ಪುತ್ತೂರು: ವಿಶ್ವ ಮೂಲವ್ಯಾಧಿ ದಿನಾಚರಣೆಯ ಅಂಗವಾಗಿ ಪಂಜಳ ಜಂಕ್ಷನ್‌ನಲ್ಲಿರುವ ಸಾಲ್ಮರ ಆಯುರ್ವೇದ ಸಂಸ್ಥೆಯ ಸಭಾಂಗಣದಲ್ಲಿ ನ.21ರಂದು ಉಚಿತ ಮೂಲವ್ಯಾಧಿ ಚಿಕಿತ್ಸಾ ಶಿಬಿರ ನಡೆಯಲಿದೆ.
ಸಾಲ್ಮರ ಆಯುರ್ವೇದ ಸಂಸ್ಥೆಯ ಸಂಸ್ಥಾಪಕ, ಪಾರಂಪರಿಕ ನಾಟಿ ವೈದ್ಯ ಶಂಸುದ್ದೀನ್ ಸಾಲ್ಮರ್ ಅವರ ನೇತೃತ್ವದಲ್ಲಿ ನಡೆಯುವ ಶಿಬಿರವು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜರುಗಲಿದೆ.
ಶಿಬಿರದಲ್ಲಿ ತಜ್ಞ ಬಿಎಎಂಎಸ್ ಆಯುರ್ವೇದ ವೈದ್ಯರಿಂದ ಮೂಲವ್ಯಾಧಿ ಸಮಸ್ಯೆಗಳಿಗೆ ಉಚಿತ ತಪಾಸಣೆ ಹಾಗೂ ಸಲಹೆ ನೀಡಲಾಗುತ್ತದೆ. ಅಲ್ಲದೆ, ಮೂರು ದಿನಗಳ ಸಾಲ್ಮರ ಪೈಲೋ ಕೇರ್ ಮಾದರಿ ಔಷಧಿಯನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಸಾಲ್ಮರ ಆಯುರ್ವೇದ ಸಂಸ್ಥೆಯು ಪುತ್ತೂರಿನ ಪಂಜಳ ಸೇರಿದಂತೆ ಬೆಂಗಳೂರು, ಹುಬ್ಬಳ್ಳಿ, ಮೈಸೂರು, ರಾಯಚೂರು ಹಾಗೂ ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯ ಸಾಲ್ಮರ ಹರ್ಬಲ್ಸ್ ಉತ್ಪನ್ನವಾದ ಸಾಲ್ಮರ ಪೈಲೋ ಕೇರ್‌ಗೆ ದೇಶ-ವಿದೇಶಗಳಿಂದ ಬೇಡಿಕೆ ಇದೆ ಎಂದು ಪ್ರಕಟಣೆ ತಿಳಿಸಿದೆ.
ಮಲ ವಿಸರ್ಜನೆಗೆ ತೊಂದರೆ, ಮಲದೊಂದಿಗೆ ರಕ್ತಸ್ರಾವ, ಗುದದ್ವಾರದಲ್ಲಿ ನೋವು, ತುರಿಕೆ, ಗಡ್ಡೆ, ಫಿಶರ್, ಫಿಸ್ಟುಲಾ ಸೇರಿದಂತೆ ಮೂಲವ್ಯಾಧಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ತಪಾಸಣೆ ಹಾಗೂ ಚಿಕಿತ್ಸಾ ಸಲಹೆ ಪಡೆಯಲು ಶಿಬಿರದಲ್ಲಿ ಅವಕಾಶವಿದೆ.
ಸಾಲ್ಮರ ಆಯುರ್ವೇದ ಸಂಸ್ಥೆಯ ಪ್ರಧಾನ ಕಚೇರಿಯು ಪುತ್ತೂರಿನ ಬೊಳ್ವಾರಿನ ಜಿಎಲ್ ಟ್ರೇಡ್ ಸೆಂಟರ್‌ನಲ್ಲಿದೆ. ಹೆಚ್ಚಿನ ಮಾಹಿತಿಗಾಗಿ 8431000785 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.









