಯೆ ಕೇಸ್: ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ಸೆರೆ

Posted by Vidyamaana on 2024-06-04 20:58:07 |

Share: | | | | |


ಪ್ರವೀಣ್​ ನೆಟ್ಟಾರು ಹತ್ಯೆ ಕೇಸ್: ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ಸೆರೆ

ನವದಹಲಿ : ವಿದೇಶಕ್ಕೆ ಹಾರಲು ಯತ್ನಿಸುತ್ತಿದ್ದ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ರಿಯಾಜ್ ಯೂಸಫ್ ಹಾರಳ್ಳಿ ಅಲಿಯಾಸ್ ರಿಯಾಜ್ ಬಂಧಿತ ಆರೋಪಿ. ರಿಯಾಜ್ ಯೂಸಫ್ ಹಾರಳ್ಳಿಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಎನ್‌ಐಎ ಮಂಗಳವಾರ ಬಂಧಿಸಿದೆ.

ನೆಟ್ಟಣಿಗೆ ಮುಡ್ನೂರು ಪ್ರೌಢ ಶಾಲೆಯಲ್ಲಿ ವಿವೇಕ ತರಗತಿ ಕೊಠಡಿ ಉದ್ಘಾಟನೆ

Posted by Vidyamaana on 2023-08-11 02:41:11 |

Share: | | | | |


ನೆಟ್ಟಣಿಗೆ ಮುಡ್ನೂರು ಪ್ರೌಢ ಶಾಲೆಯಲ್ಲಿ ವಿವೇಕ ತರಗತಿ ಕೊಠಡಿ ಉದ್ಘಾಟನೆ

ಪುತ್ತೂರು: ಸರಕಾರಿ ಶಾಲೆಗಳಲ್ಲಿನ ಕೊರತೆಗಳನ್ನು ನೀಗಿಸಿ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಸರಕರ ಒತ್ತು ನೀಡಲಿದ್ದು ಇದಕ್ಕಾಗಿ ಕೊರತೆ ಇರುವಲ್ಲಿ ಮೂಲಭೂತ ಸೌಕರ್ಯವನ್ನು ವೃದ್ದಿಸಲಾಗುವುದು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ನೆಟ್ಟಣಿಗೆ ಮುಡ್ನೂರು ಸರಕಾರಿ ಪ್ರೌಢ ಶಾಲೆಯಲ್ಲಿ ವಿವೇಕ ತರಗತಿ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು.

ಶಾಲೆಗಳಲ್ಲಿ ಕೊಠಡಿಯ ಕೊರತೆಯನ್ನು ಬಹುತೇಕ ಪರಿಹರಿಸಲಾಗಿದೆ, ಶಾಲಾ ಪ್ರಾರಂಭದ ವೇಳೆಯೇ ಶಿಕ್ಷಕರ ಕೊರತೆ ಇರುವಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ೧೩೫೦೦ ಶಿಕ್ಷಕರ ನೇಮಕಾತಿ ಶೀಘ್ರವೇ ಆಗಲಿದ್ದು ನ್ಯಾಯಾಲಯದಲ್ಲಿ ವಿಷಯ ಇತ್ಯರ್ಥವಾದ ಬಳಿಕ ಶಿಕ್ಷಕರ ನೇಮಕಾತಿಗೆ ಸರಕಾರ ಆದೇಶ ಹೊರಡಿಸಲಿದೆ ಎಂದು ಹೇಳಿದರು. ಸರಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ತರಬೇತಿ ಪಡೆದ ಶಿಕ್ಷಕರಿದ್ದಾರೆ ಈ ವಿಚಾರ ಬಹುತೇಕರಿಗೆ ಗೊತ್ತಿಲ್ಲ. ಶಿಕ್ಷಕ ಪದವಿ ಮಾಡಿದ ಬಳಿಕ ಅವರಿಗೆ ಉನ್ನತ ತರಬೇತಿಯನ್ನು ನೀಡುವ ಮೂಲಕ ಅವರನ್ನು ಶಿಕ್ಷಕ ವೃತ್ತಿಗೆ ಕಳುಹಿಸಲಾಗುತ್ತಿದೆ ಇದು ಸರಕಾರಿ ವ್ಯವಸ್ಥೆಯಲ್ಲಿ ಮಾತ್ರ ಕಾಣಲು ಸಾಧ್ಯವಾಗಿದೆ ಎಂದು ಹೇಳಿದರು. ವಾರದಲ್ಲಿ ೨೦ ಗಂಟೆ ಪ್ರತೀಯೊಬ್ಬ ಶಿಕ್ಷಕನೂ ಕಡ್ಡಾಯವಾಗಿ ಪಾಠ ಮಾಡಬೇಕಿದೆ, ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ತೆರಳಿ ಪ್ರತೀಯೊಬ್ಬ ಶಿಕ್ಷಕನೂ ಪಾಠ ಮಾಡಲು ತಯಾರಿರಬೇಕು ಎಂದು ಹೇಳಿದರು. ಗಡಿಗ್ರಾಮವಾದ ನೆಟ್ಟಣಿಗೆ ಮುಡ್ನೂರು ಪ್ರೌಢ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದು ಆಶಾದಾಯಕವಾಗಿದೆ ಎಂದು ಹೇಳಿದರು.

ಶಾಲೆಯ ಕಾರ್ಯಾಧ್ಯಕ್ಷರಾದ ಶ್ರೀರಾಂ ಪಕ್ಕಳ ಮಾತನಾಡಿ ನೆಟ್ಟಣಿಗೆ ಮುಡ್ನೂರು ಪ್ರೌಢ ಶಾಲೆಗೆ ತಾಲೂಕಿನಲ್ಲಿ ಅತ್ಯಂತ ಹೆಚ್ಚು ಜಮೀನು ಹೊಂದಿದೆ. ಇಲ್ಲಿ ಪ್ರೌಢ ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿದ್ದು ಗಡಿಗ್ರಾಮವಾದ ಈ ಪ್ರದೇಶದಲ್ಲಿ ಪಿಯು ಶಿಕ್ಷಣವನ್ನು ಪ್ರಾರಂಭಿಸುವ ಬಗ್ಗೆ ಮನವಿ ಮಾಡಿದರು.

ವೇದಿಕೆಯಲ್ಲಿ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಕಾಂಗ್ರೆಸ್ ಜಿಲ್ಲಾ ವಕ್ತಾರ ಮಹಮ್ಮದ್ ಬಡಗನ್ನೂರು, ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷರಾದ ರಮೇಶ್ ರೈ ಸಾಂತ್ಯ,  ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್, ಗ್ರಾಪಂ ಸದಸ್ಯರುಗಳಾದ ಲಲಿತ ಮೇನಾಲ, ಲಲಿತಾ ಸಾಂತ್ಯ, ಇಂದಿರಾ, ವೆಂಕಪ್ಪ ನಾಯ್ಕ, ಇಬ್ರಾಹಿಂ ,ರಾಮಮೇನಾಲ, ಸುಮಯ್ಯ ಅಝೀಝ್, ಪ್ರದೀಪ್ ರೈ ಕರ್ನೂರು,ಎಸ್‌ಡಿಎಂಸಿ ಸದಸ್ಯರುಗಳಾದ ಅಬ್ದುಲ್ ಖಾದರ್ ಸುರಳಿಮೂಲೆ, ವಿಕ್ರಂ ರೈ ಸಾಂತ್ಯಸೂಪಿ ವಾಟೆಡ್ಕ, ಮಹಮ್ಮದ್ ಪಳ್ಳತ್ತೂರು, ವಲಯ ಕಾಂಗ್ರೆಸ್ ಅಧ್ಯಕ್ಷ ಎನ್ ಮೂಸಾನ್ ,ಅಬೂ ಮೆನಾಲ, ಸುರೇಶ್ ಮೇನಾಲ, ಕೆ ಎಂ ಮೇನಾಲ, ವಿಜಯಾ ರೈ ಕರ್ನೂರು, ನಾರಾಯಣ ನಾಯ್ಕ ನಾಗನಡ್ಕ ಮತ್ತಿತರರು ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕರಾದ ಪ್ರೇಮ್‌ಕುಮಾರ್ ವಂದಿಸಿದರು.ಶಿಕ್ಷಕರಾರ ಯಶೋಧ, ಪುರುಷೋತ್ತಮ, ಉದಯ, ದೇವಿಪ್ರಕಾಶ್, ಇಂದಿರಾ ವಿವಿಧ ಕಾರ್ಯಕ್ರಮ ನಿರೂಪಿಸಿದರು.

ಅತಿಯಾಗಿ ಸೆಕ್ಸ್​​ಗೆ ಒತ್ತಾಯಿಸಿದಕ್ಕೆ ಇನ್​​ಸ್ಟಾ ಗೆಳತಿ ಕಥೆಯನ್ನೇ ಮುಗಿಸಿದ್ದ ಆರೋಪಿ ನವೀನ್ ಅರೆಸ್ಟ್

Posted by Vidyamaana on 2024-04-23 15:24:20 |

Share: | | | | |


ಅತಿಯಾಗಿ ಸೆಕ್ಸ್​​ಗೆ ಒತ್ತಾಯಿಸಿದಕ್ಕೆ ಇನ್​​ಸ್ಟಾ ಗೆಳತಿ ಕಥೆಯನ್ನೇ ಮುಗಿಸಿದ್ದ ಆರೋಪಿ ನವೀನ್ ಅರೆಸ್ಟ್

ಬೆಂಗಳೂರು : ರಾಜಧಾನಿ ಬೆಂಗಳೂರಿನ (Bengaluru) ಕೊಡಿಗೇಹಳ್ಳಿ ಒಂಟಿ ಮಹಿಳೆ (Single Women) ಹತ್ಯೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್ ಸಿಕ್ಕಿದ್ದು, ಮನೆಯಲ್ಲೇ ಮಹಿಳೆಯನ್ನು ಕೊಲೆ ಮಾಡಿ (Murder Case) ಎಸ್ಕೇಪ್ ಆಗಿದ್ದ ಆರೋಪಿಯನ್ನು ಪೊಲೀಸರು (Kodigenahalli Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೇರೋಹಳ್ಳಿ ಮೂಲದ ನವೀನ್ ಬಂಧಿತ ಆರೋಪಿಯಾಗಿದ್ದು, ಏಪ್ರಿಲ್ 19ನೇ ತಾರೀಖು 48 ವರ್ಷದ ಶೋಭಾ ಎಂಬ ಮಹಿಳೆಯ ಮೃತದೇಹ ನಗ್ನಸ್ಥಿತಿಯಲ್ಲಿ ಪತ್ತೆಯಾಗಿತ್ತು.


ಆರೋಪಿ ನವೀನ್​​ ಸಾಮಾಜಿಕ ಜಾಲತಾಣ ಇನ್​​ಸ್ಟಾದಲ್ಲಿ ಮೃತ ಮಹಿಳೆ ಶೋಭಾರನ್ನು ಪರಿಚಯ ಮಾಡಿಕೊಂಡಿದ್ದನಂತೆ. ಇಬ್ಬರ ನಡುವಿನ ಸ್ನೇಹ ಕೆಲ ದಿನಗಳ ಬಳಿಕ ಅನೈತಿಕ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ. ಕೊಲೆ ನಡೆದ ದಿನವೂ ಮಹಿಳೆ ಮನೆಗೆ ನವೀನ್​ ಬಂದಿದ್ದನಂತೆ. ಈ ವೇಳೆ ಅತಿಯಾಗಿ ಸೆಕ್ಸ್ ಗೆ ಒತ್ತಾಯಿಸುತ್ತಿದ್ದರಿಂದ ಬೇಸರಗೊಂಡು ಮಹಿಳೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿಯನ್ನ ಬಂಧಿಸಿರುವ ಕೊಡಿಗೇಹಳ್ಳಿ ಠಾಣೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಪುತ್ತೂರು : ಜಂ ಇಯ್ಯತುಲ್ ಉಲಾಮಾ ವತಿಯಿಂದ ಬೃಹತ್ ಮೌಲೀದ್‌ ಮಜ್ಲಿಸ್

Posted by Vidyamaana on 2023-10-08 13:32:04 |

Share: | | | | |


ಪುತ್ತೂರು : ಜಂ ಇಯ್ಯತುಲ್ ಉಲಾಮಾ ವತಿಯಿಂದ  ಬೃಹತ್ ಮೌಲೀದ್‌ ಮಜ್ಲಿಸ್

ಪುತ್ತೂರು: ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಪುತ್ತೂರು ತಾಲೂಕು ಸಮಿತಿಯಿಂದ ಬೃಹತ್ ಮೌಲೀದ್ ಮಜ್ಲಿಸ್ ಕಾರ್ಯಕ್ರಮ ಪುತ್ತೂರು ಬದ್ರಿಯಾ ಮಸೀದಿ ಸಭಾಂಗಣದಲ್ಲಿ ನಡೆಯಿತು.


  1. ಅಸಿಡಿಟಿಯ ಎದೆ ಉರಿಯನ್ನು ಮತ್ತು ಎದೆ ನೋವಿನ ಉರಿಯನ್ನು ಐಡೆಂಟಿಫೈ ಮಾಡೋದು ತುಂಬಾ ಸುಲಭ: ಡಾ. ಜೆ ಸಿ ಅಡಿಗ

ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಅಸೈಯದ್‌ ಅಹಮದ್ ಪೂಕೋಯ ತಂಙಳ್ ನೇತೃತ್ವ ವಹಿಸಿ ದುವಾಶೀರ್ವಚನ ನೀಡಿ ಮಾತನಾಡಿ ಮಿಲಾದುನ್ನೆಬಿಯ ಮಹತ್ವದ ಬಗ್ಗೆ ವಿವರಿಸಿದರು.ಯಾಹ್ಯಾ ತಂಙಳ್    ಪೋಳ್ಯ,ಪುತ್ತೂರು ಬದ್ರಿಯಾ ಮಸೀದಿಯ ಖತೀಬ್ ಅಬ್ಬಾಸ್ ಫೈಝಿ ಪುತ್ತಿಗೆ,ಪುತ್ತೂರು ಸಾಲ್ಮರ ಸೈಯದ್ ಮಲೆ ಮಸೀದಿಯ ಖತೀಬ್ ಉಮ್ಮರ್ ದಾರಿಮಿ ಸಾಲ್ಮರ,ಅಬ್ಬಾಸ್ ಮದನಿ ಮೊಟ್ಟೆತ್ತಡ್ಕ,ಉಮ್ಮರ್ ಫೈಝಿ ಸಾಲ್ಮರ,ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್‌ ಟಿ ಅಬ್ದುಲ್ ರಝಾಕ್ ಹಾಜಿ, ಪ್ರಧಾನ ಕಾರ್ಯದರ್ಶಿ ಯಾಕೂಬ್ ಖಾನ್ ಬಪ್ಪಳಿಗೆ ಮೊದಲಾದರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಮೀಯ್ಯತ್ತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ ಸ್ವಾಗತಿಸಿದರು.ಮೌಲೀದ್‌ ಮಜ್ಲಿಸ್ ಕಾರ್ಯಕ್ರಮದಲ್ಲಿ ಜಂ ಇಯ್ಯತುಲ್ ಉಲಾಮಾದ ಪದಾಧಿಕಾರಿಗಳಾದ ಉಮರ್ ಮುಸ್ಲಿಯಾರ್ ನಂಜೆ, ಸಿರಾಜುದ್ದೀನ್ ಫೈಝಿ ಬಪ್ಪಳಿಗೆ,ರಶೀದ್ ರಹ್ಮಾನಿ ಪರ್ಲಡ್ಕ, ಅಝೀಝ್ ದಾರಿಮಿ ಕೊಡಾಜೆ, ಸಿದ್ದೀಕ್ ಫೈಝಿ ಮುಕ್ರಂಪಾಡಿ,ಶಾಫಿ ಇರ್ಫಾನಿ ಕಲ್ಲೆಗ, ಆಸಿಫ್ ಅಝ್ಹರಿ ಇರ್ದೆ ಉಪಸ್ಥಿತರಿದ್ದರು.

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ಭಕ್ತರಿಂದ ಸಮರ್ಪಣೆಯಾದ ಹೊರೆಕಾಣಿಕೆ

Posted by Vidyamaana on 2024-04-21 20:43:32 |

Share: | | | | |


ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ಭಕ್ತರಿಂದ ಸಮರ್ಪಣೆಯಾದ ಹೊರೆಕಾಣಿಕೆ

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವೈಭವದ ಬ್ರಹ್ಮಕಲಶೋತ್ಸವಕ್ಕೆ ಶನಿವಾರ ಸಂಜೆ ಹೊರೆ ಕಾಣಿಕೆ ಸಮರ್ಪಣೆ ಮೂಲಕ ಚಾಲನೆ ನೀಡಲಾಯಿತು.

ಶನಿವಾರ ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಹೊರೆಕಾಣಿಕೆ ಮೆರವಣಿಗೆ ಶ್ರೀ ದೇವಸ್ಥಾನದಕ್ಕೆ ತೆರಳಿತು. 

ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ತೆಂಗಿಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.



Leave a Comment: