ಇಸ್ರೇಲ್ ನಲ್ಲಿ ವೆಸ್ಟ್ ನೈಲ್‌ ಜ್ವರಕ್ಕೆ ಮತ್ತೊಂದು ಬಲಿ : ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆ

ಸುದ್ದಿಗಳು News

Posted by vidyamaana on 2024-07-10 11:27:00 |

Share: | | | | |


ಇಸ್ರೇಲ್ ನಲ್ಲಿ ವೆಸ್ಟ್ ನೈಲ್‌ ಜ್ವರಕ್ಕೆ ಮತ್ತೊಂದು ಬಲಿ : ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆ

ಜೆರುಸಲೇಂ : ಇಸ್ರೇಲ್ ನಲ್ಲಿ ವೆಸ್ಟ್ ನೈಲ್ ಜ್ವರಕ್ಕೆ ಬಲಿಯಾದವರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಒಂದು ಹೊಸ ಸಾವು ಸಂಭವಿಸಿದೆ ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ.

ಮೇ ಆರಂಭದಿಂದ ದೃಢಪಡಿಸಿದ ಒಟ್ಟು ಸೋಂಕಿನ ಪ್ರಕರಣಗಳ ಸಂಖ್ಯೆ 299 ಕ್ಕೆ ತಲುಪಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ.ಹೆಚ್ಚಿನ ಪ್ರಕರಣಗಳು ಇಸ್ರೇಲ್ನ ಕೇಂದ್ರ ಪ್ರದೇಶದಲ್ಲಿ ಪತ್ತೆಯಾಗಿದ್ದರೂ, ಉತ್ತರದ ನಗರ ಹೈಫಾದ ರಂಬಾಮ್ ಆಸ್ಪತ್ರೆ ಗುರುವಾರ ವೈರಸ್ ಸೋಂಕಿಗೆ ಒಳಗಾದ ಆಸ್ಪತ್ರೆಗೆ ದಾಖಲಾದ ಇಬ್ಬರು ರೋಗಿಗಳನ್ನು ವರದಿ ಮಾಡಿದೆ, ಇದರಲ್ಲಿ ಮಧ್ಯಮ-ತೀವ್ರ ಸ್ಥಿತಿಯಲ್ಲಿರುವ 50 ವರ್ಷದ ವ್ಯಕ್ತಿ ಸೇರಿದ್ದಾರೆ.

ಇಸ್ರೇಲ್ನ ಮಾರಿವ್ ದಿನಪತ್ರಿಕೆಯ ಪ್ರಕಾರ, ವೆಸ್ಟ್ ನೈಲ್ ಜ್ವರದಿಂದ ಸೋಂಕಿಗೆ ಒಳಗಾದ ಕನಿಷ್ಠ 17 ರೋಗಿಗಳು ಪ್ರಸ್ತುತ ಗಂಭೀರ ಸ್ಥಿತಿಯಲ್ಲಿದ್ದಾರೆ, ಮಧ್ಯ ಇಸ್ರೇಲ್ನಾದ್ಯಂತದ ಆಸ್ಪತ್ರೆಗಳಲ್ಲಿ ನಿದ್ರೆ ಮತ್ತು ವಾತಾಯನವನ್ನು ಪಡೆಯುತ್ತಿದ್ದಾರೆ. ವೆಸ್ಟ್ ನೈಲ್ ಜ್ವರವು ಮುಖ್ಯವಾಗಿ ಪಕ್ಷಿಗಳಲ್ಲಿ ಕಂಡುಬರುವ ವೈರಸ್ನಿಂದ ಉಂಟಾಗುತ್ತದೆ, ಸೋಂಕಿತ ಪಕ್ಷಿಗಳಿಂದ ಸೊಳ್ಳೆ ಕಡಿತದ ಮೂಲಕ ಮಾನವರು ಮತ್ತು ಇತರ ಪ್ರಾಣಿಗಳಿಗೆ ಹರಡುತ್ತದೆ. ಸಾಮಾನ್ಯ ರೋಗಲಕ್ಷಣಗಳಲ್ಲಿ ಜ್ವರ, ತಲೆನೋವು, ದೌರ್ಬಲ್ಯ, ಕೀಲು ಮತ್ತು ಸ್ನಾಯು ನೋವು, ಕಂಜಂಕ್ಟಿವಿಟಿಸ್, ದದ್ದು, ಮತ್ತು ಸಾಂದರ್ಭಿಕವಾಗಿ ವಾಕರಿಕೆ ಮತ್ತು ಅತಿಸಾರ ಸೇರಿವೆ.

 Share: | | | | |


ಕಾಂಗ್ರೆಸ್ ವಿಜಯೋತ್ಸವದಲ್ಲಿ ಪುತ್ತಿಲ ಅಭಿಮಾನಿಗಳು

Posted by Vidyamaana on 2023-05-14 15:17:41 |

Share: | | | | |


ಕಾಂಗ್ರೆಸ್ ವಿಜಯೋತ್ಸವದಲ್ಲಿ ಪುತ್ತಿಲ ಅಭಿಮಾನಿಗಳು

ಪುತ್ತೂರು: ಶನಿವಾರ ಸಂಜೆ ಕಾಂಗ್ರೆಸ್ ಗೆಲುವಿನ ಶೋಭಾಯಾತ್ರೆ ನಡೆಯುತ್ತಿತ್ತು. ಅಷ್ಟರಲ್ಲಿ ಎದುರಿನಿಂದ ಪಕ್ಷೇತರವಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಅವರ ಕಾರು ಆಗಮಿಸಿತು. ಹಿಂದುತ್ವ – ಕಾಂಗ್ರೆಸ್ ಕಾರ್ಯಕರ್ತರು ಎದುರು – ಬದುರಾದರೆ ಹೇಗೆ? ಆತಂಕ ಬೇಡ. ಅರುಣ್ ಕುಮಾರ್ ಪುತ್ತಿಲ ಅವರು ಜನನಾಯಕ ಎನ್ನುವುದು ಮತ್ತೊಮ್ಮೆ ಸಾಬೀತಾಗುವ ಪ್ರಸಂಗಕ್ಕೆ ಈ ಘಟನೆ ಸಾಕ್ಷಿಯಾಯಿತು.

ಕಾಂಗ್ರೆಸ್ ಕಾರ್ಯಕರ್ತರು, ಪುತ್ತಿಲ ಅವರಿಗೆ ಕೈ ಬೀಸಿ ತಮ್ಮ ಪ್ರೀತಿ ತೋರಿದರು. ಅರುಣ್ ಕುಮಾರ್ ಪುತ್ತಿಲ ಅವರು ಕೈಮುಗಿದು, ಅವರ ಪ್ರೀತಿಗೆ ತಲೆಬಾಗಿದರು. ಇನ್ನೂ ಕೆಲವರು ಪುತ್ತಿಲ ಅವರಿಗೆ ಕೈ ಕುಲುಕಿ ತಮ್ಮ ಪ್ರೀತಿಯನ್ನು ತೋರಿದರು.

ಬಜರಂಗದಳ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ; ಆರ್. ಅಶೋಕ್

Posted by Vidyamaana on 2024-02-23 14:48:48 |

Share: | | | | |


ಬಜರಂಗದಳ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ; ಆರ್. ಅಶೋಕ್

ಮಂಗಳೂರು: ಬಜರಂಗದಳ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ ಎಂದು ಹೇಳಿ ಹಿಂದು ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದ್ದ ಬಿಜೆಪಿಯ ವಿಪಕ್ಷ ನಾಯಕ ಆರ್. ಅಶೋಕ್, ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರ ಕ್ಷಮೆ ಕೇಳಿದ್ದಾರೆ.


ಜ್ಞಾನವಾಪಿ ದೇವಸ್ಥಾನದ ಬಗ್ಗೆ ರಾಮನಗರದ ವಕೀಲರೊಬ್ಬರು ಅವಹೇಳನಕಾರಿ ಶಬ್ದ ಹಾಕಿದ್ದರು. ಅಧಿವೇಶನದಲ್ಲಿ ಈ ವಿಚಾರ ಚರ್ಚೆಗೆ ಬಂದಾಗ, ನಾನು ಕೂಡ ಗೃಹ ಸಚಿವನಾಗಿದ್ದೆ. ನೀವು ಮುಸ್ಲಿಮರಿಂದ ಒತ್ತಡ ಇದೆಯೆಂದು ಕ್ರಮ ಜರುಗಿಸದೇ ಇರಬಾರದು. ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಬೇಕು. ಹಿಂದೆ ಪಬ್ ದಾಳಿ ಸಂದರ್ಭದಲ್ಲಿ ಬಜರಂಗದಳ ಕಾರ್ಯಕರ್ತರ ಮೇಲೂ ಗೂಂಡಾ ಕಾಯ್ದೆ ಹಾಕಿದ್ದೆ. ಒತ್ತಡ ಇದೆಯೆಂದು ಸುಮ್ಮನೆ ಬಿಡಲಿಲ್ಲ ಎಂದು ಹೇಳಿದ್ದೆ. ಇದರಿಂದ ಬಜರಂಗದಳ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ.


ನಾನು ಕೂಡ ಹತ್ತು ವರ್ಷ ಬಜರಂಗದಳ ಕಾರ್ಯಕರ್ತನಾಗಿದ್ದೆ. ಕ್ಷಮೆ ಕೇಳುವುದರಿಂದ ಯಾವುದೇ ವಿಷಾದನೂ ಇಲ್ಲ, ನೋವೂ ಇಲ್ಲ. ಬಜರಂಗದಳ ಕಾರ್ಯಕರ್ತರೂ ನಮ್ಮವರೇ. ಆದ್ದರಿಂದ ಈ ವಿಚಾರವನ್ನು ಇಲ್ಲಿಗೆ ಮುಕ್ತಾಯ ಮಾಡಿ ಎಂದು ಅಶೋಕ್ ಮಾಧ್ಯಮಕ್ಕೆ ಪ್ರತಿಕ್ರಿಯಿಸುತ್ತಾ ಹೇಳಿದ್ದಾರೆ. ಅಶೋಕ್ ಅವರನ್ನು ವಿಪಕ್ಷ ನಾಯಕ ಸ್ಥಾನದಿಂದ ಕಿತ್ತು ಹಾಕಬೇಕೆಂದು ಕರಾವಳಿ ಮತ್ತು ಮಲೆನಾಡಿನಲ್ಲಿ ಬಜರಂಗದಳ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದರು. ಅಲ್ಲದೆ, ವಿಶ್ವಹಿಂದು ಪರಿಷತ್, ಬಜರಂಗದಳ ಪ್ರಮುಖರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿಯಾಗಿ ಕ್ರಮಕ್ಕೆ ಆಗ್ರಹಿಸಿದ್ದರು.

ಕ್ರಿಕೆಟರ್ ಕಾರಿಯಪ್ಪ ಪ್ರೇಮ ಪುರಾಣದಲ್ಲಿ ಬಿಗ್ ಟ್ವಿಸ್ಟ್: ಸ್ಪಿನ್ನರ್ ಗೆ ಎದುರಾಗುವ ಹೊಸ ಸಂಕಷ್ಟ ಯಾವುದು?

Posted by Vidyamaana on 2023-12-26 12:34:18 |

Share: | | | | |


ಕ್ರಿಕೆಟರ್ ಕಾರಿಯಪ್ಪ ಪ್ರೇಮ ಪುರಾಣದಲ್ಲಿ ಬಿಗ್ ಟ್ವಿಸ್ಟ್: ಸ್ಪಿನ್ನರ್ ಗೆ ಎದುರಾಗುವ ಹೊಸ ಸಂಕಷ್ಟ ಯಾವುದು?

ಬೆಂಗಳೂರು : ಕೆಲ ಸೆಲೆಬ್ರೆಟಿಗಳು ಬದುಕಲ್ಲಿ ಲವ್ , ಸೆಕ್ಸ್, ದೋಖಾ ಅನ್ನೊದು ಕಾಮನ್ ಏನೂ ಅನ್ನೋಷ್ಟರ ಮಟ್ಟಿಗೆ ಆಗಿಬಿಟ್ಟಿದೆ. ಹೌದು. ಇದೀಗ ಕರ್ನಾಟಕದ ಕ್ರಿಕೆಟಿಗರೊಬ್ಬರ ಮೇಲೆ ಇಂತಹದೇ ಆರೋಪ ಕೇಳಿ ಬಂದಿದೆ.. ಸದ್ಯ ಕ್ರಿಕೆಟರ್ ನ ಪ್ರೇಮ ಪುರಾಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮಾಜಿ ಸೈನಿಕರೊಬ್ಬರ ಪುತ್ರಿ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಆ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ….


ಕೊಡಗು ಮೂಲದ ಕ್ರಿಕೆಟಿಗ ಕೆ.ಸಿ.‌ಕಾರಿಯಪ್ಪ ವಿರುದ್ದ ಗಂಭೀರ ಆರೋಪ ಕೇಳಿ‌ ಬಂದಿದೆ.‌ಇನ್ಸ್ಟಾ ಗ್ರಾಮ್ ನಲ್ಲಿ ಪರಿಚಯವಾಗಿದ್ದ ಯುವತಿಯನ್ನ ಮದ್ವೆಯಾಗೋದಾಗಿ ನಂಬಿಸಿ ವಂಚಿಸಿದ್ದಾರಂತೆ. ಇನ್ನು ಕಾರಿಯಪ್ಪನಿಂದ ವಂಚನೆಗೊಳಗಾದ ಯುವತಿಯೂ ಕೊಡಗು ಮೂಲದವರಾಗಿದ್ದು, ಎರಡು ವರ್ಷಗಳ‌ ಹಿಂದೆ ಇಬ್ಬರಿಗೂ ಇನ್ಸ್ಟಾ ದಲ್ಲಿ‌ ಪರಿಚಯವಾಗಿತ್ತಂತೆ. ನಂತರ ಪರಿಚಯ ಪ್ರೇಮಕ್ಕೆ ತಿರುಗಿದ್ದು, ದೈಹಿಕ‌ ಸಂಪರ್ಕವೂ ಬೆಳೆಸಿ ಕೊನೆಗೆ ಸದ್ಯಕ್ಕೆ ಮಗು ಬೇಡ ಅಂತ ಅಬಾರ್ಷನ್ ಮಾಡಿಸಲು ಕಾರಿಯಪ್ಪನೇ ಬಲವಂತವಾಗಿ ಯುವತಿಗೆ ಮಾತ್ರೆ ನುಂಗಿಸಿದ್ದ ಎಂದು ಆರೋಪಿಸಲಾಗಿದೆ..


ಅದಾದ ಬಳಿಕ ಕಾರಿಯಪ್ಪ ಯುವತಿಯನ್ನ ಅವೈಡ್ ಮಾಡೋದಕ್ಕೆ ಶುರು ಮಾಡಿದ್ದಾನಂತೆ. ಅದೇ ವೇಳೆ ಕಾರಿಯಪ್ಪನ ಮತ್ತೊಬ್ಬ ಗರ್ಲ್ ಫ್ರೆಂಡ್ ಈ ಯುವತಿಗೆ ಕರೆ ಮಾಡಿ ವಿಚಾರಿಸಿದ್ದಾಳೆ‌.ಈ ವೇಳೆ ನನಗೆ ಮೋಸ ಮಾಡ್ತಿದ್ದೀಯ ನನ್ನನ್ನ ಮದ್ವೆಯಾಗು ಅಂತ ಒತ್ತಾಯಿಸಿದ್ದು, ಅದಕ್ಕೆ ಕಾರಿಯಪ್ಪ ವಿರೋಧ ವ್ಯಕ್ತಪಡಿಸಿದನಂತೆ. ಈ ಸಂಬಂಧ ನೊಂದ ಯುವತಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.


ಬಳಿಕ ಡ್ರಾಮ‌ ಶುರು ಮಾಡಿದ ಕಾರಿಯಪ್ಪ ಐಪಿಎಲ್ ಮುಗಿದ ಬಳಿಕ ಮದುವೆ ಆಗೋದಾಗಿ ನಂಬಿಸಿ ಕೇಸ್ ವಾಪಸ್ಸು ತೆಗೆಸಿಕೊಳ್ಳುವಂತೆ ಮಾಡಿದ್ದಾನಂತೆ.‌ನಂತರ ಮನೆಗೆ ಬಂದು ಮದ್ವೆಯಾಗೋದಾಗಿ ಮಾತುಕತೆ ಮಾಡಿ, ಟೂರ್ನಮೆಂಟ್ ಅದು ಇದು ಅಂತ ಅವೈಡ್ ಮಾಡಿದ್ದಾನಂತೆ. ಹೀಗಾಗಿ ಇದೀಗ ನನಗೆ ಮೋಸ ಮಾಡಿದ್ದಾನೆಂದು ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ. ಅತ್ತ ಕಾರಿಯಪ್ಪ ಸಹ ಯುವತಿ ವಿರುದ್ದ ಕೌಂಟರ್ ಕಂಪ್ಲೈಂಟ್ ದಾಖಲಿಸಿದ್ದು, ಯುವತಿ ನಡೆತೆ ಸರಿ ಇಲ್ಲ. ನನ್ನ ಮನೆ ಬಳಿ‌ಬಂದು ಗಲಾಟೆ ಮಾಡಿ, ಪೋಷಕರಿಗೆ ಬೆದರಿಕೆ ಹಾಕ್ತಾಳೆ ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಸದ್ಯ ಇಬ್ಬರು ಒಬ್ಬರಿಗೋಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದು, ಇಬ್ಬರ ಜಗಳ ಪೊಲೀಸ್ ಠಾಣೆ ಮೆಟ್ಟಿಲೆರಿದ್ದು, ಮುಂದೆ ಇಬ್ಬರ ಪ್ರೇಮ ಪುರಾಣ ಎಲ್ಲಿಗೆ ಹೋಗಿ ನಿಲ್ಲುತ್ತೆ ಕಾದು ನೋಡಬೇಕು. ಕೆಲ ಸೆಲೆಬ್ರೆಟಿಗಳು ಬದುಕಲ್ಲಿ ಲವ್ , ಸೆಕ್ಸ್, ದೋಖಾ ಅನ್ನೊದು ಕಾಮನ್ ಏನೂ ಅನ್ನೋಷ್ಟರ ಮಟ್ಟಿಗೆ ಆಗಿಬಿಟ್ಟಿದೆ. ಹೌದು. ಇದೀಗ ಕರ್ನಾಟಕದ ಕ್ರಿಕೆಟಿಗರೊಬ್ಬರ ಮೇಲೆ ಇಂತಹದೇ ಆರೋಪ ಕೇಳಿ ಬಂದಿದೆ.. ಸದ್ಯ ಕ್ರಿಕೆಟರ್ ನ ಪ್ರೇಮ ಪುರಾಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮಾಜಿ ಸೈನಿಕರೊಬ್ಬರ ಪುತ್ರಿ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ…


ಸದ್ಯ ಇಬ್ಬರು ಒಬ್ಬರಿಗೋಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದು, ಇಬ್ಬರ ಜಗಳ ಪೊಲೀಸ್ ಠಾಣೆ ಮೆಟ್ಟಿಲೆರಿದ್ದು, ಮುಂದೆ ಇಬ್ಬರ ಪ್ರೇಮ ಪುರಾಣ ಎಲ್ಲಿಗೆ ಹೋಗಿ ನಿಲ್ಲುತ್ತೆ ಕಾದು ನೋಡಬೇಕು.

ಸಿದ್ದು ವಾಯ್ಸ ರಿಮೇಕ್‌ ಮಾಡಿದ್ದ ಯುವಕನ ವಿರುದ್ಧ ಪ್ರಕರಣ

Posted by Vidyamaana on 2023-12-20 08:02:16 |

Share: | | | | |


ಸಿದ್ದು ವಾಯ್ಸ ರಿಮೇಕ್‌ ಮಾಡಿದ್ದ ಯುವಕನ ವಿರುದ್ಧ ಪ್ರಕರಣ

ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯ ವಾಯ್ಸ ರಿಮೇಕ್‌ ಮಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಶರತ್‌ ಗೌಡ ವಿರುದ್ಧ ಯುವ ಕಾಂಗ್ರೆಸ್‌ ಕಾರ್ಯಕರ್ತರು ನೀಡಿದ ದೂರಿನನ್ವಯ ನರಸಿಂಹರಾಜಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಿಎಸ್‌ವೈ ಹೇಳಿದ್ದನ್ನು ಸಿದ್ದರಾಮಯ್ಯ ಹೇಳಿದ್ದಾರೆಂದು ವಾಯ್ಸ ರಿಮೇಕ್‌ ಮಾಡಿದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಣವನ್ನು ಎಲ್ಲಿಂದ ತರಲಿ, ಚುನಾವಣೆಗೋಸ್ಕರ ಹೇಳಿರ್ತಿವಿ. ಹೇಳಿದಂತೆ ನಡೆದುಕೊಳ್ಳಲು ಆಗುತ್ತಾ ಎಂದು ಆಡಿಯೋದಲ್ಲಿದೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ : ದ. ಕ ಜಿಲ್ಲೆಯ ಎಲ್ಲ ಶಾಲೆಗಳಿಗೆ ನಾಳೆ (ಜು 9) ರಜೆ

Posted by Vidyamaana on 2024-07-08 20:09:58 |

Share: | | | | |


ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ : ದ. ಕ ಜಿಲ್ಲೆಯ ಎಲ್ಲ ಶಾಲೆಗಳಿಗೆ ನಾಳೆ (ಜು 9) ರಜೆ

ಮಂಗಳೂರು: ದ‌.ಕ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆ ಯ ಶಾಲಾ, ಪಿಯು ಕಾಲೇಜಿಗೆ ಜುಲೈ 09ರಂದು ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ಲೀಲಣ್ಣೆ ದಾಯೆ ಇಂಚ ಮಲ್ತೊಂಡೆರ್..? ಎಲ್ಲರಲ್ಲೂ ಇದೊಂದೇ ಪ್ರಶ್ನೆ

Posted by Vidyamaana on 2023-12-15 08:30:29 |

Share: | | | | |


ಲೀಲಣ್ಣೆ ದಾಯೆ ಇಂಚ ಮಲ್ತೊಂಡೆರ್..? ಎಲ್ಲರಲ್ಲೂ ಇದೊಂದೇ ಪ್ರಶ್ನೆ

ಉಡುಪಿ: ಹೆಸರಾಂತ ರಂಗಕರ್ಮಿ, ಸಮಾಜ ಸೇವಕರಾಗಿದ್ದ ಕಾಪು ಲೀಲಾಧರ ಶೆಟ್ಟಿ (68) ತಮ್ಮ ಪತ್ನಿ ವಸುಂಧರಾ ಶೆಟ್ಟಿ(58) ಜೊತೆಗೆ ದಿಢೀರ್ ಸಾವಿಗೆ ಶರಣಾಗಿರುವುದಕ್ಕೆ ಕಾಪು ಭಾಗದಲ್ಲಿ ಮತ ಭೇದ ಇಲ್ಲದೆ ಜನಸಾಮಾನ್ಯರು ಕಣ್ಣೀರು ಸುರಿಸಿದ್ದಾರೆ. ಜನರ ಜೊತೆಗೆ ಲೀಲಾಧರ ಶೆಟ್ಟಿ ಎಷ್ಟು ಬಾಂಧವ್ಯ ಇಟ್ಟುಕೊಂಡಿದ್ದರು ಎನ್ನುವುದಕ್ಕೆ ಬುಧವಾರ ಸಂಜೆ ಅಂತ್ಯಕ್ರಿಯೆ ಸಂದರ್ಭದಲ್ಲಿ ಸೇರಿದ ಜನಸ್ತೋಮವೇ ಸಾಕ್ಷಿ.


ಇಬ್ಬರ ಮೃತದೇಹಗಳನ್ನೂ ತೆರೆದ ವಾಹನದಲ್ಲಿರಿಸಿ ಕಾಪು ಪೇಟೆಯಿಂದ ಮೆರವಣಿಗೆ ಮೂಲಕ ತಂದು ಕರಂದಾಡಿಯ ಶ್ರೀರಾಮ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು. ಮೆರವಣಿಗೆ ಉದ್ದಕ್ಕೂ ಸಾವಿರಾರು ಮಂದಿ ಸೇರಿದ್ದಲ್ಲದೆ, ಎಲ್ಲರೂ ಕಣ್ಣಲ್ಲಿ ನೀರು ಸುರಿಸಿಕೊಂಡೇ ಹೆಜ್ಜೆ ಹಾಕಿದರು. ಕಾಪು ಪೇಟೆಯಲ್ಲಿ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ಮುಚ್ಚಿ ಗೌರವ ಸೂಚಿಸಿದರು. ಇಡೀ ಕಾಪು ಪೇಟೆಯೇ ಸ್ಮಶಾನ ಮೌನಕ್ಕೆ ಜಾರಿತ್ತು. ಬಳಿಕ ಕರಂದಾಡಿಯ ಮನೆಯ ಆವರಣದಲ್ಲಿ ಲೀಲಾಧರ ಶೆಟ್ಟಿ ದಂಪತಿ ಶವಗಳನ್ನು ಒಂದೇ ಚಿತೆಯಲ್ಲಿಟ್ಟು ಅಗ್ನಿಸ್ಪರ್ಶ ಮಾಡಲಾಯಿತು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಲಾಲಾಜಿ ಮೆಂಡನ್, ಐಕಳ ಹರೀಶ್ ಶೆಟ್ಟಿ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಸೇರಿದ್ದರು.ಮರ್ಯಾದೆಗೆ ಅಂಜಿ ಸಾವಿಗೆ ಶರಣು


ಲೀಲಾಧರ ಶೆಟ್ಟಿ ಸಾವಿನ ಸುದ್ದಿ ಬರುತ್ತಲೇ, ದಿಢೀರ್ ಯಾಕೆ ಈ ರೀತಿ ಮಾಡಿಕೊಂಡರು, ಅವರು ಆತ್ಮಹತ್ಯೆ ಮಾಡಿಕೊಳ್ಳುವ ಜನವೇ ಅಲ್ಲ ಅನ್ನುವುದೇ ಎಲ್ಲರ ಮಾತಾಗಿತ್ತು. ಯಾಕಂದ್ರೆ, ಸಾವಿನ ದಾರಿ ಹಿಡಿದ ಹಲವಾರು ಮಂದಿಗೆ ಲೀಲಾಧರ ಶೆಟ್ಟಿ ಅವರೇ ದಿಕ್ಕು ತೋರಿಸಿದ್ದರು. ಎಷ್ಟೋ ಮಂದಿಗೆ ಉದ್ಯೋಗ, ಸಹಾಯ ಒದಗಿಸಿ ಜನರ ಪಾಲಿಗೆ ಕರುಣಾಮಯಿ ಆಗಿದ್ದರು. ಜಾತಿ ಭೇದ ಇಲ್ಲದೆ, ಸಮಾಜದಲ್ಲಿ ಸೇವೆಯನ್ನೇ ವೃಥವನ್ನಾಗಿಸಿಕೊಂಡಿದ್ದರು. ಈಗ ತಿಳಿದುಬರುತ್ತಿರುವ ಮಾಹಿತಿ ಪ್ರಕಾರ, ಲೀಲಾಧರ ಶೆಟ್ಟಿ ದಂಪತಿ ತಮ್ಮ ಸಾವಿನ ಬಗ್ಗೆ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತಮ್ಮ ಮರ್ಯಾದೆ ಹೋದ ಕಾರಣಕ್ಕೆ ಇಂತಹ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ ಎನ್ನಲಾಗುತ್ತಿದೆ.   ಇದೇ ವಿಚಾರದಲ್ಲಿ ಲೀಲಾಧರ ಶೆಟ್ಟಿ ಅವರ ಅಕ್ಕನ ಮಗ ಮೋಹನ್ ಕುಮಾರ್ ಶೆಟ್ಟಿ ಕಾಪು ಠಾಣೆಗೆ ನೀಡಿರುವ ದೂರಿನಲ್ಲಿ ಮಾಹಿತಿಗಳನ್ನು ಉಲ್ಲೇಖಿಸಿದ್ದಾರೆ. ಲೀಲಾಧರ ಶೆಟ್ಟಿ ದಂಪತಿ ಮಕ್ಕಳಿಲ್ಲದ ಕಾರಣ 16 ವರ್ಷಗಳ ಹಿಂದೆ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದರು. ಬೆಳೆದು ದೊಡ್ಡವಳಾಗಿದ್ದ ಆಕೆ ಪಿಯುಸಿ ಓದುತ್ತಿದ್ದಳು. ಇತ್ತೀಚೆಗೆ ಮನೆಯ ದುರಸ್ತಿ ಕಾರ್ಯಕ್ಕೆ ತಮಿಳುನಾಡು ಮೂಲದ ಯುವಕನೊಬ್ಬ ಬಂದಿದ್ದು ಆತನ ಜೊತೆಗೆ ಯುವತಿಗೆ ಪ್ರೀತಿಯಾಗಿತ್ತು. ಎರಡು ದಿನಗಳ ಹಿಂದೆ ಆಕೆ ಮನೆ ಬಿಟ್ಟು ಹೋಗಿದ್ದು, ತನ್ನನ್ನು ಹುಡುಕುವುದು ಬೇಡ. ತನ್ನ ಸ್ವಇಚ್ಛೆಯಿಂದ ತೆರಳುತ್ತಿರುವುದಾಗಿ ಪತ್ರ ಬರೆದಿಟ್ಟಿದ್ದಳು. ಆಕೆ, ತಮಿಳುನಾಡಿನ ಯುವಕನ ಜೊತೆಗೆ ತೆರಳಿರುವ ಶಂಕೆ ಇದೆ. ಮಗಳು ನಾಪತ್ತೆಯಾದ ಬಗ್ಗೆ ಲೀಲಾಧರ ಶೆಟ್ಟಿ ದಂಪತಿ ಹುಡುಕಾಡಿದ್ದು, ಸಿಗದೇ ಇದ್ದಾಗ ಮಾನಸಿಕವಾಗಿ ಕುಗ್ಗಿದ್ದರಿಂದ ಬದುಕು ಕೊನೆಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.


ದತ್ತು ಪುತ್ರಿ ಮನೆ ಬಿಟ್ಟು ಹೋಗಿದ್ದರಿಂದ ಮರ್ಯಾದೆಗೆ ಅಂಜಿ, ಸಮಾಜಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿನಲ್ಲಿ ಬೇರೆ ಯಾವುದೇ ಸಂಶಯಗಳಿಲ್ಲ ಎಂದು ಮೋಹನ್ ಕುಮಾರ್ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ. ಯುವತಿ ಕಾಣೆಯಾದ ಬಗ್ಗೆ ಮತ್ತು ದಂಪತಿ ಆತ್ಮಹತ್ಯೆ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recent News


Leave a Comment: