ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃವಿಯೋಗ

ಸುದ್ದಿಗಳು News

Posted by vidyamaana on 2024-06-30 19:31:43 |

Share: | | | | |


ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃವಿಯೋಗ

ಕೋಟ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ತಾಯಿ, ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್‍ತಿ (97) ವಯೋಸಹಜ ಅಸೌಖ್ಯದಿಂದ

ಜೂ.30ರಂದು ನಿಧನ ಹೊಂದಿದರು. ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ

 Share: | | | | |


ವಿಧಾನ ಪರಿಷತ್ ನೂತನ ಸದಸ್ಯರ ಪ್ರಮಾಣ ವಚನ

Posted by Vidyamaana on 2024-06-24 14:11:13 |

Share: | | | | |


ವಿಧಾನ ಪರಿಷತ್ ನೂತನ ಸದಸ್ಯರ ಪ್ರಮಾಣ ವಚನ

ಪ್ರಮಾಣ ವಚನ ಸ್ವೀಕರಿಸಿ ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದ ಸಿಟಿ ರವಿ, ಕಿವಿ ಹಿಂಡಿ ಅಭಿನಂದಿಸಿದ ಸಿಎಂ!

ಬೆಂಗಳೂರು : ಕರ್ನಾಟಕದ ವಿಧಾನ ಪರಿಷತ್‌ಗೆ ನೂತನವಾಗಿ ಆಯ್ಕೆಯಾಗಿ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ವಿಧಾನಸೌಧಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಿತು. ನೂತನ ಪರಿಷತ್ ಸದಸ್ಯರಿಗೆ ಸಭಾಪತಿ ಬಸವರಾಜ್ ಹೊರಟ್ಟಿ (Basavaraj Horatti) ಪ್ರಮಾಣ ವಚನ (MLC Oath Ceremony) ಬೋಧಿಸಿದರು

ವಿಧಾನಸಭೆ, ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ನೂತನ 17 ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಿಎಂ ಸಿದ್ದರಾಮಯ್ಯ, ಕಾನೂನು ಹಾಗೂ ಸಂಸದೀಯ ಸಚಿವ ಎಚ್‌ಕೆ ಪಾಟೀಲ್ ಸೇರಿ ಹಲವರು ಭಾಗಿಯಾದರು. ಇದರೊಂದಿಗೆ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ 11 ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವೂ ನಡೆಯಿತು.

ನಾಪತ್ತೆಯಾದ ನೇಹಾ ಮುಸ್ಲಿಂ ಯುವಕನ ಜೊತೆ ಮದುವೆಯಾಗಿ ಪತ್ತೆ

Posted by Vidyamaana on 2024-05-29 13:49:17 |

Share: | | | | |


ನಾಪತ್ತೆಯಾದ ನೇಹಾ ಮುಸ್ಲಿಂ ಯುವಕನ ಜೊತೆ ಮದುವೆಯಾಗಿ ಪತ್ತೆ

ಮಂಗಳೂರು :  ಮಂಗಳೂರು ಗಡಿ ಪ್ರದೇಶವಾದ ಕಾಸರಗೋಡಿನಲ್ಲಿ ಹಿಂದೂ ಯುವತಿಯನ್ನು (Hindu woman) ಮುಸ್ಲಿಂ ಯುವಕ (Muslim man) ಸದ್ದಿಲ್ಲದೆ ಮದುವೆ (Marriage) ಆಗಿದ್ದು, ಮುಸ್ಲಿಂ ಲೀಗ್ (Muslim league) ನಾಯಕನೊಬ್ಬ ಈ ಪ್ರಕರಣದಲ್ಲಿ ಬೆಂಬಲ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಕಾಸರಗೋಡಿನ ಬದಿಯಡ್ಕದಲ್ಲಿ  ಪ್ರಕರಣ ಬೆಳಕಿಗೆ ಬಂದಿದ್ದು, ವಿಹಿಂಪ (Vishwa Hindu Parish

non

) ಸೇರಿ ಹಿಂದೂ ಪರ ಸಂಘಟನೆಗಳು ರೊಚ್ಚಿಗೆದ್ದಿವೆ. ನಾಪತ್ತೆಯಾಗಿದ್ದ ಯುವತಿ ಅನ್ಯಮತೀಯ ಯುವಕನ ಜೊತೆ ಠಾಣೆಗೆ ಹಾಜರಾಗಿದ್ದು, ತಮಗೆ ಮದುವೆಯಾಗಿದೆ ಎಂದು ತಿಳಿಸಿದ್ದಾಳೆ.

ಕಾಸರಗೋಡಿನಲ್ಲಿ ಖಾಸಗಿ ಸಂಸ್ಥೆಯೊಂದರ ಶಿಕ್ಷಕಿಯಾಗಿದ್ದ ಯುವತಿ ನೇಹಾ, ಮುಸ್ಲಿಂ ಯುವಕ ಮಿರ್ಶಾದ್ ಎಂಬಾತನ ಜೊತೆ ತೆರಳಿದ್ದಳು. ಸದ್ಯ ಪೊಲೀಸರ ಮುಂದೆ ಪ್ರತ್ಯಕ್ಷಳಾಗಿರುವ ಈಕೆಯನ್ನು ಪೊಲೀಸರು ಕಾಸರಗೋಡು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಸ್ವಇಚ್ಛೆಯಿಂದ ಯುವಕನ ಜೊತೆ ತೆರಳಿದ್ದೇನೆ ಎಂದು ಆಕೆ ಹೇಳಿದ್ದಾಳೆ.

ಶ್ರೀ ದೇವತಾ ಸಮಿತಿಯಿಂದ 66ನೇ ವರ್ಷದ ಮಹಾಗಣೇಶೋತ್ಸವ

Posted by Vidyamaana on 2023-09-20 15:01:24 |

Share: | | | | |


ಶ್ರೀ ದೇವತಾ ಸಮಿತಿಯಿಂದ 66ನೇ ವರ್ಷದ ಮಹಾಗಣೇಶೋತ್ಸವ


ಪುತ್ತೂರು: ಪುತ್ತೂರು ಕಿಲ್ಲೆ ಮೈದಾನದಲ್ಲಿ ಸರ್ವಜಾತಿ ಧರ್ಮ ಪಕ್ಷದವರು ಒಟ್ಟಾಗಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಮಹಾಗಣೇಶೋತ್ಸವ ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮವಾಗಿದೆ. ಇಂತಹ ಸೌಹಾರ್ದತೆಯ ಸಂಕೇತವಾಗಿ ಆಚರಿಸಿಕೊಂಡು ಬರುತ್ತಿರುವ ಈ ಮಹಾಗಣಪತಿ ಉತ್ಸವ ವರ್ಷದಿಂದ ವರ್ಷಕ್ಕೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಹೇಳಿದರು.

ಶ್ರೀ ದೇವತಾ ಸಮಿತಿ ಪುತ್ತೂರು ಇದರ ಆಶಯದಲ್ಲಿ ಪುತ್ತೂರು ಕಿಲ್ಲೆ ಮೈದಾನದಲ್ಲಿ 66ನೇ ವರ್ಷದ ಶ್ರೀ ಮಹಾ ಗಣೇಶೋತ್ಸವದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಮಲ್ಯರವರ ನಿಧನದ ಬಳಿಕ ಕಿಲ್ಲೆ ಮೈದಾನದ ಗಣೇಶೋತ್ಸವದ ನೇತೃತ್ವವನ್ನು ವಹಿಸಿಕೊಂಡಿದ್ದ ನೆಲ್ಲಿಕಟ್ಟೆ ಸುಧಾಕರ್ ಶೆಟ್ಟಿ ಅವರು ಕಳೆದ 44 ವರ್ಷಗಳಿಂದ ನೇತೃತ್ವ ವಹಿಸಿ ಸರ್ವರನ್ನು ಒಗ್ಗೂಡಿಸಿಕೊಂಡು ಬಹಳ ವಿಜ್ರಂಭಣೆಯಿಂದ ಅದ್ದೂರಿಯಾಗಿ ಮಹಾ ಗಣಪತಿ ಉತ್ಸವವನ್ನು ಆಚರಿಸಿಕೊಂಡು ಬರುವ ಮೂಲಕ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು.ಕೆಲ ದಿನಗಳ ಹಿಂದೆ ಅವರು ವಿಧಿ ವಶರಾಗಿದ್ದು, ಮುಂದೆ ಈ ಗಣೇಶೋತ್ಸವದ ನೇತೃತ್ವವನ್ನು ವಹಿಸಿಕೊಳ್ಳುವವರು ಈ ಕಾರಣಿಕ ಗಣೇಶೋತ್ಸವವನ್ನು ಮತ್ತಷ್ಟು ಯಶಸ್ಸಿನೆಡೆಗೆ ಕೊಂಡೊಯ್ಯುವ ಮೂಲಕ ಸುಧಾಕರ ಶೆಟ್ಟಿಯವರ ಅಗಲುವಿಕೆಯ ವೇದನೆ ನಿವಾರಣೆಯಾಗುವಂತಾಗಬೇಕೆಂದರು.



ಮಾಜಿ ಪುರಸಭಾ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಅವರು ಮಾತನಾಡಿ, ಪುತ್ತೂರುನಲ್ಲಿ 66 ವರ್ಷಗಳ ಹಿಂದೆ ಮಲ್ಯರವರು ನೆಲ್ಲಿಕಟ್ಟೆ ಎಲಿಮೆಂಟರಿ ಶಾಲೆಯಲ್ಲಿ ಗಣೇಶೋತ್ಸವವನ್ನು ಪ್ರಾರಂಭಿಸಿ, ಬಹಳಷ್ಟು ಕಷ್ಟಕಾಲದಲ್ಲಿಯೂ ಸಂಪ್ರದಾಯದ ಪ್ರಕಾರ ಗಣೇಶೋತ್ಸವ ನಡೆಸಿಕೊಂಡು ಬಂದಿದ್ದರು.ಅವರ ಬಳಿಕ ಓರ್ವ ನಿಷ್ಠಾವಂತ, ಪ್ರಾಮಾಣಿಕ ವ್ಯಕ್ತಿ ನೆಲ್ಲಿಕಟ್ಟೆ ಸುಧಾಕರ್ ಶೆಟ್ಟಿಯವರ ಕೈಗೆ ಈ ಗಣೇಶೋತ್ಸವದ ನೇತೃತ್ವವನ್ನು ವಹಿಸಲಾಯಿತು.ಆರಂಭದ ಸಮಯದಲ್ಲಿ ಗಣೇಶೋತ್ಸವ ನಡೆಸಲು ಹಣದ ಅಡಚಣೆ ಇದ್ದರೂ ಸುಧಾಕರ್ ಶೆಟ್ಟಿಯವರು ಎಲ್ಲರನ್ನೂ ಸೇರಿಸಿಕೊಂಡು ಬಹಳ ಕಷ್ಟದಲ್ಲಿ ಗಣೇಶೋತ್ಸವವನ್ನು ಯಶಸ್ವಿಯಾಗಿ ಆಚರಿಸಿಕೊಂಡು ಬಂದಿದ್ದು ಕಳೆದ ಕೆಲವು ವರ್ಷಗಳಿಂದ ಬಹಳ ವಿಜ್ರಂಭಣೆಯಿಂದ ಅದ್ದೂರಿಯಾಗಿ ನಡೆಯುತ್ತಿದೆ ಎಂದರು.



ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟುರವರು ಮಾತನಾಡಿ ಕಿಲ್ಲೆಮೈದಾನದ ಮಹಾ ಗಣೇಶೋತ್ಸವದ ರೂವಾರಿ ಸುಧಾಕರ್ ಶೆಟ್ಟಿ ಅವರು ಇದೀಗ ನಮ್ಮನ್ನಗಲಿದ್ದಾರೆ.ಅವರು ನಮ್ಮೊಡನೆ ಇಲ್ಲದಿದ್ದರೂ ಅವರ ಪ್ರಾಮಾಣಿಕತೆ ನಿಷ್ಠೆ ಸ್ಪೂರ್ತಿದಾಯಕ.ಎಲ್ಲರೊಂದಿಗೆ ಅನ್ಯೋನ್ಯತೆ, ಜಾತಿ ಮತ ಭೇದವಿಲ್ಲದೆ ಎಲ್ಲರೊಂದಿಗಿದ್ದ ಅವರ ಪ್ರೀತಿ ವಿಶ್ವಾಸ ಮುಂದಿನ ದಿನಗಳಲ್ಲಿ ಗಣೇಶೋತ್ಸವದ ಯಶಸ್ಸಿಗೆ ನಾಂದಿಯಾಗಲಿದೆ ಎಂದು ಹೇಳಿದರು.



ಕಾರ್ಯಕ್ರಮ ನಿರ್ವಹಿಸಿ ಮಾತನಾಡಿದ ಡಾ|ರಾಜೇಶ್ ಬೆಜ್ಜಂಗಳರವರು ಮಾತನಾಡಿ ಸುಧಾಕರ್ ಶೆಟ್ಟಿ ಅವರ ಸಮರ್ಥ ನಾಯಕತ್ವದ ಮೂಲಕ ಎಲ್ಲಾ ವರ್ಗದ ಜನರ ಪ್ರೀತಿ ವಿಶ್ವಾಸ ಗಳಿಸಿ ಕಿಲ್ಲೆ ಮೈದಾನದ ಮಹಾಗಣಪತಿ ಉತ್ಸವವನ್ನು ಅದ್ದೂರಿಯಾಗಿ ನಡೆಸಿಕೊಂಡು ಬರಲು ಸಹಕಾರಿಯಾಗಿದೆ ಎಂದು ಹೇಳಿದರಲ್ಲದೆ ಸುಧಾಕರ ಶೆಟ್ಟಿಯವರನ್ನು ಕಳೆದುಕೊಂಡ ದುಃಖದ ನಡುವೆಯೂ ನಾವು ಈ ಕಾರ್ಯಕ್ರಮ ಆಯೋಜಿಸಿದ್ದೇವೆ.ಅವರ ಆಶಯದಂತೆ ಈ ಮಹಾಗಣೇಶೋತ್ಸವ ಯಶಸ್ವಿಯಾಗಿ ಮುನ್ನಡೆಯಲಿದೆ ಎಂದು ಹೇಳಿದರು.

ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ದೇವತಾ ಸಮಿತಿಯ ಹಿರಿಯ ಸದಸ್ಯ ಬಿ.ಕಿಟ್ಟಣ್ಣ ಗೌಡ ಬಪ್ಪಳಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಅಧ್ಯಾಪಕ ಸುರೇಶ್ ಶೆಟ್ಟಿ ಸ್ವಾಗತಿಸಿದರು.ಶ್ರೀ ದೇವತಾ ಸಮಿತಿಯ ಪದಾಧಿಕಾರಿಗಳಾದ ದಿನೇಶ್ ಪಿ.ವಿ., ಸುದೇಶ್ ಕುಮಾರ್, ದೇವಿಪ್ರಸಾದ್, ಕೃಷ್ಣ ನಾಯಕ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ ಮೊದಲಾದವರು ಅತಿಥಿಗಳಿಗೆ ಹೂಗುಚ್ಚ ನೀಡಿ ಸಹಕರಿಸಿದರು.



ಮೌನ ಪ್ರಾರ್ಥನೆ: ಶ್ರೀ ದೇವತಾ ಸಮಿತಿಯ ಅಧ್ಯಕ್ಷರಾಗಿದ್ದು ಶ್ರೀ ಮಹಾಗಣೇಶೋತ್ಸವವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದು ಕೆಲ ದಿನಗಳ ಹಿಂದೆ ಅಗಲಿದ ಎನ್.ಸುಧಾಕರ್ ಶೆಟ್ಟಿ, ಸಮಿತಿ ಸದಸ್ಯರಾಗಿದ್ದ ಪ್ರಭಾಕರ ಶೆಟ್ಟಿ ನೆಲ್ಲಿಕಟ್ಟೆ, ಮುಂಗ್ಲಿಮನೆ ಚಂದ್ರಶೇಖರ ಗೌಡರವರಿಗೆ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಲೈವ್‌ ರಿಪೋರ್ಟ್‌ ನೀಡುವಾಗಲೇ ವರದಿಗಾರ್ತಿ ಹಿಂದೆ ಬಾಂಬ್‌ ಸ್ಪೋಟ: ವಿಡಿಯೋ ವೈರಲ್

Posted by Vidyamaana on 2023-10-08 15:29:00 |

Share: | | | | |


ಲೈವ್‌ ರಿಪೋರ್ಟ್‌ ನೀಡುವಾಗಲೇ ವರದಿಗಾರ್ತಿ ಹಿಂದೆ ಬಾಂಬ್‌ ಸ್ಪೋಟ: ವಿಡಿಯೋ ವೈರಲ್

ಗಾಜಾಪಟ್ಟಿ: ಇಸ್ರೇಲ್‌ ಪಡೆ ಹಾಗೂ ಹಮಾಸ್‌ ನಡುವಿನ ಸಂಘರ್ಷದಿಂದ ಜರ್ಝರಿತವಾಗಿರುವ ಗಾಜಾ ಪಟ್ಟಿಯಲ್ಲಿ ಅಲ್‌ -ಜಝೀರಾ ವರದಿಗಾರ್ತಿ ಲೈವ್‌ ರಿಪೋರ್ಟಿಂಗ್‌ ಮಾಡುತ್ತಿರುವಾಗಲೇ ಆಕೆಯ ಹಿಂದೆ ಇರುವ ಕಟ್ಟಡದ ಮೇಲೆ ಬಾಂಬ್‌ ದಾಳಿ ನಡೆದಿದೆ.

ಲೈವ್‌ ರಿಪೋರ್ಟ್‌ ನೀಡುವಾಗಲೇ ವರದಿಗಾರ್ತಿ ಹಿಂದೆ ಬಾಂಬ್‌ ಸ್ಪೋಟ: ವಿಡಿಯೋ ವೈರಲ್


ಆಕೆಯ ಹಿಂದಿರುವ ಬಹು ಮಹಡಿ ಕಟ್ಟಡದ ಮೇಲೆ ಕ್ಷಿಪಣಿ ದಾಳಿ ನಡೆದಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.ಅಲ್‌ ಜಝೀರಾ ವರದಿಗಾರ್ತಿ ಸಂಘರ್ಷಮಯ ನೆಲದಲ್ಲಿ ನಿಂತು ವರದಿಯನ್ನು ಮಾಡುತ್ತಿದ್ದರು. ಈ ವೇಳೆ ಬಾಂಬ್‌ ಸ್ಪೋಟ ನಡೆದಿದೆ. ವರದಿಗಾರ್ತಿ ಆತಂಕದಿಂದ ಕಿರುಚಿದ್ದು, ಆಕೆಯನ್ನು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ನಿರೂಪಕ ಸೂಚಿಸಿದ್ದಾನೆ.


ಅಸಿಡಿಟಿಯ ಎದೆ ಉರಿಯನ್ನು ಮತ್ತು ಎದೆ ನೋವಿನ ಉರಿಯನ್ನು ಐಡೆಂಟಿಫೈ ಮಾಡೋದು ತುಂಬಾ ಸುಲಭ: ಡಾ. ಜೆ ಸಿ ಅಡಿಗ


ಪುತ್ತೂರು ಎಸ್‌ಡಿಪಿಐ ಕಾರ್ಯಕರ್ತರ ಸಮಾವೇಶ

Posted by Vidyamaana on 2023-02-10 16:00:29 |

Share: | | | | |


ಪುತ್ತೂರು ಎಸ್‌ಡಿಪಿಐ ಕಾರ್ಯಕರ್ತರ  ಸಮಾವೇಶ

ಪುತ್ತೂರು:ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯಕರ್ತರ ಸಭೆಯು ಪುತ್ತೂರಿನ ಎಂ.ಡಿ.ಎಸ್ ಟ್ರಿನಿಟಿ ಹಾಲ್ ನಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ಅಧ್ಯಕ್ಷತೆಯಲ್ಲಿ ಫೆ.10 ನಡೆಯಿತು.

ಕಾರ್ಯಕ್ರಮದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ  ಪ್ರಸಕ್ತ ಸನ್ನಿವೇಶದಲ್ಲಿ ಎಸ್‌ಡಿಪಿಐ ಪಕ್ಷದ ಅನಿವಾರ್ಯತೆ ಮತ್ತು ಚುನಾವಣಾ ರಾಜಕೀಯದಲ್ಲಿ ಪಕ್ಷದ ಪಾಲ್ಗೊಳ್ಳುವಿಕೆ ಅನಿವಾರ್ಯ ಯಾಕೆ ಎಂಬುದರ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಕಲ್ಲೇಗ: ಮಾಡತ್ತಾರು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ 11ನೇ ವರ್ಷದ ಮೊಸರು ಕುಡಿಕೆ ಉತ್ಸವ - ಸನ್ಮಾನ

Posted by Vidyamaana on 2023-09-17 09:38:31 |

Share: | | | | |


ಕಲ್ಲೇಗ: ಮಾಡತ್ತಾರು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ   ವತಿಯಿಂದ 11ನೇ ವರ್ಷದ ಮೊಸರು ಕುಡಿಕೆ ಉತ್ಸವ - ಸನ್ಮಾನ

ಕಲ್ಲೇಗ: ಮಾಡತ್ತಾರು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ   ವತಿಯಿಂದ 11ನೇ ವರ್ಷದ ಮೊಸರು ಕುಡಿಕೆ ಉತ್ಸವ ವು ಸೆ 09 ರಂದು  ಮಾಡತ್ತಾರು ಶ್ರೀ ಪುಣ್ಯಕುಮಾರ ದೈವಸ್ಥಾನದ ವಠಾರದಲ್ಲಿ ನಡೆಯಿತು. ಶ್ರೀ ತಿಮ್ಮಪ್ಪ ಗೌಡ ಪೋಳ್ಯ ಇವರು ದೀಪ ಬೇಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಪುಟಾಣಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜೀವಂಧರ್ ಜೈನ್ ಕಲ್ಲೇಗ, ರಘುರಾಜ ಉಬರಡ್ಕ, ಹೇಮಚಂದ್ರ ಮುರ, ಉಮೇಶ್ ಆಚಾರ್ಯ ಕಲ್ಲೇಗ, ಎಲ್ ಅನಂತಪ್ರಸಾದ್ ಮಾಡತ್ತಾರು, ಅಣ್ಣು ಪಲ್ಲತ್ತಾರು, ನಾರಾಯಣ ಗೌಡ ಕಲ್ಲೇಗ, ಜಿನ್ನಪ್ಪ ಪೂಜಾರಿ ಮುರ, ಜಿನ್ನಪ್ಪ ಗೌಡ ಕಲ್ಲೇಗ, ದಿನೇಶ್ ಮುರ, ಸುಧೀರ್ ನಾಕ್ ಆನಾಜೆ, ವಸಂತಿ ಗಣೇಶ್ ನಂದನ, ಧರ್ಮಪಾಲ ಗೌಡ,  ರವೀಂದ್ರ ಪದ್ನಡ್ಕ, ಪುರುಷೋತ್ತಮ ಗೌಡ ಪೋಳ್ಯ ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಎಲ್ಲಾ ಸದಸ್ಯರು ವಿವಿಧ ಆಟೋಟ ಸ್ಪರ್ಧೆಗಳಿಗೆ ಸಹಕರಿಸಿದರು ಜೀವನ್ ಗೌಡ ಶೇವಿರೆ ವಂದಿಸಿದರು. ರೂಪೇಶ್ ಶೇವಿರೆ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ:-

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸ್ಥಳೀಯ ಪ್ರತಿಭೆಗಳಾದ ಶಶಾಂಕ್ ಎನ್ ಶೇವಿರೆ ಹಾಗೂ ಮನ್ವಿತ್ ಬಿ ಗೌಡ ಶೇವಿರೆ ಇವರನ್ನು ಶ್ರೀ ಪುಣ್ಯ ಕುಮಾರ ಯುವಕ ವೃಂದ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಮಾಡತ್ತಾರು ವತಿಯಿಂದ ಸನ್ಮಾನಿಸಲಾಯಿತು.



Leave a Comment: