ಚೆಲ್ಯಡ್ಕ ಮುಳುಗು ಸೇತುವೆ ಸಂಚಾರ ಸ್ಥಗಿತಕ್ಕೆ ಜಿಲ್ಲಾಧಿಕಾರಿ‌ ಆದೇಶ

ಸುದ್ದಿಗಳು News

Posted by vidyamaana on 2024-06-29 13:06:13 |

Share: | | | | |


ಚೆಲ್ಯಡ್ಕ ಮುಳುಗು ಸೇತುವೆ ಸಂಚಾರ ಸ್ಥಗಿತಕ್ಕೆ ಜಿಲ್ಲಾಧಿಕಾರಿ‌ ಆದೇಶ

ಪುತ್ತೂರು: ಚೆಲ್ಯಡ್ಯ ಮುಳುಗು ಸೇತುವೆ ಮಳೆಗಾಲ ಮುಗಿಯುವವರೆಗೂ ಪೂರ್ಣ ಪ್ರಮಾಣದಲ್ಲಿ ಸಂಚಾರ ಸ್ಥಗಿತಗೊಳ್ಳಲಿದೆ.ಈ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ಈ ಬಾರಿಯ ಮಳೆಗೂ ಚೆಲ್ಯಡ್ಕ ಮುಳುಗು ಸೇತುವೆ ನೀರಿನಿಂದ ಮುಳುಗಿ, ಸಂಚಾರ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬದಲಿ ಸಂಚಾರ ಸೂಚಿಸಿ, ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಪುತ್ತೂರಿನಿಂದ ಪಾಣಾಜೆ - ಬೆಟ್ಟಂಪಾಡಿ ಭಾಗಕ್ಕೆ ತೆರಳುವವರು ಸಂಟ್ಯಾರ್ ರಸ್ತೆಯಾಗಿ ತೆರಳಬಹುದು. ದೇವಸ್ಯ ಕಡೆಯಿಂದ ತೆರಳುವವರು ಚೆಲ್ಯಡ್ಕದವರೆಗೆ ಮಾತ್ರ ತೆರಳಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

 Share: | | | | |


ಶಾಸಕ ಹರೀಶ್ ಪೂಂಜಾ ಪ್ರಕರಣ - ಶಾಸಕನಾದ್ರೆ ಪೊಲೀಸರ ಜೊತೆ ಗಲಾಟೆ ಮಾಡಬಹುದಾ :ಸಿಎಂ ಸಿದ್ದರಾಮಯ್ಯ

Posted by Vidyamaana on 2024-05-25 21:02:40 |

Share: | | | | |


ಶಾಸಕ ಹರೀಶ್ ಪೂಂಜಾ ಪ್ರಕರಣ - ಶಾಸಕನಾದ್ರೆ ಪೊಲೀಸರ ಜೊತೆ ಗಲಾಟೆ ಮಾಡಬಹುದಾ :ಸಿಎಂ ಸಿದ್ದರಾಮಯ್ಯ

ಮಂಗಳೂರು: ಶಾಸಕ ಹರೀಶ್ ಪೂಂಜಾ ಠಾಣೆಯಲ್ಲೇ ಪ್ರತಿಭಟನೆ ನಡೆಸಿ ಪೊಲೀಸರಿಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕನಾದ್ರೆ ಪೊಲೀಸರ ಜೊತೆ ಗಲಾಟೆ ಮಾಡಬಹುದಾ ಎಂದು ಕಿಡಿಕಾರಿದ್ದಾರೆ.

ಸುರತ್ಕಲ್‌ : ಘೋರ ದುರಂತ: ನದಿಯಲ್ಲಿ ಮುಳುಗಿ ವಿದ್ಯಾದಾಯಿನಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಸಾವು

Posted by Vidyamaana on 2024-02-28 07:17:47 |

Share: | | | | |


ಸುರತ್ಕಲ್‌ : ಘೋರ ದುರಂತ: ನದಿಯಲ್ಲಿ ಮುಳುಗಿ  ವಿದ್ಯಾದಾಯಿನಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಸಾವು

ಸುರತ್ಕಲ್‌ : ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಮಂಗಳವಾರ ನಾಪತ್ತೆಯಾಗಿದ್ದ ಸುರತ್ಕಲ್  ಖಾಸಗಿ ಶಾಲೆಯ ನಾಲ್ಕು ವಿದ್ಯಾರ್ಥಿಗಳು ಹಳೆಯಂಗಡಿಯ ಕೊಪ್ಪಳ ಆಣೆಕಟ್ಟಿನ ರೈಲ್ವೆ ಸೇತುವೆಯ ಕೆಳಭಾಗದ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಸುರತ್ಕಲ್ ಅಗರಮೇಲ್ ನಿವಾಸಿ ಚಂದ್ರಕಾಂತ ಎಂಬವರ ಮಗ ಯಶ್ಚಿತ್(15), ಹಳೆಯಂಗಡಿ ತೋಕೂರು ನಿವಾಸಿ ವಸಂತ ಎಂಬವರ ಮಗ ರಾಘವೇಂದ್ರ (15), ಸುರತ್ಕಲ್ ಗುಡ್ಡೆಕೊಪ್ಪ, ನಿವಾಸಿ ವಿಶ್ವನಾಥ ಎಂಬವರ ಮಗ ನಿರೂಪ (15) ಮತ್ತು ಚಿತ್ರಾಪುರ ನಿವಾಸಿ ದೇವದಾಸ್ ಎಂಬವರ ಪುತ್ರ ಅನ್ವಿತ್‌ (15) ಎಂದು ಗುರುತಿಸಲಾಗಿದೆ. 

ಮೃತರೆಲ್ಲರೂ ಸುರತ್ಕಲ್ ವಿದ್ಯಾದಾಯಿನಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾಗಿದ್ದು, ಮಂಗಳವಾರ ನಡೆದ ಇಂಗ್ಲಿಷ್ ಪೂರ್ವ ಸಿದ್ಧತಾ ಪರೀಕ್ಷೆ ಬರೆದು ಮನೆಗೆ ಬಾರದೆ ಕಾಣೆಯಾಗಿದ್ದರು. ಈ ಕುರಿತು ಮಕ್ಕಳ ಪೋಷಕರು ರಾತ್ರಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ನಾಪತ್ತೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಸುರತ್ಕಲ್ ಪೊಲೀಸರು, ಶಾಲೆ ಮತ್ತು ಬಸ್ ನಿಲ್ದಾಣದ ಬಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ತರಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಸುರತ್ಕಲ್ ಬಸ್ ನಿಲ್ದಾಣದಿಂದ ಬಸ್ ಹತ್ತಿ ಹಳೆಯಂಗಡಿ ಬಸ್ ನಿಲ್ದಾಣದಲ್ಲಿ ಬಸ್ ಇಳಿದಿರುವುದನ್ನು ಪತ್ತೆಹಚ್ಚಿತ್ತಾರೆ. ಜೊತೆಗೆ ವಿದ್ಯಾರ್ಥಿಯೋರ್ವನ ಬಳಿ ಇತ್ತೆನ್ನಲಾದ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ವಿದ್ಯಾರ್ಥಿಗಳು ನದಿಯ ದಡಕ್ಕೆ ಬಂದಿರುವುದನ್ನು ಖಚಿತ ಪಡಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ನದಿಯ ದಡದಲ್ಲಿ ಮಕ್ಕಳ ಶಾಲೆಯ ಚೀಲಗಳು, ಚಪ್ಪಲಿ ಶಾಲೆಯ ಸಮವಸ್ತ್ರಗಳು ಪತ್ತೆಯಾಗಿವೆ.

ಎಲ್ಲಾ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ವೆನ್ ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲಿನ ಶಸ್ತ್ರಚಿಕಿತ್ಸೆಗೆ ಹೋಗಿ ವರ ಮೃತ್ಯು: ಏನಿದು ಸ್ಮೈಲ್ ಡಿಸೈನಿಂಗ್ ಶಸ್ತ್ರಚಿಕಿತ್ಸೆ?

Posted by Vidyamaana on 2024-02-20 15:12:31 |

Share: | | | | |


ಹಲ್ಲಿನ ಶಸ್ತ್ರಚಿಕಿತ್ಸೆಗೆ ಹೋಗಿ ವರ ಮೃತ್ಯು: ಏನಿದು ಸ್ಮೈಲ್ ಡಿಸೈನಿಂಗ್ ಶಸ್ತ್ರಚಿಕಿತ್ಸೆ?

ಹೈದರಾಬಾದ್: ಮದುವೆಯ ದಿನ ಚೆನ್ನಾಗಿ ಕಾಣಿಸಬೇಕು ಎಂದು ಲಕ್ಷ್ಮಿ ನಾರಾಯಣ ವಿಂಜಮ್ (28) ಎಂಬಾತ ಸ್ಮೈಲ್ ಡಿಸೈನಿಂಗ್ ಶಸ್ತ್ರಚಿಕಿತ್ಸೆಗೆ ಹೋಗಿ ಪ್ರಾಣವನ್ನೇ ಕಳೆದುಕೊಂಡ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.



ಮದುವೆಯ ದಿನ ತನ್ನ ನಗು ಮತ್ತು ನಗುವನ್ನು ಉತ್ತಮವಾಗಿ ಕಾಣುವಂತೆ ಸ್ಮೈ ಲ್ ಡಿಸೈನಿಂಗ್ ಶಸ್ತ್ರ ಚಿಕಿತ್ಸೆಗೆ ಹೈದರಾಬಾದ್ ನ ಜುಬಿಲಿ ಹಿಲ್ ನಲ್ಲಿರುವ ಎಫ್ ಎಂಎಸ್ ಇಂಟರ್ನ್ಯಾ ಷನಲ್ ಡೆಂಟಲ್ ಕ್ಲಿನಿಕ್ ಗೆ ಹೋಗಿದ್ದನು. ಆದರೆ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿಯೇ ಈತ ಸಾವನ್ನಪ್ಪಿದ್ದಾನೆ. ಪ್ರಜ್ಞೆ ತಪ್ಪಿಸುವ ಔಷಧ (ಅನಸ್ತೇಶಿಯಾ) ಹೆಚ್ಚು ಕೊಟ್ಟ ಕಾರಣ ಆತ ಸಾವನ್ನಪ್ಪಿದ್ದಾನೆ ಎಂದು ಲಕ್ಷ್ಮಿ ನಾರಾಯಣ್ ತಂದೆ ಗಂಭೀರ ಆರೋಪ ಮಾಡಿದ್ದಾರೆ.



ಶಸ್ತ್ರಚಿಕಿತ್ಸೆ ವೇಳೆ ತನ್ನ ಮಗ ಪ್ರಜ್ಞಾ ಹೀನನಾಗಿದ್ದ. ಸರ್ಜರಿ ಬಳಿಕ ಅವನ ತಲೆಯಲ್ಲಿ ಯಾವುದೇ ಚಲನೆಯಿಲ್ಲದಿದ್ದಾಗ ಕ್ಲಿನಿಕ್ ಸಿಬ್ಬಂದಿ ನನ್ನನ್ನು ಕರೆದರು. ನಾನು ಹೋಗಿ ನೋಡಿದಾಗ ಆತನನ್ನು ನೋಡಿ ಗಾಬರಿಯಾಯಿತು. ಕೂಡಲೇ ನಾವು ಆತನನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಈ ವೇಳೆ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದರು. ಮಗನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಆದರೆ ಈ ಸಾವಿಗೆ ವೈದ್ಯರೇ ನೇರ ಕಾರಣ ಎಂದು ಲಕ್ಷ್ಮಿ ನಾರಾಯಣ ತಂದೆ ರಾಮುಲು ವಿಂಜಮ್ ಕಣ್ಣೀರು ಹಾಕಿದ್ದಾರೆ.



ಏನಿದು ಸ್ಮೈಲ್ ಡಿಸೈನಿಂಗ್?:

ಜನರು ತಮ್ಮ ಹಲ್ಲುಗಳನ್ನು ಸರಿಪಡಿಸಲು, ಶುಚಿಗೊಳಿಸುವಿಕೆಗೆ ಆಸ್ಪತ್ರೆಗೆ ಹೋಗುತ್ತಾರೆ. ಇದರಿಂದ ಅವುಗಳು ಹೆಚ್ಚು ಹೊಳೆಯುವಂತೆ ಕಾಣುತ್ತವೆ. ಮಾನವನ ಹಲ್ಲುಗಳು ಕಾಲಾನಂತರದಲ್ಲಿ ಸಡಿಲಗೊಳ್ಳುತ್ತವೆ ಮತ್ತು ಅವುಗಳ ಬಣ್ಣವು ಮಸುಕಾಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸ್ಮೈ ಲ್ ಡಿಸೈನ್ ಸರ್ಜರಿ ಮೂಲಕ ಅವುಗಳನ್ನು ಹೊಳೆಯುವಂತೆ ಮಾಡಲಾಗುತ್ತದೆ

ಹೇಗಿರಲಿದೆ ಹತ್ತೂರು ಒಡೆಯನ ನೆಲದಲ್ಲಿ ಇಂದು ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವ?

Posted by Vidyamaana on 2023-12-24 07:17:03 |

Share: | | | | |


ಹೇಗಿರಲಿದೆ ಹತ್ತೂರು ಒಡೆಯನ ನೆಲದಲ್ಲಿ ಇಂದು ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವ?

ಶ್ರೀನಿವಾಸ ಕಲ್ಯಾಣೋತ್ಸವದ ಹೈಲೈಟ್ಸ್: 


ಪುತ್ತಿಲ ಪರಿವಾರ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ವತಿಯಿಂದ ಡಿ.24-25 ರಂದು ಜರಗುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸನಾತನ ಸಮಾಗಮದ ವಿಶೇಷತೆ ಹೀಗಿದೆ. 


 50 ಸಾವಿರ ಶ್ರೀನಿವಾಸ ಕಲ್ಯಾಣ ಲಡ್ಡು ಪ್ರಸಾದ ಸೇವೆ ಸೇರಿದಂತೆ ಅನ್ನದಾನ ಸೇವೆ, ಸರ್ವ ಸೇವೆ, ಫಲಪಂಚಾಮೃತ ಅಭಿಷೇಕ  ಸೇವೆ , ಮಹಾನಿವೇದನಾ ಸೇವೆ , ಸುಪ್ರಭಾತ ಸೇವೆ ಹಾಗೂ ಈಗಾಗಲೇ ನೋಂದಾಣಿಯಾಗಿದೆ.


ಅಂದಾಜು 1.25 ಲಕ್ಷ ಜನ ಎರಡು ದಿನ ಭಾಗವಹಿಸಲಿದ್ದು,  ಬೆಳಿಗ್ಗೆ ಫಲಹಾರ , ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ಇರಲಿದೆ. 


ಅದಕ್ಕಾಗಿ ವಿಶೇಷ ಅನ್ನಛತ್ರ ಪೆಂಡಲ್ ನಿರ್ಮಿಸಲಾಗಿದೆ.  


ವಿಶೇಷ ಅತ್ಯಾಕರ್ಷಕ ಹೂವಿನ ಆಲಂಕಾರವಿರಲಿದೆ.


ಮೆರವಣಿಗೆ ಹೇಗಿರಲಿದೆ ಗೊತ್ತೇ ..? 


ಉಪ್ಪಿನಂಗಡಿಯಿಂದ ದೇವರನ್ನು ಬರಮಾಡಿಕೊಂಡು ಬೊಳುವಾರಿನಿಂದ ಪೂರ್ಣಕುಂಭ ಸ್ವಾಗತವಿರಲಿದೆ.  


ದೇವರ ಸ್ವಾಗತ  ಹೇಗಿರಲಿದೆ : 

ಎದುರಿಗೆ ಪೂರ್ಣಕುಂಭ ಸ್ವಾಗತ ತಂಡ  ಅದರ ಹಿಂದೆ ರುದ್ರಪಾರಾಯಣ ತಂಡ ನಂತರ   ವಿಷ್ಣು ಸಹಸ್ರನಾಮ ತಂಡ ಆ ನಂತರ ಭಜನಾ ತಂಡ ಅದರ ಹಿಂದೆ ಶಂಖನಾದ ತಂಡ ಅದರ ಹಿಂದೆ ತೆರೆದ ವಾಹನದಲ್ಲಿ ಶ್ರೀನಿವಾಸ ದೇವರ ಮೂರ್ತಿ ಇರಲಿದೆ.



ಆ ನಂತರ ಚೆಂಡೆ ಅದರ ಹಿಂದೆ ಭಗವಧ್ಬಕ್ತರು ದೇವರ ನಾಮಸ್ಮರಣೆಯೊಂದಿಗೆ ಸಾಗಲಿದ್ದಾರೆ.



ಪುತ್ತೂರು ಪೇಟೆ ಕೇಸರಿಮಯ : ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸನಾತನ ಸಮಾಗಮದ ಪ್ರಯುಕ್ತ ಪುತ್ತೂರು ಪೇಟೆ ಸಂಪೂರ್ಣ ಕೇಸರಿಮಯವಾಗಿರಲಿದೆ. ಇದಕ್ಕಾಗಿ ಕಾರ್ಯಕರ್ತರ ತಂಡ ರಾತ್ರಿ ಕೆಲಸ ಮಾಡುತ್ತಿದೆ. 


ಸಾವಿರಕ್ಕೂ ಮಿಕ್ಕಿ ಬ್ಯಾನರ್ : 

ಶ್ರೀನಿವಾಸ ದೇವರ ಅತ್ಯಾಕರ್ಷಕ ಪೋಟೋವಿರುವ ಬ್ಯಾನರ್ ಹಾಗೂ ದೊಡ್ಡ ಹೋಲ್ಡಿಂಗ್ಸ್ ಪುತ್ತೂರು ಪೇಟೆಯ ಡಿವೈಡರ್ ನಲ್ಲಿ ಹಾಗೂ ಪೇಟೆಯೆಲ್ಲೆಡೆ ಈಗಾಗಲೇ ಹಾಕಲಾಗಿದೆ.


ಉಪ್ಪಿನಂಗಡಿ, ಕಡಬ, ಸವಣೂರು, ಬೆಳ್ಳಾರೆ,  ಸುಳ್ಯ,  ವಿಟ್ಲ, ಬಂಟ್ವಾಳದಲ್ಲಿ ಈಗಾಗಲೇ ಭಕ್ತಾದಿಗಳು  ಬ್ಯಾನರ್ ಹಾಕಲಾಗಿದೆ.

ಉಳ್ಳಾಲ - ಗಾಯಾಳು ಬೈಕ್ ಸವಾರ ತೇಜಸ್ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Posted by Vidyamaana on 2023-06-12 13:02:19 |

Share: | | | | |


ಉಳ್ಳಾಲ - ಗಾಯಾಳು ಬೈಕ್ ಸವಾರ ತೇಜಸ್ ಚಿಕಿತ್ಸೆ ಫಲಕಾರಿಯಾಗದೆ  ಮೃತ್ಯು

ಉಳ್ಳಾಲ : ಬೈಕ್‍ಗೆ ಇನೋವಾ ಕಾರು ಢಿಕ್ಕಿ ಹೊಡೆದು ಪರಾರಿಯಾಗಿದ್ದ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಕೋಟೆಕಾರು ಪಟ್ಟಣ ವ್ಯಾಪ್ತಿಯ ಮಾಡೂರು ವೈದ್ಯನಾಥ ದೈವಸ್ಥಾನ ರಸ್ತೆ ನಿವಾಸಿ ತೇಜಸ್ ಕುಲಾಲ್ (28) ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.ಕಳೆದ ಜೂ.4 ರ ಭಾನುವಾರ ತಡರಾತ್ರಿ ತೇಜಸ್ ಸಂಕೋಳಿಗೆಯ ಪೆಟ್ರೋಲ್ ಬಂಕಿಗೆ ಪೆಟ್ರೋಲ್ ತುಂಬಿಸಲು ಬೈಕಲ್ಲಿ ತೆರಳುತ್ತಿದ್ದ ವೇಳೆ ಕೇರಳ ನೋಂದಾವಣಿಯ ಇನ್ನೋವಾ ಕಾರೊಂದು ಢಿಕ್ಕಿ ಹೊಡೆದು ಪರಾರಿಯಾಗಿತ್ತು.ಹಿಟ್ ಆಂಡ್ ರನ್ ಪ್ರಕರಣ ದಾಖಲಿಸಿದ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ತಲಪಾಡಿ ಟೋಲ್ ಗೇಟ್ ನ ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಮರುದಿನವೇ ಘಟನೆಗೆ ಕಾರಣವಾದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದರು.ಗಂಭೀರ ಗಾಯಗೊಂಡಿದ್ದ ತೇಜಸ್ ನನ್ನು ತಕ್ಷಣಕ್ಕೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು,ನಂತರ ಮಂಗಳೂರಿನ ಕೆಎಮ್ ಸಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ತಲೆಗೆ ಗಂಭೀರ ಗಾಯವಾಗಿದ್ದ ತೇಜಸ್ ಕೋಮಾ ಸ್ಥಿತಿಯಲ್ಲಿದ್ದು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತ ತೇಜಸ್ ಅವಿವಾಹಿತರಾಗಿದ್ದು ಸುಝಕಿ ಕಂಪನಿಯಲ್ಲಿ ಮೆಕ್ಯಾನಿಕ್ ಆಗಿದ್ದರು.ತೇಜಸ್ ಬಜರಂಗದಳ ಮಾಡೂರು ಶಾಖೆಯ ಸಕ್ರಿಯ ಕಾರ್ಯಕರ್ತರಾಗಿದ್ದರು.ಮೃತರು ತಂದೆ ರಾಮ ಕುಲಾಲ್,ತಾಯಿ ರೇವತಿ ಮತ್ತು ಸಹೋದರ ರವೀಂದ್ರ ಅವರನ್ನು ಅಗಲಿದ್ದಾರೆ.

ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ : ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು : ನ.22ರವರೆಗೆ ನ್ಯಾಯಾಂಗ ಬಂಧನ

Posted by Vidyamaana on 2023-11-08 12:54:48 |

Share: | | | | |


ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ : ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು : ನ.22ರವರೆಗೆ ನ್ಯಾಯಾಂಗ ಬಂಧನ

ಪುತ್ತೂರು : ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಆರೋಪಿಗಳಾದ ಚೇತನ್, ಮನೀಶ್, ಕೇಶವ, ಮಂಜುನಾಥ್ ಎಂಬವರನ್ನು ನ.8 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ನ.7 ರಂದು ರಾತ್ರಿ ಆರೋಪಿಗಳನ್ನು ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಗಿತ್ತು. ನ.8 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ನ್ಯಾಯಾಧೀಶರು ನ.22 ರ ತನಕ ನ್ಯಾಯಾಂಗ ಕಸ್ಟಡಿಗೊಳಪಡಿಸಿ ಆದೇಶ ನೀಡಿದ್ದಾರೆ.



Leave a Comment: