ಪುತ್ತೂರು; ಕೃಷಿಕರ ಚಟುವಟಿಕೆಗಳಿಗೆ ಪೂರಕವಾಗದ ಯಂತ್ರೋಪಕರಣಗಳನ್ನು ರಿಯಾಯತಿ ದರದಲ್ಲಿ ಕೃಷಿಇಲಾಖೆಯಿಂದ ಪಡೆದುಕೊಳ್ಳಲು ಅವಕಾಶವಿದ್ದು, ಕಡಬ, ಪಂಜ ಹಾಗೂ ಉಪ್ಪಿನಂಗಡಿ ಹೋಬಳಿಯ ಕೃಷಿಕರು ರೈತಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸುವಂತೆ ಉಪ್ಪಿನಂಗಡಿ ಕೃಷಿ ಅಧಿಕಾರಿ ಭರಮಣ್ಣ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶೇ೫೦ರ ಸಹಾಯಧನದಲ್ಲಿ ಕೃಷಿಕರು ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ ಕಳೆಕೊಚ್ಚುವ ಯಂತ್ರ, ಹುಲ್ಲು ಕತ್ತರಿಸುವ ಯಂತ್ರ, ತೋಟಕ್ಕೆ ಮದ್ದು ಸಿಂಪಡಿಸುವ ಯಂತ್ರ ಹಾಗೂ ಸೋಗೆ (ಕಟರ) ಕಟ್ಟು ಮಾಡುವ ಯಂತ್ರಗಳನ್ನು ಪಡೆದುಕೊಳ್ಳಬಹುದು. ಆಯ್ದ ಕಂಪೆನಿಗಳ ಈ ಯಂತ್ರಗಳು ಲಭ್ಯವಿದ್ದು, ಆಸಕ್ತ ಕೃಷಿಕರು ತಕ್ಷಣ ಕೃಷಿ ಇಲಾಖೆಯ ರೈತಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸುವಂತೆ ಅವರು ವಿನಂತಿ ಮಾಡಿದ್ದಾರೆ.