ಹೃದಯಾಘಾತದಿಂದ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ವಿಧಿವಶ

ಸುದ್ದಿಗಳು News

Posted by vidyamaana on 2024-07-08 15:11:53 |

Share: | | | | |


ಹೃದಯಾಘಾತದಿಂದ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ವಿಧಿವಶ

ಕಲಬುರಗಿ: ಹೃದಯಾಘಾತವಾದ ಹಿನ್ನೆಲೆಯಲ್ಲಿ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿ (35) ವಿಧಿವಶರಾಗಿದ್ದಾರೆ.

ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿರುವ ವಿರಕ್ತ ಮಠದ್ದಲ್ಲಿ ಇಂದು ಮುಂಜಾನೆ ತೀವ್ರ ಹೃದಯಾಘಾತದಿಂದ ಮಹಾಸ್ವಾಮಿಗಳು ಇಹಲೋಕ ತ್ಯಜಿಸಿದ್ದಾರೆ.

ಇಂದು ಸಂಜೆ 5 ಗಂಟೆಗೆ ರಟಕಲ್ ಗ್ರಾಮದಲ್ಲಿ ಧಾರ್ಮಿಕ ವಿಧಿ-ವಿಧಾನದ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ. ಭಾನುವಾರ ರಟಕಲ್ ಗ್ರಾಮದಲ್ಲಿ ನಡೆದ ವಚನ ಸಂಗಮ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿದ್ದರು.

 Share: | | | | |


ಉಚಿತ ಕೃಷಿ ಮಾಹಿತಿ ಕಾರ್ಯಾಗಾರ ಹಾಗೂ ಶೇರು ಪ್ರಮಾಣ ಪತ್ರ ವಿತರಣಾ ಸಮಾರಂಭ

Posted by Vidyamaana on 2023-08-29 07:34:23 |

Share: | | | | |


ಉಚಿತ ಕೃಷಿ ಮಾಹಿತಿ ಕಾರ್ಯಾಗಾರ ಹಾಗೂ ಶೇರು ಪ್ರಮಾಣ ಪತ್ರ ವಿತರಣಾ ಸಮಾರಂಭ

ಪುತ್ತೂರು: ತೆಂಗು ಕೃಷಿಯನ್ನು ವೈಜ್ಞಾನಿಕ ಪದ್ಧತಿಯಲ್ಲಿ ನಡೆಸಿದಾಗ ಅಧಿಕ ಇಳುವರಿ ಪಡೆಯಲು ಸಾಧ್ಯ. ಉಪಬೆಳೆ ಎನ್ನುವ ಮನಸ್ಥಿತಿಯಿಂದ ಹೊರಬರಬೇಕು ಎಂದು ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ.ರಶ್ಮಿ ಆರ್. ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ತೆಂಗು ಉತ್ಪಾದಕರ ಕಂಪನಿ ಮತ್ತು ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ಜಂಟಿ ಸಹಯೋಗದಲ್ಲಿ ಆ. 28ರಂದು ಜೈನ ಭವನದಲ್ಲಿ ನಡೆದ ಉಚಿತ ಕೃಷಿ ಮಾಹಿತಿ ಕಾರ್ಯಾಗಾರ ಮತ್ತು ಶೇರು ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ತೆಂಗಿಗೆ ವಿಶೇಷ ಆಶಕ್ತಿ ನೀಡದೇ ಇರುವುದರಿಂದ ಇಂದು ಇಳುವರಿ ಕಡಿಮೆಯಾಗಿದೆ. ಜೊತೆಗೆ ಸಮಗ್ರ ಪೋಷಕಾಂಶಗಳ ಕೊರತೆಯಿಂದ ನುಸಿ ರೋಗಗಳಂತ ಕಾಯಿಲೆಗಳು ಬಾಧಿಸುತ್ತಿವೆ. ಆದ್ದರಿಂದ ಕರಾವಳಿಯ ಈ ಭಾಗದಲ್ಲಿ ಮಣ್ಣಿಗೆ ಆವಶ್ಯಕವಾದ ಸಾರಜನಕ, ರಂಜಕ, ಪೊಟ್ಯಾಶ್ಗಳಂತ ಪ್ರಧಾನ ಪೋಷಕಾಂಶ ನೀಡಬೇಕು. ಮಣ್ಣು ಪರೀಕ್ಷೆಯೂ ಅಗತ್ಯವಾಗಿದ್ದು, ಕನಿಷ್ಠ 2 ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡುವ ಸಂಪ್ರದಾಯ ರೂಢಿಸಿಕೊಳ್ಳಬೇಕು. ಹೀಗೆ ಪ್ರತಿ ಹಂತದಲ್ಲೂ ತೆಂಗಿಗೆ ವಿಶೇಷ ಆಸಕ್ತಿ ವಹಿಸಿ ಕೆಲಸ ಮಾಡಿದಾಗ ಪ್ರಧಾನ ಬೆಳೆಯಾಗಿ, ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದರು.

