ಸೊಳ್ಳೆ ಕಚ್ಚಿದ ಎಷ್ಟು ದಿನದ ನಂತ್ರ ಡೆಂಗ್ಯೂ ಬರುತ್ತೆ.? ತಡೆಯುವುದು ಹೇಗೆ.? ಇಲ್ಲಿದೆ ಮಾಹಿತಿ

ಸುದ್ದಿಗಳು News

Posted by vidyamaana on 2024-07-01 19:31:51 |

Share: | | | | |


ಸೊಳ್ಳೆ ಕಚ್ಚಿದ ಎಷ್ಟು ದಿನದ ನಂತ್ರ ಡೆಂಗ್ಯೂ ಬರುತ್ತೆ.? ತಡೆಯುವುದು ಹೇಗೆ.? ಇಲ್ಲಿದೆ ಮಾಹಿತಿ

ಮಳೆಗಾಲ ಆರಂಭವಾಗಿದ್ದು, ಈ ಋತುವಿನಲ್ಲಿ ಆರೋಗ್ಯದ ಕಡೆ ಗಮನಹರಿಸುವುದು ಅಗತ್ಯವಾಗಿದೆ. ಋತುಮಾನದ ಕಾಯಿಲೆಗಳ ಜೊತೆಗೆ ಡೆಂಗ್ಯೂ ಅಪಾಯವಿದೆ. ಡೆಂಗ್ಯೂ ವಾಸ್ತವವಾಗಿ ಹೆಣ್ಣು ಈಜಿಪ್ಟಿ (ಈಡಿಸ್ ಸೊಳ್ಳೆ) ಸೊಳ್ಳೆಗಳಿಂದ ಹರಡುತ್ತದೆ.

ಈ ಸೊಳ್ಳೆಗಳ ಜೀವಿತಾವಧಿ ಕೇವಲ ಒಂದು ತಿಂಗಳು ಮಾತ್ರ. ಆದ್ರೆ, ಈ ಅವಧಿಯಲ್ಲಿ ಅವು 500 ರಿಂದ 1000 ಸೊಳ್ಳೆಗಳಿಗೆ ಜನ್ಮ ನೀಡುತ್ತವೆ. ಈ ಸೊಳ್ಳೆಗಳು ಕೇವಲ ಮೂರು ಅಡಿ ಮಾತ್ರ ಹಾರಬಲ್ಲವು. ಈ ಕಾರಣಕ್ಕಾಗಿ ಅವು ಕೇವಲ ಮನುಷ್ಯನ ಕೆಳಗಿನ ಅಂಗಗಳನ್ನ ಗುರಿಯಾಗಿಸುತ್ತಾರೆ. ಈ ಸೊಳ್ಳೆಗಳು ಕಚ್ಚಿದರೆ ತೀವ್ರ ಜ್ವರದ ಜೊತೆಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಡೆಂಗ್ಯೂ ಸೊಳ್ಳೆಗಳು ಕೂಲರ್‌, ಹೂವಿನ ಕುಂಡಗಳು, ಹಳೆಯ ಪಾತ್ರೆಗಳು ಅಥವಾ ಮನೆಯ ಛಾವಣಿಗಳು, ಟೈರ್‌ಗಳು, ಗುಂಡಿಗಳು ಇತ್ಯಾದಿಗಳಲ್ಲಿ ತಮ್ಮ ಮೊಟ್ಟೆಗಳನ್ನ ಇಡುತ್ತವೆ. ಡೆಂಗ್ಯೂ ಸೊಳ್ಳೆಗಳು ಒಮ್ಮೆಗೆ 100 ರಿಂದ 300 ಮೊಟ್ಟೆಗಳನ್ನ ಇಡುತ್ತವೆ. 4 ದಿನಗಳ ನಂತರ ಅವು ಸೊಳ್ಳೆಗಳಾಗಿ ರೂಪಾಂತರಗೊಳ್ಳುತ್ತವೆ. ಸೊಳ್ಳೆಗಳು ಹುಟ್ಟಿದ 2 ದಿನಗಳಲ್ಲಿ ಹಾರಲು ಪ್ರಾರಂಭಿಸುತ್ತವೆ.

ಡೆಂಗ್ಯೂ ಸೊಳ್ಳೆ ಕಚ್ಚಿದ ತಕ್ಷಣ ಡೆಂಗ್ಯೂ ಲಕ್ಷಣಗಳು ಕಾಣಿಸುವುದಿಲ್ಲ. ಆದ್ರೆ, ಕೆಲವು ದಿನಗಳ ನಂತರ ಅದರ ಪರಿಣಾಮಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಈಡಿಸ್ ಸೊಳ್ಳೆಗಳು ಕಚ್ಚಿದ 3 ರಿಂದ 5 ದಿನಗಳ ನಂತರ ಡೆಂಗ್ಯೂ ಜ್ವರ ಬರುತ್ತದೆ. ಈ ಸೊಳ್ಳೆಗಳು ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಮಾತ್ರ ಸಂಚರಿಸುತ್ತಿದ್ದು, ಡೆಂಗ್ಯೂ ಸೊಳ್ಳೆಗಳು ಮನೆಗಳ ಮೂಲೆಗಳಲ್ಲಿ ಪರದೆಯ ಹಿಂದೆ, ಸೊಳ್ಳೆಗಳು ಇರುವ ಸ್ಥಳಗಳಲ್ಲಿ ಅಡಗಿಕೊಳ್ಳುತ್ತವೆ.

ಡೆಂಗ್ಯೂ ಜ್ವರದ ಲಕ್ಷಣಗಳು.!

ಡೆಂಗ್ಯೂ ಈಡಿಸ್ ಸೊಳ್ಳೆಯ ಕಚ್ಚುವಿಕೆಯಿಂದ ಉಂಟಾಗುವ ಗಂಭೀರ ಕಾಯಿಲೆಯಾಗಿದ್ದು, ಇದರ ಲಕ್ಷಣಗಳು ಸಾಮಾನ್ಯವಾಗಿ ಜ್ವರದಂತಿರುತ್ತವೆ. ಆದ್ರೆ, ಇದು ತೀವ್ರವಾದ ಹೆಮರಾಜಿಕ್ ಜ್ವರಕ್ಕೆ ಕಾರಣವಾಗಬಹುದು. ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯವಿದೆ ಎನ್ನುತ್ತಾರೆ ವೈದ್ಯರು.

ಲಕ್ಷಣಗಳೇನು.?

ತೀವ್ರವಾದ ಜ್ವರ, ತಲೆನೋವು, ಸ್ನಾಯು ನೋವು, ಚರ್ಮದ ಮೇಲೆ ಕೆಂಪು ಗುಳ್ಳೆಗಳು, ಕಣ್ಣುಗಳ ಕೆಳಗೆ ನೋವು, ಮೊಣಕಾಲು ನೋವು, ಊತ, ಹಲ್ಲು, ಮೂಗು, ಒಸಡುಗಳಿಂದ ರಕ್ತಸ್ರಾವ ಇತ್ಯಾದಿಗಳನ್ನ ಗಮನಿಸಿದರೆ ತಕ್ಷಣವೇ ಎಚ್ಚರಗೊಳ್ಳಿ.

ಡೆಂಗ್ಯೂ ತಡೆಗಟ್ಟುವುದು ಹೇಗೆ.?

* ವಿಶೇಷವಾಗಿ ಮಳೆಗಾಲದಲ್ಲಿ ದೇಹವನ್ನ ಸಂಪೂರ್ಣವಾಗಿ ಮುಚ್ಚುವ ಬಟ್ಟೆಗಳನ್ನ ಧರಿಸಿ.

* ಮಲಗುವಾಗ ಸೊಳ್ಳೆ ಪರದೆಗಳನ್ನ ಬಳಸಿ.

* ಸೊಳ್ಳೆ ಕಡಿತವನ್ನು ತಡೆಯಲು ದೇಹಕ್ಕೆ ಎಣ್ಣೆ ಅಥವಾ ಕ್ರೀಮ್ ಹಚ್ಚಿ.

* ನಿಮ್ಮ ಮನೆ ಮತ್ತು ಸುತ್ತಮುತ್ತ ಕೊಳಕು ನೀರು ಬರುವುದನ್ನ ತಪ್ಪಿಸಿ.

* ಅನಗತ್ಯ ವಸ್ತುಗಳು ಹಾಗೂ ಕೂಲರ್ ಕಾಲಕಾಲಕ್ಕೆ ಸ್ವಚ್ಛಗೊಳಿಸುತ್ತಿರಬೇಕು.

* ಡೆಂಗ್ಯೂ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

 Share: | | | | |


ಚಿತ್ರದುರ್ಗದಲ್ಲಿ 5 ಅಸ್ಥಿಪಂಜರ ಪ್ರಕರಣ 4 ವರ್ಷದ ಹಿಂದಿನ ಡೆತ್‍ನೋಟ್ ಪತ್ತೆ

Posted by Vidyamaana on 2023-12-29 21:43:01 |

Share: | | | | |


ಚಿತ್ರದುರ್ಗದಲ್ಲಿ 5 ಅಸ್ಥಿಪಂಜರ ಪ್ರಕರಣ  4 ವರ್ಷದ ಹಿಂದಿನ ಡೆತ್‍ನೋಟ್ ಪತ್ತೆ

ಚಿತ್ರದುರ್ಗ, ಡಿ 29: ಪಾಳು ಬಿದ್ದ ಮನೆಯಲ್ಲಿ ಐವರ ಅಸ್ಥಿ ಪಂಜರ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. 4 ವರ್ಷದ ಹಿಂದಿನ ಡೆತ್‍ನೋಟ್ ಇದೀಗ ಐವರ ಸಾವಿನ ಸುಳಿವನ್ನು ಕೊಟ್ಟಿದೆ.


ಜೈಲು ಪಾಲಾಗಿದ್ದಕ್ಕೆ ಮನನೊಂದು ಐವರು ಸಾವಿಗೆ ಶರಣಾಗಿರುವುದು ಬಯಲಾಗಿದೆ. ಸಾವಿಗೂ ಮುನ್ನ ಈ ಐವರು ಡೆತ್‍ನೋಡ್ ಬರೆದಿಟ್ಟಿದ್ದು, ಅದರಲ್ಲಿ ಕಾರಣವನ್ನು ತಿಳಿಸಿದ್ದಾರೆ.ಮೃತ ಜಗನ್ನಾಥರೆಡ್ಡಿ ಪುತ್ರ ನರೇಂದ್ರರೆಡ್ಡಿ ವಿರುದ್ಧ ದರೋಡೆ ಪ್ರಕರಣ ದಾಖಲಾಗಿತ್ತು. 2013ರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ನರೇಂದ್ರ ರೆಡ್ಡಿ ಎಂಜಿನಿಯರ್ ಆಗಿದ್ದರು. ಇದೇ ವರ್ಷ ಬಿಡದಿ ಬಳಿ ಅವರ ವಾಹನವನ್ನು ತಡೆದು ದರೋಡೆ ಕೇಸ್ ದಾಖಲು ಮಾಡಲಾಗಿತ್ತು. ನರೇಂದ್ರ ಅವರು ತಮ್ಮ ಗೆಳೆಯರ ಜೊತೆ ತೆರಳಿ ದರೋಡೆ ಕೇಸಲ್ಲಿ ಭಾಗಿ ಆಗಿದ್ದರು. ಹೀಗಾಗಿ ದರೋಡೆ ಕೇಸಲ್ಲಿ ಕೆಲದಿನ ಜೈಲುವಾಸವನ್ನೂ ಅನುಭವಿಸಿದ್ದರು. ನರೇಂದ್ರರೆಡ್ಡಿ ವಿರುದ್ಧದ ಕೇಸಿನಿಂದ ಮನನೊಂದಿದ್ದ ಕುಟುಂಬ 2019ರಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಶರಣಾಗಿದೆ.


ಜಗನ್ನಾಥರೆಡ್ಡಿ ಮನೆಯಲ್ಲಿದ್ದ ಒಂದು ಸಾಕುನಾಯಿ ಸಹ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಪಾಳು ಬಿದ್ದ ಮನೆಯಲ್ಲಿ ಐವರ ಅಸ್ಥಿ ಪಂಜರ ಪತ್ತೆ ಕೇಸ್ ಸಂಬಂಧಿಸಿದಂತೆ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಮನೆಯಲ್ಲಿ ಸಾಕಿದ್ದ ನಾಯಿಯೊಂದು ಸಾವಿಗೀಡಾಗಿದ್ದು ಪತ್ತೆಯಾಗಿದೆ.


ಪಾಳು ಬಿದ್ದ ಮನೆಯಲ್ಲಿ ಐವರ ಅಸ್ಥಿ ಪಂಜರ ಪತ್ತೆಯಾದ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಮೃತ ಜಗನ್ನಾಥ ರೆಡ್ಡಿ ಸಹೋದರನ ಪತ್ನಿ ಕೊಲ್ಲಿಲಕ್ಷ್ಮಿ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ಜಗನ್ನಾಥ ರೆಡ್ಡಿ ಕುಟುಂಬಸ್ಥರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಸಕಾಲಕ್ಕೆ ಮಕ್ಕಳ ಮದುವೆ ಆಗದಿದ್ದಕ್ಕೆ ಮನನೊಂದಿದ್ದರು. ಮನನೊಂದು ಸಾವಾಗಿರುವ ಶಂಕೆ ವ್ಯಕ್ತಪಡಿಸಿದ ಅವರು, ಹಲವು ವರ್ಷಗಳಿಂದ ನಮ್ಮ ಸಂಪರ್ಕದಲ್ಲಿ ಇರಲಿಲ್ಲ ಎಂದರು.


ಇತ್ತ ಮೃತ ಪ್ರೇಮಕ್ಕ ಸಹೋದರಿ ಲಲಿತಾ ಪ್ರತಿಕ್ರಿಯಿಸಿ, 8 ವರ್ಷದಿಂದ ಅವರು ಸಂಪರ್ಕದಲ್ಲಿ ಇಲ್ಲ. 8 ವರ್ಷಗಳಿಂದ ಫೋನ್ ಮಾಡ್ತಿದ್ದೆ ಸಿಗ್ತಿರಲಿಲ್ಲ. ಎಲ್ಲೋ ಅನಾಥಶ್ರಮಕ್ಕೆ ಸೇರಬಹುದು ಅಂತಾ ಸುಮ್ಮನಾದೆ. ನನ್ನ ತಂಗಿ ಯಾರದ್ದೂ ಮದುವೆ ಮಾಡಲಿಲ್ಲ. ನನ್ನ ತಂಗಿ ಮಾಡಿದ ತಪ್ಪಿಗೆ ಯಾರಿಗೂ ಮದುವೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾದ್ರೆ ಖಡಕ್ ಕ್ರಮ : ದಂಡ ಕಟ್ಟಿದ ಮೇಲೆಯೇ ಸಿಗೋದು ಜಾಮೀನು..!

Posted by Vidyamaana on 2024-02-05 07:32:42 |

Share: | | | | |


ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾದ್ರೆ ಖಡಕ್ ಕ್ರಮ : ದಂಡ ಕಟ್ಟಿದ ಮೇಲೆಯೇ ಸಿಗೋದು ಜಾಮೀನು..!

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ / ಖಾಸಗಿ ಆಸ್ತಿಗಳಿಗೆ ಉಂಟಾದ ಹಾನಿಯ ಮಾರುಕಟ್ಟೆ ಮೌಲ್ಯಕ್ಕೆ ಸಮಾನವಾದ ಭಾರಿ ದಂಡವನ್ನು ವಿಧಿಸುವ ಗುರಿಯನ್ನು ಹೊಂದಿರುವ ಅಸ್ತಿತ್ವದಲ್ಲಿರುವ ಕಾನೂನುಗಳಿಗೆ ತಿದ್ದುಪಡಿಗಳನ್ನು ಕಾನೂನು ಆಯೋಗ ಶುಕ್ರವಾರ ಸರ್ಕಾರಕ್ಕೆ ಶಿಫಾರಸು ಮಾಡಿದೆ.ಜಾಮೀನು ಪಡೆಯುವ ಷರತ್ತಾಗಿ ಹಾನಿಗೊಳಗಾದ ಸಾರ್ವಜನಿಕ ಆಸ್ತಿಯ ಅಂದಾಜು ಮೌಲ್ಯವನ್ನು ಠೇವಣಿ ಇಡುವಂತೆ ಅಪರಾಧಿಗಳಿಗೆ ಸೂಚಿಸುವುದರಿಂದ ಅಂತಹ ಕೃತ್ಯಗಳನ್ನು ತಡೆಯಬಹುದು ಎಂದು ಕಾನೂನು ಆಯೋಗ ಹೇಳಿದೆ.


ಕಾನೂನು ಸಮಿತಿಯ ವರದಿ ಮಹತ್ವದ್ದಾಗಿದೆ, ವಿಶೇಷವಾಗಿ ವಿರೋಧ ಪಕ್ಷಗಳು ಮತ್ತು ಗುಂಪುಗಳು ಆಗಾಗ್ಗೆ ಪ್ರತಿಭಟನೆಗಳಿಗೆ ಕರೆ ನೀಡುತ್ತಿರುವುದರಿಂದ ರಾಷ್ಟ್ರ ರಾಜಧಾನಿಯಲ್ಲಿ ಪದೇ ಪದೇ ಅಡಚಣೆ ಉಂಟಾಗುತ್ತಿವೆ.

ಪ್ರತಿಭಟನೆ, ಗುಂಪು ಗಲಾಟೆಯಂತಹ ಸಂದರ್ಭದಲ್ಲಿ ಸಾರ್ವಜನಿಕ / ಖಾಸಗಿ ಆಸ್ತಿಗಳಿಗೆ ಹಾನಿ ಉಂಟುಮಾಡುವುದು ಮತ್ತು ಸಾರ್ವಜನಿಕರಿಗೆ ಅನಾನುಕೂಲತೆಯನ್ನುಂಟುಮಾಡುವುದನ್ನು ಗಮನಿಸಿದ ಕಾನೂನು ಆಯೋಗವು ಕಾನೂನುಗಳಿಗೆ ತಿದ್ದುಪಡಿಗಳನ್ನು ಶಿಫಾರಸು ಮಾಡಿದೆ,ಅಂತಹ ಸಂಘಟನೆಯ ಜವಾಬ್ದಾರಿಯುತ ಪದಾಧಿಕಾರಿಗಳನ್ನು “ಅಪರಾಧಕ್ಕೆ ಪ್ರಚೋದನೆ ನೀಡಿದ ಅಪರಾಧಕ್ಕಾಗಿ ತಪ್ಪಿತಸ್ಥರೆಂದು ಪರಿಗಣಿಸಿ ದಂಡ ವಿಧಿಸಲಾಗುತ್ತದೆ.


ದಂಡವು ಹಾನಿಗೊಳಗಾದ ಸಾರ್ವಜನಿಕ ಆಸ್ತಿಯ ಮಾರುಕಟ್ಟೆ ಮೌಲ್ಯಕ್ಕೆ ಸಮನಾದ ಮೊತ್ತವನ್ನು ಒಳಗೊಂಡಿರುತ್ತದೆ ಅಥವಾ ಹಾನಿಗೊಳಗಾದ ಆಸ್ತಿಯ ಮೌಲ್ಯವನ್ನು ಹಣದ ದೃಷ್ಟಿಯಿಂದ ನಿರ್ಣಯಿಸಲು ಸಮರ್ಥವಾಗಿಲ್ಲದಿದ್ದರೆ, ಪ್ರಕರಣದ ವಾಸ್ತವಾಂಶಗಳು ಮತ್ತು ಸಂದರ್ಭಗಳನ್ನು ಗಣನೆಗೆ ತೆಗೆದುಕೊಂಡು ನ್ಯಾಯಾಲಯವು ನಿಗದಿಪಡಿಸಬಹುದಾದ ಮೊತ್ತವನ್ನು ಒಳಗೊಂಡಿರುತ್ತದೆ” ಎಂದು ಕಾನೂನು ಸಮಿತಿ ಹೇಳಿದೆ. ಈ ಉದ್ದೇಶಕ್ಕಾಗಿ, ಕೇರಳ ಖಾಸಗಿ ಆಸ್ತಿಗೆ ಹಾನಿ ತಡೆಗಟ್ಟುವ ಮತ್ತು ಪರಿಹಾರ ಪಾವತಿ ಕಾಯ್ದೆಯಂತಹ ಪ್ರತ್ಯೇಕ ಕಾನೂನನ್ನು ಸರ್ಕಾರ ತರಬಹುದು ಎಂದು ಸಮಿತಿ ಹೇಳಿದೆ.ಮಾನವ ಹಕ್ಕುಗಳ ಗುಂಪುಗಳು ಮತ್ತು ರಾಜಕೀಯ ಪಕ್ಷಗಳು ತಮ್ಮ ಹಕ್ಕನ್ನು ಸಂಯಮದಿಂದ ಮತ್ತು ಎಲ್ಲಾ ಸಮಯದಲ್ಲೂ ಶಾಂತಿಯುತವಾಗಿ ಚಲಾಯಿಸುವ ಅಗತ್ಯವಿದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಆಯೋಗ ಎಚ್ಚರಿಸಿದೆ.ಈ ನಿಟ್ಟಿನಲ್ಲಿ, ಸಾರ್ವಜನಿಕ ಆಸ್ತಿಯ ಮೇಲೆ ನಿರ್ದೇಶಿಸಲಾದ ವಿಧ್ವಂಸಕ ಕೃತ್ಯಗಳನ್ನು ಅಪರಾಧೀಕರಿಸುವ ಗುರಿಯನ್ನು ಹೊಂದಿರುವ ‘ಸಾರ್ವಜನಿಕ ಆಸ್ತಿಗೆ ಹಾನಿ ತಡೆಗಟ್ಟುವ ಕಾಯ್ದೆ 1984’ ನ್ನು ಉಲ್ಲೇಖಿಸಿದೆ..

ಪುತ್ತೂರು ಶಾಸಕರ ಇಂದಿನ ಕಾರ್ಯಕ್ರಮ ಜು 08

Posted by Vidyamaana on 2023-07-08 00:52:56 |

Share: | | | | |


ಪುತ್ತೂರು ಶಾಸಕರ ಇಂದಿನ ಕಾರ್ಯಕ್ರಮ ಜು 08

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಜುಲೈ 8 ರಂದು.

ಬೆಳ್ಳಗ್ಗೆ 10 ಗಂಟೆಗೆ

ಸರ್ಕಾರಿ ಪ್ರಥಮ ಧರ್ಜೆ ಕಾಲೇಜು ವಿಟ್ಲ  ವಾರ್ಷಿಕೋತ್ಸವ


ಬೆಳಗ್ಗೆ 11 ಗಂಟೆಗೆ

*ಸರ್ಕಾರಿ ಪ್ರಥಮ ಧರ್ಜೆ ಕಾಲೇಜು ಜಿಡೆಕಲ್ಲು ವಾರ್ಷಿಕೋತ್ಸವ*

*ಸಂಜೆ 4 ಗಂಟೆಗೆ*

*ಆರ್ಯಾಪು ಕೃಷಿ ಪಥಿನ ಸಹಕಾರಿ ಸಂಘದಲ್ಲಿ ಇಂದಿರಾ ಸೇವಾ ಕೇಂದ್ರ ಉದ್ಘಾಟನೆ

ಸಂಜೆ 4:30

ಕುರಿಯ  ಕೃಷಿ ಪಥಿನ ಸಹಕಾರಿ ಸಂಘದಲ್ಲಿ ಇಂದಿರಾ ಸೇವಾ ಕೇಂದ್ರ ಉದ್ಘಾಟನೆ

ಸಂಜೆ 7.30 ಶ್ರೀ ಶನೀಶ್ವರ ಸನ್ನಿಧಿ ಬನ್ನೂರು ಇವರಿಂದ ಶನೀಶ್ವರ ಪೂಜೆ ಹಾಗೂ ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ  ಭಾಗವಹಿಸಲಿದ್ದಾರೆ.

14 ಟಿವಿ ಆ್ಯಂಕರ್‌ಗಳನ್ನು ಬಹಿಷ್ಕರಿಸಿದ INDIA ಮೈತ್ರಿಕೂಟ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ?

Posted by Vidyamaana on 2023-09-15 09:06:27 |

Share: | | | | |


14 ಟಿವಿ ಆ್ಯಂಕರ್‌ಗಳನ್ನು ಬಹಿಷ್ಕರಿಸಿದ INDIA ಮೈತ್ರಿಕೂಟ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ?

ಮುಂಬೈ: ವಿರೋಧ ಪಕ್ಷದ ಮೈತ್ರಿಕೂಟ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್ (INDIA) ಈಗ ಕೆಲವು ಟಿವಿ ಆ್ಯಂಕರ್‌ಗಳನ್ನು ಬಹಿಷ್ಕರಿಸಿದೆ.  


ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಮುಖ್ಯಸ್ಥ ಶರದ್ ಪವಾರ್ ಅವರ ನಿವಾಸದಲ್ಲಿ ಬುಧವಾರ ನಡೆದ ಸಮನ್ವಯ ಸಮಿತಿಯ ಮೊದಲ ಸಭೆಯಲ್ಲಿ INDIA ಮೈತ್ರಿಕೂಟ ಈ ನಿರ್ಧಾರವನ್ನು ತೆಗೆದುಕೊಂಡಿದೆ.


ವಾಸ್ತವವಾಗಿ, ಮಾಧ್ಯಮದ ಒಂದು ವಿಭಾಗವು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ವಿರೋಧ ಪಕ್ಷಗಳು ಹಲವು ಬಾರಿ ಆರೋಪಿಸಿವೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಭೇಟಿಗೆ ಮಾಧ್ಯಮಗಳು ಅಗತ್ಯ ಪ್ರಸಾರವನ್ನು ನೀಡಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.ಮೈತ್ರಿಕೂಟದ ಸಮನ್ವಯ ಸಮಿತಿಯ ಮೊದಲ ಸಭೆಯು ದೆಹಲಿಯ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರ ನಿವಾಸದಲ್ಲಿ ನಡೆಯಿತು. ಶರದ್ ಪವಾರ್ ಹೊರತುಪಡಿಸಿ, ಕಾಂಗ್ರೆಸ್‌ನ ಕೆಸಿ ವೇಣುಗೋಪಾಲ್, ಡಿಎಂಕೆಯ ಟಿಆರ್ ಬಾಲು, ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್, ಜನತಾ ದಳದ (ಯುನೈಟೆಡ್) ಸಂಜಯ್ ಝಾ, ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ, ಶಿವಸೇನೆಯ (ಯುಬಿಟಿ) ಸಂಜಯ್ ರಾವತ್, ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ್ದರು.


ಭಾರತ ಮೈತ್ರಿಯಿಂದ ಬಹಿಷ್ಕರಿಸಿದ ಆಂಕರ್‌ಗಳು:

* ಅದಿತಿ ತ್ಯಾಗಿ

* ಅಮನ್ ಚೋಪ್ರಾ

* ಅಮಿಶ್ ದೇವಗನ್

* ಆನಂದ ನರಸಿಂಹನ್

* ಅರ್ನಾಬ್ ಗೋಸ್ವಾಮಿ

* ಅಶೋಕ್ ಶ್ರೀವಾಸ್ತವ

* ಚಿತ್ರಾ ತ್ರಿಪಾಠಿ

* ಗೌರವ್ ಸಾವಂತ್

* ನಾವಿಕ ಕುಮಾರ್

* ಪ್ರಾಚಿ ಪರಾಶರ

* ರೂಬಿಕಾ ಲಿಯಾಕತ್

* ಶಿವ ಆರೂರ್

* ಸುಧೀರ್ ಚೌಧರಿ

* ಸುಶಾಂತ್ ಸಿನ್ಹಾ

ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಯುವತಿ ಆತ್ಮಹತ್ಯೆ

Posted by Vidyamaana on 2024-02-15 13:02:04 |

Share: | | | | |


ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಯುವತಿ ಆತ್ಮಹತ್ಯೆ

ಬಂಟ್ವಾಳ : ಚಲಿಸುತ್ತಿರುವ ರೈಲಿನಿಂದ ಯುವತಿಯೋರ್ವಳು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿ.ಸಿ.ರೋಡ್ ಸಮೀಪದ ಕೈಕುಂಜೆ ಎಂಬಲ್ಲಿ ಗುರುವಾರ ಬೆಳಿಗ್ಗೆ 6. 30 ರ ವೇಳೆಗೆ ನಡೆದಿದೆ.


    ಈಕೆ ತುಮಕೂರು ಜಿಲ್ಲೆಯ ನಯನ್ ಎಂ.ಜಿ.(27) ಆಗಿರಬಹುದು ಎಂದು ಅವಳ ಬ್ಯಾಗ್ ನಲ್ಲಿ ಸಿಕ್ಕಿರುವ ಆಧಾರ್ ಕಾರ್ಡ್ ನ ಮಾಹಿತಿಯಂತೆ ಅಂದಾಜಿಸಲಾಗಿದೆ.


    ಆಧಾರ್ ಕಾರ್ಡ್ ನಲ್ಲಿ c/o ಎಮ್. ಗೋವಿಂದರಾಜು ಪಡಸಾಲೆಹಟ್ಟಿ, ಮಿಡಿಗೇಶಿ, ಮಧುಗಿರಿ ತಾಲೂಕು ತುಮಕೂರು ಜಿಲ್ಲೆ ಹೊಸಕರೆ ಎಂಬ ವಿಳಾಸವಿದ್ದು ಆಕೆ ಕಣ್ಣೂರು-ಬೆಂಗಳೂರು- ಮಂಗಳೂರು ರೈಲಿನಲ್ಲಿ ಬಂದಿದ್ದಾಳೆ.

ಅವಳು ಕುಳಿತು ಕೊಂಡಿದ್ದ ಸೀಟಿನಲ್ಲಿದ್ದ ಬ್ಯಾಗ್ ನ್ನು ರೈಲ್ವೆ ಸಿಬ್ಬಂದಿಗಳು ಬಿ.ಸಿ.ರೋಡಿನ ಕಚೇರಿಗೆ ನೀಡಿ ವಿಚಾರ ತಿಳಿಸಿದ್ದಾರೆ.

ಆಕೆಯ ಸ್ಪಷ್ಟ ವಿಳಾಸ ಮತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಯೇ ಅಥವಾ ಆಕಸ್ಮಿಕವಾಗಿ ಕೈತಪ್ಪಿ ಬಿದ್ದಿರಬಹುದೇ ಎಂದು ಇನ್ನೂ ಖಚಿತಗೊಂಡಿಲ್ಲ.

    ರೈಲಿನಲ್ಲಿದ್ದ ಪ್ರಯಾಣಿಕರು ರೈಲಿನಿಂದ  ಹಾರಿದ ಬಗ್ಗೆ ಮಾಹಿತಿ ನೀಡಿದ್ದಾರೆ. ನದಿಯಲ್ಲಿ ತೇಲಾಡುವ ಸ್ಥಿತಿಯಲ್ಲಿದ್ದ ಮಹಿಳೆಯ ಮೃತದೇಹವನ್ನು ಗೂಡಿನಬಳಿಯ   ಮಹಮ್ಮದ್ ಮಮ್ಮು ನೇತ್ರತ್ವದ ಜೀವರಕ್ಷಕ ತಂಡದ ಇರ್ಶಾದ್ ಡ್ರೀಮ್ಸ್, ಮನ್ಸೂರ್ ವಝೀರ್ ಅವರು ಮೇಲಕ್ಕೆತ್ತಿದ್ದಾರೆ. ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

    ರೈಲ್ವೇ ಪೊಲೀಸರು ಹಾಗೂ ಬಂಟ್ವಾಳ ನಗರ ಪೋಲೀಸ್ ಠಾಣೆಯ ಸಹಾಯಕ ಉಪ ನಿರೀಕ್ಷಕ 

ದೇವಪ್ಪ, ಸಿಬ್ಬಂದಿ ವಿಜಯ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ಯುವತಿಯರ ಮೇಲೆರಗಿದ ಕಾರು!

Posted by Vidyamaana on 2023-10-18 21:02:43 |

Share: | | | | |


ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ಯುವತಿಯರ ಮೇಲೆರಗಿದ ಕಾರು!

ಮಂಗಳೂರು, ಅ.18: ಕುದ್ರೋಳಿ ದೇವಸ್ಥಾನಕ್ಕೆ ಬಂದು ನಡೆದುಕೊಂಡು ಹಿಂತೆರಳುತ್ತಿದ್ದ ಹುಡುಗಿಯರ ಮೇಲೆ ಕಾರು ಡಿಕ್ಕಿಯಾಗಿದ್ದು ಯುವತಿಯೊಬ್ಬಳು ಮೃತಪಟ್ಟ ಘಟನೆ ನಗರದ ಮಣ್ಣಗುಡ್ಡದಲ್ಲಿ ನಡೆದಿದೆ. 


ಬುಧವಾರ ಸಂಜೆ 5.30ರ ವೇಳೆಗೆ ಘಟನೆ ನಡೆದಿದ್ದು ಸುರತ್ಕಲ್ ಕಾನ ಬಾಳ ನಿವಾಸಿ ರೂಪಶ್ರೀ (23) ಮೃತಪಟ್ಟವರು. ಇವರು ಇತರ ನಾಲ್ಕು ಹುಡುಗಿಯರ ಜೊತೆಗೆ ಕುದ್ರೋಳಿ ದೇವಸ್ಥಾನಕ್ಕೆ ಬಂದಿದ್ದರು. ಸಂಜೆ ದೇವಸ್ಥಾನ ಕಡೆಯಿಂದ ಲೇಡಿಹಿಲ್ ಕಡೆಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ನುಗ್ಗಿ ಬಂದ ಕಾರು ಡಿಕ್ಕಿಯಾಗಿದೆ. ಕಾರು ನೇರವಾಗಿ ರಸ್ತೆಯಿಂದ ಹೊರಗೆ ಬಂದಿದ್ದು ಫುಟ್ ಪಾತ್ ಮೇಲೆ ನಡೆದು ಹೋಗುತ್ತಿದ್ದ ಯುವತಿಯರ ಮೇಲೆರಗಿದೆ. ಒಬ್ಬಳು ಯುವತಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದರೆ, ಇತರ ನಾಲ್ಕು ಮಂದಿಯೂ ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ. 




ಕಾರು ಸಂಪೂರ್ಣ ಚಾಲಕನ ನಿಯಂತ್ರಣ ಇಲ್ಲದ ರೀತಿ ಹುಡುಗಿಯರ ಮೇಲೆ ಹರಿದಿದ್ದು ಅಪಘಾತದ ದೃಶ್ಯ ಸ್ಥಳೀಯ ಕಟ್ಟಡದ ಸಿಸಿಟಿವಿಯಲ್ಲಿ  ಸೆರೆಯಾಗಿದೆ. ಕಾರು ನಾಲ್ಕು ಹುಡುಗಿಯರಿಗೆ ಡಿಕ್ಕಿಯಾದ ಬಳಿಕ ರಸ್ತೆ ದಾಟುತ್ತಿದ್ದ ಇನ್ನೊಬ್ಬ ಮಹಿಳೆಗೂ ಡಿಕ್ಕಿಯಾಗಿದೆ. 


ಕಾರು ಚಾಲಕ ಕಮಲೇಶ್ ಬಲದೇವ್ ಎಂಬಾತ ಅಪಘಾತದ ಬಳಿಕ ಕಾರನ್ನು ನಿಲ್ಲಿಸದೆ, ಮಣ್ಣಗುಡ್ಡದ ಮನೆಗೆ ತೆರಳಿದ್ದ.  ಮನೆಗೆ ಹೋಗಿ ತಂದೆಯ ಜೊತೆಗೆ ಪಾಂಡೇಶ್ವರ ಠಾಣೆಗೆ ಆಗಮಿಸಿದ್ದ. ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಂಭೀರ ಗಾಯಗೊಂಡಿದ್ದ ‌ಯುವತಿಯನ್ನು ಕೂಡಲೇ ಸ್ಥಳೀಯರು ಎಜೆ ಆಸ್ಪತ್ರೆಗೆ ಒಯ್ದಿದ್ದು ಅಷ್ಟರಲ್ಲಿ ಸಾವು ಕಂಡಿದ್ದಾರೆ. ಪಾಂಡೇಶ್ವರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಾತಿ(26), ಹಿತ್ನವಿ (16), ಕೃತಿಕಾ (16), ಯತಿಕಾ(12) ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.



Leave a Comment: