ರ ಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ತೀವ್ರಗೊಳ್ಳುತ್ತಿದ್ದಂತೆ “ಯುದ್ಧಕ್ಕೆ ಸನ್ನದ್ಧರಾಗಿ’ ಎಂದು ಸ್ವೀಡನ್, ಫಿನ್‌ಲ್ಯಾಂಡ್ ತಮ್ಮ ದೇಶದ ನಾಗರಿಕರಿಗೆ ಮನವಿ ಮಾಡಿವೆ.ಸ್ವೀಡನ್‌ನಲ್ಲಿ 50 ಲಕ್ಷ ಕೈಪಿಡಿಗಳನ್ನು ಸಿದ್ಧಗೊಳಿಸಿ ಹಂಚಲಾಗುತ್ತಿದೆ.
ಅಲ್ಲದೆ ಇದೇ ಉದ್ದೇಶಕ್ಕೆ ಫಿನ್ ಲ್ಯಾಂಡ್ ಸರ್ಕಾರ ಪ್ರತ್ಯೇಕ ವೆಬ್‌ಸೈಟ್ ಅನ್ನು ಶುರು ಮಾಡಿದೆ.
2022ರಲ್ಲಿ ಉಕ್ರೇನ್ ವಿರುದ್ಧ ರಷ್ಯಾ ದಾಳಿ ನಡೆಸಿದ ಸಂದರ್ಭದಿಂದಲೇ ಸ್ವೀಡನ್‌ನಲ್ಲಿ “ತುರ್ತಾಗಿ ಯುದ್ಧದ ಸಂದರ್ಭ ಬಂದರೆ ಮಾಡಬೇಕಾಗಿರುವುದೇನು?’ ಎಂಬ ಶೀರ್ಷಿಕೆ ಇರುವ ಕರಪತ್ರ ಸಿದ್ಧಗೊಳಿಸಿತ್ತು. 2ನೇ ಪ್ರಪಂಚ ಮಹಾಯುದ್ಧ ವೇಳೆ ಮೊದಲ ಬಾರಿಗೆ ಅದನ್ನು ಸಿದ್ಧಪಡಿಸಲಾಗಿತ್ತು. ಮುಂದಿನ 2 ವಾರಗಳಲ್ಲಿ ಸ್ವೀಡನ್ ನಿವಾಸಿಗಳಿಗೆ 32 ಪುಟಗಳ ಪರಿಷ್ಕೃತ ಕೈಪಡಿ ಮನೆಗಳಿಗೆ ತಲುಪಿಸಲು ಮುಂದಾಗಿದ್ದಾರೆ.