ಬೆಂಬಲ ಬೆಲೆಗೆ ಆಗ್ರಹಿಸಿ ಅ. 2ರಂದು ರಾಜಭವನ ಚಲೋ: ರವಿಕಿರಣ್ ಪುಣಚ

ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ತೆಂಗಿನಕಾಯಿಯ ಮೌಲ್ಯವರ್ಧನೆಯ ಗುಟ್ಟು ಎಲ್ಲರಿಗೂ ತಿಳಿದಿದೆ. ಆದರೆ ಇದರಿಂದ ಎಷ್ಟು ಆದಾಯ ಬರಬಹುದು ಎನ್ನುವ ಆಲೋಚನೆ ಯಾರಿಗೂ ಇಲ್ಲ. ಒಂದು ಮರದಿಂದ 3 ಸಾವಿರ ರೂ.ದಿಂದ 5 ಸಾವಿರ ರೂ.ವರೆಗೆ ಆದಾಯ ಪಡೆಯಬಹುದು. ಆದ್ದರಿಂದ ರೈತರು ಈ ದಿಶೆಯಲ್ಲಿ ಆಲೋಚನೆ ಮಾಡಬೇಕು. ಇಷ್ಟೆಲ್ಲಾ ಇದ್ದರೂ, ರಾಜಕೀಯದ ಇಚ್ಚಾಶಕ್ತಿಯ ಕೊರತೆಯಿಂದಾಗಿ ತೆಂಗಿನಕಾಯಿಯನ್ನು ಖರೀದಿಸಲು ಸರಕಾರಿ ವ್ಯವಸ್ಥೆಗಳು ಇಲ್ಲ ಎನ್ನುವುದು ಬೇಸರದ ಸಂಗತಿ. ಆದ್ದರಿಂದ ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 20 ಸಾವಿರ ರೂ. ಬೆಂಬಲ ಬೆಲೆಯನ್ನು ಕೇಂದ್ರ ಸರಕಾರ ನಿಗದಿಪಡಿಸಬೇಕು ಹಾಗೂ ರಾಜ್ಯ ಸರಕಾರ 5 ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು ಎಂಬ ಆಗ್ರಹವನ್ನು ಮುಂದಿಟ್ಟುಕೊಂಡು ಅಕ್ಟೋಬರ್ 2ರಂದು ತಿಪಟೂರಿನಿಂದ ರಾಜಭವನ ಚಲೋ ಪಾದಯಾತ್ರೆ ನಡೆಯಲಿದೆ. ಅಕ್ಟೋಬರ್ 9ರಂದು ಫ್ರೀಡಂ ಪಾರ್ಕಿನಲ್ಲಿ ಬೃಹತ್ ಕಲ್ಮಿನೇಷನ್ ನಡೆಯಲಿದೆ ಎಂದರು.

ರೈತರೇ ವಿಜ್ಞಾನಿಗಳಾಗಬೇಕು: ಕಡಮಜಲು ಸುಭಾಷ್ ರೈ

ವಿಜಯ ಕರ್ನಾಟಕ ಸೂಪರ್ ಸ್ಟಾರ್ ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಸ್ ರೈ ಮಾತನಾಡಿ, ಉಪಬೆಳೆಯಾಗಿರುವ ತೆಂಗಿಗೆ ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳಬೇಕು. ಇದರಿಂದ ಅಧಿಕ ಲಾಭ ಗಳಿಸಲು ಸಾಧ್ಯ. ಬದುಕಿಗೆ ಪೂರಕವಾಗಿ ಸಮಗ್ರ ಕೃಷಿ ಮಾಡಿದಾಗ ಆರ್ಥಿಕ ಅಭಿವೃದ್ಧಿ ಸಾಧ್ಯ. ಇದಕ್ಕಾಗಿ ಲ್ಯಾಬಿನಲ್ಲಿ ಆಗುವ ಪ್ರಯೋಗಗಳನ್ನು ಮಣ್ಣಿಗೆ ತರುವ ಕೆಲಸ ಆಗಬೇಕು. ಈ ಕೆಲಸವನ್ನು ಕೃಷಿಕರೇ ಮಾಡಬೇಕಾಗಿದೆ ಎಂದರು.

ಕ್ಷಿಪ್ರಸಾಲಕ್ಕಾಗಿ ಒಡಂಬಡಿಕೆ: ಪೂರ್ಣಿಮಾ ಎನ್.

ಮಾನಸಗಂಗಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಎನ್. ಮಾತನಾಡಿ, ರೈತರಿಗೆ ಅಗತ್ಯವಿರುವ ಕೃಷಿ ಸಲಕರಣೆ, ರಸಗೊಬ್ಬರಗಳನ್ನು ಪೂರೈಸುವ ದೃಷ್ಟಿಯಿಂದ ಕ್ಷಿಪ್ರ ಗತಿಯಲ್ಲಿ ಸಾಲ ಸೌಲಭ್ಯ ನೀಡಲು ನಮ್ಮ ಸಂಘ ಮುಂದೆ ಬಂದಿದೆ. ಈ ನಿಟ್ಟಿನಲ್ಲಿ ತೆಂಗು ಉತ್ಪಾದಕರ ಕಂಪೆನಿ ಹಾಗೂ ಮಾನಸಗಂಗಾಗ ಸಹಕಾರ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡಿದೆ ಎಂದರು.

ಗಣೇಶ ಚತುರ್ಥಿ ಬಳಿಕ ತೆಂಗು ಖರೀದಿ: ಕುಸುಮಾಧರ ಎಸ್.ಕೆ.

ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ತೆಂಗು ಉತ್ಪಾದಕರ ಕಂಪನಿ ಅಧ್ಯಕ್ಷ ಕುಸುಮಾಧರ ಎಸ್.ಕೆ. ಮಾತನಾಡಿ, ತೆಂಗಿಗೆ ಮೌಲ್ಯವರ್ಧನೆ ಮಾಡಿ, ಉತ್ತಮ ಬೆಲೆ ಒದಗಿಸುವುದೇ ನಮ್ಮ ಉದ್ದೇಶ. ಇದಕ್ಕಾಗಿ ಬೇರೆ ಬೇರೆ ಯೋಜನೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಕಲ್ಪರಸ ಯೋಜನೆಯ ಜಾರಿಗಾಗಿ ದೊಡ್ಡತೋಟದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಗಣೇಶ ಚತುರ್ಥಿ ಬಳಿಕ ಅಲ್ಲಿ ತೆಂಗಿನಕಾಯಿ ಖರೀದಿಸಲಾಗುವುದು. ತೆಂಗಿನಕಾಯಿ ಕೀಳಲು ಜನರ ಸಮಸ್ಯೆ ಇದೆ ಎನ್ನುವ ಕಾರಣಕ್ಕಾಗಿ, ಟೋಲ್ ಫ್ರೀ ಸಹಾಯವಾಣಿಯನ್ನು ನೀಡಲಾಗಿದೆ. ಸದಸ್ಯರ ಉತ್ತಮ ಯೋಜನೆಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ 100 ಕೋಟಿ ರೂ.ವರೆಗೆ ಸಾಲ ಒದಗಿಸುವ ಯೋಜನೆಯೂ ಇದೆ. ಮಾತ್ರವಲ್ಲ, ಕಲ್ಪ ಸಮೃದ್ಧಿ ಯೋಜನೆಯಡಿ ಠೇವಣಿ ಇಟ್ಟರೆ ಶೇ. 12ರವರೆಗೆ ಬಡ್ಡಿ ನೀಡಲಾಗುವುದು ಎಂದು ಮಾಹಿತಿ ನೀಡಿದ ಅವರು, ಸಂಸ್ಥೆ ಪ್ರಾರಂಭಗೊಂಡು 2 ವರ್ಷ ಪೂರೈಸಿದೆ. ಈ 2 ವರ್ಷದಲ್ಲಿ 14 ಸಾವಿರ ರೈತರನ್ನು ಹೊಂದಿದ್ದು, ದೇಶದಲ್ಲೇ ಪ್ರಥಮ ಸಂಸ್ಥೆ ಎನ್ನುವ ಹಿರಿಮೆಗೂ ಪಾತ್ರವಾಗಿದೆ ಎಂದರು.

ನಿರ್ದೇಶಕಿ ಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯ ರೈತರಾದ ಎ. ಜತೀಂದ್ರ ಶೆಟ್ಟಿ, ಜಗನ್ನಾಥ ರೈ ಡಿ, ಐತ್ತಪ್ಪ ನಾಯ್ಕ್, ಆಯಿಷಾ, ದುಗ್ಗಪ್ಪ ಗೌಡ, ಐತ್ತಪ್ಪ ರೈ ಅವರಿಗೆ ಇದೇ ಸಂದರ್ಭ ಶೇರು ಪ್ರಮಾಣ ಪತ್ರ ವಿತರಿಸಲಾಯಿತು.

ನಿಶ್ಮಿತಾ ಪ್ರಾರ್ಥಿಸಿದರು. ನಿರ್ದೇಶಕ ಗಿರಿಧರ್ ಸ್ವಾಗತಿಸಿದರು. ನಿರ್ದೇಶಕಿ ಲತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಳ್ಯ ಕಚೇರಿ ಮೇಲ್ವಿಚಾರಕಿ ಅಪರ್ಣಾ ವಂದಿಸಿದರು. ಡಾ.ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರು ಜೆರೋಸಾ ಶಾಲೆ ಪ್ರಕರಣ; ತನಿಖಾಧಿಕಾರಿ ನೇಮಕ: ದಿನೇಶ್ ಗುಂಡೂರಾವ್

Posted by Vidyamaana on 2024-02-17 21:50:33 |

Share: | | | | |


ಮಂಗಳೂರು ಜೆರೋಸಾ ಶಾಲೆ ಪ್ರಕರಣ; ತನಿಖಾಧಿಕಾರಿ ನೇಮಕ: ದಿನೇಶ್ ಗುಂಡೂರಾವ್

ಮಂಗಳೂರು: ಸಂತ ಜೆರೋಸಾ ಶಾಲೆಯ ಶಿಕ್ಷಕಿ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ಕೇಳಿಬಂದ ಗಂಭೀರ ಆರೋಪ ಸಂಬಂಧ ಸಮಗ್ರ ತನಿಖೆಗೆ ಐಎಎಸ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ಈ ಬಗ್ಗೆ ಆರೋಗ್ಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಜೆರೋಸಾ ಶಾಲೆ ಶಿಕ್ಷಕಿಯಿಂದ ಹಿಂದೂ ಧರ್ಮದ ಅವಹೇಳನ ಆರೋಪ ಸಂಬಂಧ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. IAS ಅಧಿಕಾರಿ ಡಾ.ಎಸ್.ಆಕಾಶ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ ಎಂದರು.

ದೂರು ಆಧರಿಸಿ ಎಫ್ ಐಆರ್ ದಾಖಲಿಸಲಾಗಿದೆ. ಶೀಘ್ರದಲ್ಲೇ ಸತ್ಯಾಂಶ ತಿಳಿಯುತ್ತದೆ. ತುರ್ತಾಗಿ ತನಿಖೆ ಮಾಡಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದರು.

ಅಕ್ರಮ ಆಸ್ತಿ ಗಳಿಕೆ:ಪುತ್ತೂರು ಮೂಲದ ತಹಶೀಲ್ದಾರ್ ಅಜಿತ್ ರೈ 7 ದಿನ ಲೋಕಾಯುಕ್ತ ಕಸ್ಟಡಿಗೆ

Posted by Vidyamaana on 2023-06-30 11:45:49 |

Share: | | | | |


ಅಕ್ರಮ ಆಸ್ತಿ ಗಳಿಕೆ:ಪುತ್ತೂರು ಮೂಲದ ತಹಶೀಲ್ದಾರ್ ಅಜಿತ್ ರೈ 7 ದಿನ ಲೋಕಾಯುಕ್ತ ಕಸ್ಟಡಿಗೆ

ಬೆಂಗಳೂರು: ಲೋಕಾಯುಕ್ತ ದಾಳಿ ವೇಳೆ ಅಕ್ರಮ ಆಸ್ತಿ, ಸಂಪತ್ತು ಪತ್ತೆಯಾದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತಹಶೀಲ್ದಾರ್ ಅಜಿತ್ ರೈ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಅವರನ್ನು ಹೆಚ್ಚಿನ ತನಿಖೆಗಾಗಿ ಏಳು ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ ಒಪ್ಪಿಸಿ ಶುಕ್ರವಾರ ಆದೇಶ ನೀಡಿದೆ.

24 ಗಂಟೆಗಳಿಗೂ ಹೆಚ್ಚು ಕಾಲ ನಡೆದ ದಾಳಿ, ಶೋಧ ಕಾರ್ಯದ ವೇಳೆ ತಹಶೀಲ್ದಾರ್ ಅವರ ನಿವಾಸ ಮತ್ತು ಇತರ ಕಡೆಗಳಲ್ಲಿ ಆಸ್ತಿಗಳಲ್ಲಿ ಅಕ್ರಮ ಆಸ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಗುರುವಾರ ಅವರನ್ನು ಬಂಧಿಸಿದ್ದರು.

ವಿರೋಧ ಪಕ್ಷಗಳ ಸಭೆಯಲ್ಲಿ ಮೈತ್ರಿಗೆ INDIA ಎಂದು ಹೆಸರಿಟ್ಟ ನಾಯಕರು

Posted by Vidyamaana on 2023-07-18 10:00:32 |

Share: | | | | |


ವಿರೋಧ ಪಕ್ಷಗಳ ಸಭೆಯಲ್ಲಿ ಮೈತ್ರಿಗೆ INDIA ಎಂದು ಹೆಸರಿಟ್ಟ ನಾಯಕರು

ಬೆಂಗಳೂರು : ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ರಾಜಕೀಯ ಪಕ್ಷಗಳು ಇಂದು ದೆಹಲಿ ಮತ್ತು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸುತ್ತಿವೆಮಹಾಮೈತ್ರಿಕೂಟದ ನಾಯಕರು ತನ್ನ ಎರಡನೇ ಏಕತಾ ಸಭೆಯನ್ನು ಬೆಂಗಳೂರಿನಲ್ಲಿ ನಡೆಸುತ್ತಿದ್ದರೆ, ಬಿಜೆಪಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (INDA) ಪ್ರತಿಪಕ್ಷಗಳ ವಿರುದ್ಧ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸಭೆ ನಡೆಸಲಿದೆ.ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕರು ಬೆಂಗಳೂರಿನಲ್ಲಿ ಮೈತ್ರಿಗೆ ಇಂಡಿಯಾ ಎಂದು ನಾಮಕರಣ ಮಾಡಿದ್ದಾರೆ.


I – Indian

N – National

D – Democractic

I – Inclusive

A - Alliance ಎಂದು ನಾಮಕರಣ ಮಾಡಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಕೇಂದ್ರದ ವಿರೋಧ ಪಕ್ಷಗಳ ಸಭೆಯಲ್ಲಿ ಇಂದು ವಿವಿಧ ಪಕ್ಷದ ನಾಯಕರೊಂದಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಸಾಮೂಹಿಕ ಹೋರಾಟ ನಡೆಸಲು ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳು ಹಾಗೂ ಕಾರ್ಯತಂತ್ರಗಳ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು.

ಪತ್ನಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡವನ ಮುಗಿಸಿದ ಪತಿ

Posted by Vidyamaana on 2023-11-19 16:00:18 |

Share: | | | | |


ಪತ್ನಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡವನ ಮುಗಿಸಿದ ಪತಿ

ಬೆಂಗಳೂರು : ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.ತಿಲಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ತಬ್ರೇಜ್​ ಕೊಲೆ ಪ್ರಕರಣ ಸದ್ಯ ಈ ರೀತಿಯ ತಿರುವು ಪಡೆದಿದ್ದು, ಆರೋಪಿ ಶಬ್ಬೀರ್ ​ನನ್ನು ಪೊಲೀಸರು ಬಂಧಿಸಿದ್ದಾರೆ.ವುಡ್ ವರ್ಕ್​ನ ಸಬ್ ಕಾಂಟ್ರಾಕ್ಟರ್ ಆಗಿದ್ದ ತಬ್ರೇಜ್ ಕೊಲೆಯಾದ ನಂತರ ಡ್ರ್ಯಾಗರ್ ಹಿಡಿದು ನಡುರಸ್ತೆಯಲ್ಲಿ ಶಬ್ಬೀರ್ ಓಡಾಡುತ್ತಿರುವ ದೃಶ್ಯ ಸೆರೆಯಾಗಿತ್ತು. ವೆಲ್ಡಿಂಗ್ ಕೆಲಸ ಮಾಡುತಿದ್ದ ಶಬ್ಬೀರ್, ದುಬೈನಲ್ಲಿ ಕೆಲಸ ಮಾಡಿ ಮರಳಿ ದೇಶಕ್ಕೆ ಬಂದು ಕೆಂಗೇರಿಯಲ್ಲಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಇತ್ತೀಚೆಗೆ ಶಬ್ಬೀರ್​ಗೆ ತನ್ನ ಪತ್ನಿ ಹಾಗೂ ಮೂರು ಮಕ್ಕಳ ತಂದೆಯಾಗಿರುವ ತಬ್ರೇಜ್ ನಡುವೆ ಅಕ್ರಮ ಸಂಬಂಧ ಇರುವುದು ಗೊತ್ತಾಗಿತ್ತು. ಈ ಸಂದರ್ಭದಲ್ಲಿ ಪತ್ನಿ ತನ್ನ ತವರು ಸೇರಿದ್ದರು. ಹೀಗಾಗಿ ತಬ್ರೇಜ್ ಹಾಗೂ ಶಬ್ಬೀರ್ ನಡುವೆ ಈ ವಿಷಯವಾಗಿ ಆಗಾಗ ಜಗಳ ನಡೆಯುತ್ತಿತ್ತು.


ಈ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗಿದ್ದು, ತಬ್ರೇಜ್ ಕೊಲೆ ಮಾಡಿದ ನಂತರ ತನ್ನ ಪತ್ನಿಯನ್ನೂ ಕೂಡ ಕೊಲೆ ಮಾಡಲು ಶಬ್ಬೀರ್ ಮುಂದಾಗಿದ್ದ ಎಂಬ ಸಂಗತಿ ಬಯಲಾಗಿದೆ. ಹೀಗಾಗಿ ತಬ್ರೇಜ್ ಕೊಲೆ ಮಾಡಿದ ನಂತರ ಪತ್ನಿಯ ಮನೆಗೂ ಆತ ತೆರಳಿದ್ದ ಎನ್ನಲಾಗಿದೆ.ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದರು.

ಜೆರೋಸಾ ಶಾಲಾ ವಿವಾದ ಬೆನ್ನಲ್ಲೇ ದ.ಕ. ಡಿಡಿಪಿಐ ದಯಾನಂದ ನಾಯ್ಕ ದಿಢೀರ್‌ ವರ್ಗಾವಣೆ

Posted by Vidyamaana on 2024-02-14 20:59:58 |

Share: | | | | |


ಜೆರೋಸಾ ಶಾಲಾ ವಿವಾದ ಬೆನ್ನಲ್ಲೇ ದ.ಕ. ಡಿಡಿಪಿಐ ದಯಾನಂದ ನಾಯ್ಕ ದಿಢೀರ್‌ ವರ್ಗಾವಣೆ

ಮಂಗಳೂರು : ಮಂಗಳೂರು  ಖಾಸಗಿ ಶಾಲೆಯ ವಿವಾದ ಪ್ರಕರಣ ನಡೆದ ಬೆನ್ನಲ್ಲೇ ದ.ಕ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರನ್ನು (ಡಿಡಿಪಿಐ) ದಿಢೀರ್‌ ವರ್ಗಾವಣೆ ಮಾಡಲಾಗಿದೆ. ನೂತನ ಡಿಡಿಪಿಐ ಆಗಿ ವೆಂಕಟೇಶ ಸುಬ್ರಾಯ ಪಟಗಾರ ಅವರನ್ನು ನಿಯುಕ್ತಿಗೊಳಿಸಲಾಗಿದೆ ಶಾಲೆಯ ವಿವಾದದ ನಿರ್ವಹಣೆಯಲ್ಲಿ ವಿಫಲರಾಗಿರುವ ಕುರಿತು ಹಾಗೂ ಡಿಡಿಪಿಐ ವರ್ತನೆ ಬಗ್ಗೆ ಕಾಂಗ್ರೆಸ್‌ ನಾಯಕರು ತೀವ್ರ ಅಸಮಾಧಾನ ಹೊರಹಾಕಿದ್ದರು. ಮಂಗಳವಾರ ಶಾಲೆಗೆ ಭೇಟಿ ನೀಡಿದ್ದ ಮಾಜಿ ಸಚಿವ ರಮಾನಾಥ ರೈ, ಸಮಸ್ಯೆ ಉದ್ಭವ ಆದಾಗಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಸರಿಪಡಿಸಬೇಕಿತ್ತು. ಆದರೆ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಹಿಂದುಳಿದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಮಾಜಿ ಶಾಸಕರಾದ ಐವನ್ ಡಿಸೋಜ, ಜೆ.ಆರ್‌.ಲೋಬೊ ಕೂಡ ಅಧಿಕಾರಿಗಳ ವರ್ತನೆಯನ್ನು ಖಂಡಿಸಿದ್ದರು. ಇದರ ಬೆನ್ನಲ್ಲೇ ಡಿಡಿಪಿಐ ದಯಾನಂದ ನಾಯ್ಕ ಅವರನ್ನು ಬೆಳಗಾವಿ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಕ್ಕೆ ಪ್ರವಾಚಕರನ್ನಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.

ಕಲಬುರಗಿಯ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಲ್ಲಿ ಉಪನಿರ್ದೇಶಕ (ಯೋಜನೆ)ರಾಗಿದ್ದ ವೆಂಕಟೇಶ ಸುಬ್ರಾಯ ಪಟಗಾರ ಅವರನ್ನು ದಕ್ಷಿಣ ಕನ್ನಡ ಡಿಡಿಪಿಐ ಆಗಿ ನೇಮಕ ಮಾಡಲಾಗಿದೆ

Recent News


Leave a Comment: