ಕೊಡಗಿನ ಅನಧಿಕೃತ, ಅವೈಜ್ಞಾನಿಕ ಗ್ಲಾಸ್ ಬ್ರಿಡ್ಜ್ ಬಂದ್

ಸುದ್ದಿಗಳು News

Posted by vidyamaana on 2024-06-28 23:59:46 |

Share: | | | | |


  ಕೊಡಗಿನ ಅನಧಿಕೃತ, ಅವೈಜ್ಞಾನಿಕ ಗ್ಲಾಸ್ ಬ್ರಿಡ್ಜ್ ಬಂದ್

ಮಡಿಕೇರಿ: ಕೊಡಗಿನಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದ್ದು, ಜಿಲ್ಲೆಯಾದ್ಯಂತ ಹಲವಾರು ಹೋಂಸ್ಟೇಗಳು ಮತ್ತು ರೆಸಾರ್ಟ್‌ಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಇದೀಗ ಕೊಡಗಿನಲ್ಲಿ ಹೊಸ ಟ್ರೆಂಡ್ ಆಗಿ ಪ್ರವಾಸಿಗರನ್ನು ಸೆಳೆಯಲು ಹಲವು ಪ್ರದೇಶಗಳಲ್ಲಿ ಗಾಜಿನ ಸೇತುವೆಗಳನ್ನೂ ನಿರ್ಮಿಸಲಾಗುತ್ತಿದೆ.

ಆದರೆ, ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಗ್ಲಾಸ್ ಬ್ರಿಡ್ಜ್ ಅನ್ನು ಸೂಕ್ತ ಅನುಮತಿ ಇಲ್ಲದ ಕಾರಣ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಬಂದ್ ಮಾಡಿದೆ.

ಕೆ ನಿಡುಗಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸುಮಾರು 200 ಮೀಟರ್ ಉದ್ದದ ಗಾಜಿನ ಸೇತುವೆಯು ವಿಶಾಲವಾದ ಹಸಿರು ಮತ್ತು ಪರ್ವತಗಳ ಮಧ್ಯ ನಿರ್ಮಿಸಲಾಗಿದೆ. ಈ ಗಾಜಿನ ಸೇತುವೆಯು ಪ್ರಧಾನ ಪ್ರವಾಸಿ ತಾಣವಾದ ಅಬ್ಬೆ ಜಲಪಾತದ ದಾರಿಯಲ್ಲಿದೆ.

ಈ ಸೇತುವೆಯನ್ನು ನಿರ್ಮಿಸಲು ಖಾಸಗಿಯವರು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದರೂ, ಸೇತುವೆಯ ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ. ಹೀಗಾಗಿ ಅದು ಈಗ ದುರ್ಬಲ ಸ್ಥಿತಿಯಲ್ಲಿದೆ. ಜೌಗು ಪ್ರದೇಶದಲ್ಲಿರುವ ಈ ಗಾಜಿನ ಸೇತುವೆಯ ಕೆಳಗಿನ ಸಡಿಲವಾದ ಮಣ್ಣು ಕ್ರಮೇಣ ಕೆಳಕ್ಕೆ ಜಾರುತ್ತಿರುವುದರಿಂದ ಅಪಾಯದ ಸ್ಥಿತಿ ಎದುರಾಗಿದೆ.

ಘಟನಾ ಸ್ಥಳಕ್ಕೆ ಕೊಡಗು ಡಿಸಿ ವೆಂಕಟ್ ರಾಜ ಅವರು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಗ್ಲಾಸ್ ಬ್ರಿಡ್ಜ್ ಲಾಕ್ ಮಾಡಿದ್ದು, ಬಂದ್ ಮಾಡುವಂತೆ ಆದೇಶಿಸಿದ್ದಾರೆ. ಇದು ಅಧಿಕೃತ ಗಾಜಿನ ಸೇತುವೆಯಲ್ಲ. ಏಕೆಂದರೆ ಸಂಬಂಧಪಟ್ಟವರು ಯಾವುದೇ ಅಗತ್ಯ ಅನುಮತಿಯನ್ನು ಪಡೆದಿಲ್ಲ. ಈ ಸೇತುವೆಗೆ ಅರಣ್ಯ ಅನುಮತಿ ಇಲ್ಲ. ಸೇತುವೆಯನ್ನು ನಿರ್ಮಿಸುವ ಮುನ್ನ ಮಣ್ಣು ಪರೀಕ್ಷೆ ಸೇರಿದಂತೆ ಯಾವುದೇ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಲ್ಲ. ಗ್ರಾಮ ಪಂಚಾಯಿತಿಯ ಏಕಮಾತ್ರ ನಿರ್ಣಯದ ಮೇರೆಗೆ ಸೇತುವೆಯನ್ನು ನಿರ್ಮಿಸಲಾಗಿದೆ. ಹೀಗಾಗಿ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಂದ್ ಮಾಡಲಾಗುತ್ತಿದೆ ಎಂದು ಡಿಸಿ ವೆಂಕಟ್ ರಾಜ ಅವರು ತಿಳಿಸಿದ್ದಾರೆ.

ಇದೇ ವೇಳೆ ಕೆ.ನಿಡುಗಣೆ ಗ್ರಾ.ಪಂ.ಅಧ್ಯಕ್ಷ ಡೀನ್ ಬೋಪಣ್ಣ ಮಾತನಾಡಿ, ಪಂಚಾಯಿತಿಯೇ ಈ ಗ್ಲಾಸ್ ಬ್ರಿಡ್ಜ್ ಬಂದ್ ಮಾಡುವ ನಿರ್ಧಾರ ಕೈಗೊಂಡಿದೆ. ಈ ಪ್ರದೇಶದಲ್ಲಿ 5 ಇಂಚುಗಳಷ್ಟು ಮಳೆಯಾಗಿದೆ ಮತ್ತು ಗಾಜಿನ ಸೇತುವೆಯ ಪಿಲ್ಲರ್‌ಗಳನ್ನು ಹಾಕಲಾದ ಸ್ಥಳದಲ್ಲಿ ಮಣ್ಣು ಕೆಳಕ್ಕೆ ಜಾರಿದೆ. ಹೀಗಾಗಿ, ಸಾರ್ವಜನಿಕರವೀಕ್ಷಣೆಗೆ ನಾವು ಸೇತೆವೆಯನ್ನು ಬಂದ್ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.ಗೇಟ್ ಲಾಕ್ ಮಾಡಿರುವುದು

ಅನುಮತಿ ಕುರಿತು ಪ್ರಶ್ನಿಸಿದಾಗ, ಖಾಸಗಿಯವರು ಸಲ್ಲಿಸಿದ ದಾಖಲೆಗಳ ಆಧಾರದ ಮೇಲೆ ಪಂಚಾಯಿತಿ ಅನುಮತಿ ನೀಡಿದೆ.

ಸರ್ವೆ ಸಂಖ್ಯೆ 62 ಮತ್ತು 51/1 ಇಬ್ಬರು ನಿವಾಸಿಗಳ ಒಡೆತನದಲ್ಲಿದೆ ಮತ್ತು ಗಾಜಿನ ಸೇತುವೆಯ ಮಾಲೀಕರು ಸೇತುವೆಯನ್ನು ನಿರ್ಮಿಸಲು ಭೂ ಮಾಲೀಕರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಎಲ್ಲ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಸುಮಾರು ಎಂಟು ತಿಂಗಳ ಹಿಂದೆ ಸೇತುವೆಗೆ ಪಂಚಾಯಿತಿ ಅನುಮತಿ ನೀಡಿತ್ತು. ಆದರೆ, ಭೂ ಪರಿವರ್ತನೆಯ ದಾಖಲೆ ಸಲ್ಲಿಸಿಲ್ಲ ಮತ್ತು ಸುಮಾರು ಮೂರು ವರ್ಷಗಳಿಂದ ಯಾವುದೇ ಭೂ ಪರಿವರ್ತನೆ ಅರ್ಜಿಗಳಿಗೆ ಅನುಮತಿ ನೀಡಿಲ್ಲ ಎಂದು ಅವರು ವಿವರಿಸಿದರು.

 Share: | | | | |


ಮಂಗಳೂರು: ದ.ಕ. ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಮುಲೈ ಮುಹಿಲನ್ ಎಂ.ಪಿ. ಅಧಿಕಾರ ಸ್ವೀಕಾರ

Posted by Vidyamaana on 2023-06-17 09:51:47 |

Share: | | | | |


ಮಂಗಳೂರು: ದ.ಕ. ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಮುಲೈ ಮುಹಿಲನ್ ಎಂ.ಪಿ. ಅಧಿಕಾರ ಸ್ವೀಕಾರ

ಮಂಗಳೂರು: ಇಂದು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಮುಲೈ ಮುಹಿಲನ್ ಎಂ.ಪಿ. ಅಧಿಕಾರ ಸ್ವೀಕರಿಸಿದರು.

ಎಂ.ಆರ್.ರವಿಕುಮಾರ್ ಅವರು ನೂತನ ಜಿಲ್ಲಾಧಿಕಾರಿಗೆ ಮುಲೈ ಮುಹಿಲನ್ ಎಂ.ಪಿ.ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ತಮಿಳುನಾಡು ಮೂಲದ ಮುಲೈ ಮುಹಿಲನ್ ಈ ಮೊದಲು ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಬೆಂಗಳೂರು ಇದರ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮಂಗಳೂರು: ವಿದ್ಯುತ್ ತಂತಿ ಕಡಿದು ಬಿದ್ದು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ ಸಹಿತ ಇಬ್ಬರು ರಿಕ್ಷಾ ಚಾಲಕರು ಮೃತ್ಯು

Posted by Vidyamaana on 2024-06-27 09:54:47 |

Share: | | | | |


ಮಂಗಳೂರು: ವಿದ್ಯುತ್ ತಂತಿ ಕಡಿದು ಬಿದ್ದು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ ಸಹಿತ  ಇಬ್ಬರು ರಿಕ್ಷಾ ಚಾಲಕರು ಮೃತ್ಯು

ಮಂಗಳೂರು, ಜೂ 27 ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನಗರದ ರೊಸಾರಿಯೋ ಬಳಿ ನಡೆದಿದೆ.

ಪ್ರೇಯಸಿಯೊಂದಿಗೆ ಸರಸದಲ್ಲಿರುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿರಾಯ

Posted by Vidyamaana on 2023-06-16 02:01:51 |

Share: | | | | |


ಪ್ರೇಯಸಿಯೊಂದಿಗೆ ಸರಸದಲ್ಲಿರುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿರಾಯ

ಉತ್ತರ ಪ್ರದೇಶದ ಬಹ್ರಿಯಾಚ್‌ ಜಿಲ್ಲೆಯಲ್ಲಿ ಕಿರಿಯ ಅಭಿಯಂತರ (ಜೆಇ) ಆಗಿ ಕೆಲಸ ಮಾಡುವ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಮಡದಿ ಇಲ್ಲದ ವೇಳೆ ಅನ್ಯ ಸ್ತ್ರೀಯೊಂದಿಗೆ ಸಲ್ಲಾಪದಲ್ಲಿ ತೊಡಗಿದ್ದ ವೇಳೆ ಪತ್ನಿ ಹಾಗೂ ಆಕೆಯ ಸಹೋದರರಿಗೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.ಜೆಇಗೆ ಆತನ ಭಾಮೈದನರು ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತನ್ನ ಮಡದಿ ತವರಿಗೆ ಹೋಗಿದ್ದೇ ತಡ, ಪ್ರೇಯಸಿಯನ್ನು ಕರೆಯಿಸಿಕೊಂಡ ಈ ಜೆಇ ಆಕೆಯೊಂದಿಗೆ ಸಲ್ಲಾಪದಲ್ಲಿ ಭಾಗಿಯಾಗಿದ್ದ. ಐದು ದಿನಗಳಿಂದ ತನ್ನ ಮನೆಯಲ್ಲಿ ಪರಸ್ತ್ರೀಯೊಬ್ಬಳು ಪತಿಯೊಂದಿಗೆ ವಾಸಿಸುತ್ತಿದ್ದಾಳೆ ಎಂದು ಅರಿತ ಪತ್ನಿ ತನ್ನ ಸಹೋದರರನ್ನು ಕರೆದುಕೊಂಡು ಮನೆಗೆ ಅಚ್ಚರಿಯ ಭೇಟಿ ಕೊಟ್ಟಿದ್ದಾಳೆ.

ಈ ವೇಳೆ ಅನ್ಯ ಸ್ತ್ರೀಯೊಂದಿಗೆ ಇದ್ದ ತನ್ನ ಪತಿಯನ್ನು ಕಂಡು ಕೆಂಡಾಮಂಡಲವಾದ ಪತ್ನಿ ತನ್ನ ಪತಿಗೆ ಚೆನ್ನಾಗಿ ಬೈದಿದ್ದಲ್ಲದೇ ಸಹೋದರರಿಂದ ಧರ್ಮದೇಟು ಹಾಕಿಸಿದ್ದಾಳೆ.

ಪೊಲೀಸ್ ಠಾಣೆಯಲ್ಲಿ ಈ ವಿಚಾರವಾಗಿ ರಾಜಿ ಪಂಚಾಯಿತಿ ಮಾಡಲಾಗಿದ್ದು, ತಾನು ಇನ್ನೆಂದೂ ಆ ಮಹಿಳೆಯೊಂದಿಗೆ ಸೇರುವುದಿಲ್ಲವೆಂದು ಜೆಇ ಮಾತು ಕೊಟ್ಟ ಬಳಿಕ ಆತನೊಂದಿಗೆ ಸಂಸಾರ ಮುಂದುವರೆಸಿಕೊಂಡು ಹೋಗಲು ಮಡದಿ ಒಪ್ಪಿದ್ದಾಳೆ

ಬೆಳ್ತಂಗಡಿ: ಪತ್ನಿಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಹಲ್ಲೆ ಪ್ರಕರಣ; ಆರೋಪಿ ಸುರೇಶ್ ಗೌಡ ಬಂಧನ

Posted by Vidyamaana on 2023-12-19 21:35:14 |

Share: | | | | |


ಬೆಳ್ತಂಗಡಿ: ಪತ್ನಿಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಹಲ್ಲೆ ಪ್ರಕರಣ; ಆರೋಪಿ ಸುರೇಶ್ ಗೌಡ ಬಂಧನ

ಬೆಳ್ತಂಗಡಿ: ಪತ್ನಿ ಕಣ್ಣು ಕಚ್ಚಿ ಮಾಂಸ ಹೊರಬರುವಂತೆ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಕಂಠಪೂರ್ತಿ ಕುಡಿದು ಮನೆಗೆ ಬಂದ ಆರೋಪಿ ಪತಿ ಸುರೇಶ್ ಗೌಡ(55), ತನ್ನ ಹೆಂಡತಿ ಮೋಹಿನಿ(55) ಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಗಾಯಗೊಳಿಸಿದ್ದ ವಿಕೃತ ಘಟನೆ ನಡೆದಿತ್ತು. ಬಳಿಕ ಪರಾರಿಯಾಗಿ ಮನೆಯ ಹತ್ತಿರದ ತೋಟದಲ್ಲಿ ಅಡಗಿ ಕುಳಿತ್ತಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಕಾಪು : ಆಲದ ಮರ ಬಿದ್ದು ಕಾರ್ಮಿಕ ಸಾವು ಇಬ್ಬರಿಗೆ ಗಾಯ

Posted by Vidyamaana on 2023-10-02 22:25:05 |

Share: | | | | |


ಕಾಪು : ಆಲದ ಮರ ಬಿದ್ದು ಕಾರ್ಮಿಕ ಸಾವು  ಇಬ್ಬರಿಗೆ ಗಾಯ

ಕಾಪು: ನಾಗಬನ ಮತ್ತು ಮನೆ ಮೇಲೆ ಅಪಾಯಕಾರಿಯಾಗಿ ವಾಲಿದ್ದ ಮರವನ್ನು ಕಡಿಯುತ್ತಿದ್ದ ವೇಳೆ ಮರ ಉರುಳಿ ಬಿದ್ದು ಜಾರ್ಖಂಡ್ ಮೂಲದ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಮಜೂರು ಗ್ರಾಮದ ಕರಂದಾಡಿಯಲ್ಲಿ ಆ.2ರ ಸೋಮವಾರ ಮಧ್ಯಾಹ್ನ ನಡೆದಿದೆ.



ಬಿಹಾರ – ಜಾರ್ಖಂಡ್ ಮೂಲದ ಸುಧೀರ್ ಪಾಂಜೆ ಮೃತ ಕೂಲಿ ಕಾರ್ಮಿಕನಾಗಿದ್ದು, ಗಾಯಾಳುಗಳ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.


ಕರಂದಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಖಾಸಗಿಯವರಿಗೆ ಸೇರಿದ ನಾಗಬನವೊಂದರ ಮೇಲೆ ವಾಲಿದ್ದ ಬೃಹತ್ ಗೋಳಿಮರವನ್ನು ಕಡಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.


ಬೃಹತ್ ಗೋಳಿ ಮರವನ್ನು ಕಡಿಯುತ್ತಿದ್ದ ವೇಳೆ ಅದು ಕಾರ್ಮಿಕರ ಮೇಲೆ ಉರುಳಿ ಬಿದ್ದಿತ್ತು. ಇದರಿಂದಾಗಿ ಮೂವರು ಕಾರ್ಮಿಕರು ಮರದಡಿಗೆ ಸಿಲುಕಿಕೊಂಡಿದ್ದು, ಓರ್ವ ಮರದಡಿ ಸಿಲುಕಿ ಮೃತಪಟ್ಟಿರುವುದಾಗಿ ವರದಿಯಾಗಿದೆ.  ಇಬ್ಬರನ್ನು ರಕ್ಷಿಸಿ, ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಮರದಡಿ ಸಿಲುಕಿರುವ ಕಾರ್ಮಿಕನನ್ನು ತೆರವುಗೊಳಿಸುವ ಕಾರ್ಯ ಬರದಿಂದ ಸಾಗುತ್ತಿದೆ. ