ಚೀನಾದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ತಮಗೆ ಕಪ್ಪು ಬಣ್ಣದ ಮಗು ಹುಟ್ಟಿದ್ದಕ್ಕೆ ಅನುಮಾನಗೊಂಡ ವ್ಯಕ್ತಿ ಹೆಂಡತಿಯಿಂದ ವಿಚ್ಛೇದನ ಕೋರಿದ್ದಾನೆ.

ತಾನು, ತನ್ನ ಹೆಂಡತಿ ಇಬ್ಬರೂ ಬಿಳಿ ಬಣ್ಣದವರಾಗಿದ್ದರೂ ಕಪ್ಪು ಬಣ್ಣದ ಮಗು ಹುಟ್ಟಿದ್ದಕ್ಕೆ ಆ ಗಂಡ ಡಿಎನ್ಎ ಪರೀಕ್ಷೆಗೆ ಒತ್ತಾಯಿಸಿದ್ದಾನೆ. ಹೆಂಡತಿಯ ಚಾರಿತ್ರ್ಯ ಸರಿಯಿಲ್ಲವೆಂದು ಆತ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ.

ಚೀನಾ ಟೈಮ್ಸ್ ವರದಿಯ ಪ್ರಕಾರ, ಸುಮಾರು 1 ತಿಂಗಳ ಹಿಂದೆ 30 ವರ್ಷದ ಮಹಿಳೆ ಸಿ-ಸೆಕ್ಷನ್ ಮೂಲಕ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಅವರಿಗೆ ಕಪ್ಪು ಬಣ್ಣದ ಮಗು ಹುಟ್ಟಿತ್ತು. ಆಕೆ ಮತ್ತು ಆಕೆಯ ಗಂಡ ಬಿಳಿ ಬಣ್ಣದವರಾಗಿದ್ದು, ಕಪ್ಪು ಮಗು ಹೇಗೆ ಹುಟ್ಟಿತು ಎಂದು ಆಕೆಯ ಪತಿ ಆಘಾತಕ್ಕೊಳಗಾದ. ಇದೇ ಕಾರಣವನ್ನಿಟ್ಟುಕೊಂಡು ಆತ ವಿಚ್ಛೇದನ ಕೋರಿದ್ದಾನೆ.

ಈ ಘಟನೆಯನ್ನು ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ಸಲಹೆ ಕೇಳಿದ್ದಾರೆ. ತನ್ನ ಪತಿ ಮೊದಲು ಮಗುವನ್ನು ನೋಡಲು ಬಂದಾಗ ಅವನು ಆಶ್ಚರ್ಯಚಕಿತನಾದನು. ಕಪ್ಪು ಬಣ್ಣದ್ದೆಂಬ ಕಾರಣಕ್ಕೆ ಮಗುವನ್ನು ಹಿಡಿಯಲು ನಿರಾಕರಿಸಿದನು ಎಂದು ಆಕೆ ವಿವರಿಸಿದ್ದಾಳೆ. ನಂತರ ಡಿಎನ್‌ಎ ಪರೀಕ್ಷೆ ನಡೆಸಿ ಮಗು ಆತನಿಗೇ ಹುಟ್ಟಿದ್ದು ಎಂದು ದೃಢಪಡಿಸುವಂತೆ ಒತ್ತಾಯಿಸಿದನು. ಅದು ನಮ್ಮಿಬ್ಬರದೇ ಮಗು ಎಂದು ಎಷ್ಟೇ ಹೇಳಿದರೂ ಆತ ಕೇಳಲಿಲ್ಲ ಎಂದು ಆಕೆ ಹೇಳಿದ್ದಾಳೆ.

ಮಗುವಿನ ಕಪ್ಪು ಮೈಬಣ್ಣದಿಂದ ತನಗೂ ಆಶ್ಚರ್ಯವಾಯಿತು ಎಂದು ಆಕೆ ಒಪ್ಪಿಕೊಂಡಿದ್ದಾಳೆ. ಆದರೆ, ಮಗುವಿನ ಬಣ್ಣದ ಕಾರಣಕ್ಕೆ ನಾನು ಹೆತ್ತ ಮಗುವನ್ನು ಕೈಬಿಡುವುದಿಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾಳೆ. ಆಕೆಯ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಈ ವಿಷಯವನ್ನು ಚರ್ಚಿಸಿದರೆ, ಇತರರು ಬಿಳಿ ಚರ್ಮದ ದಂಪತಿಗಳು ಕಪ್ಪು ಚರ್ಮದ ಮಗುವನ್ನು ಹೊಂದುವುದು ಅಸಾಮಾನ್ಯವೇನಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!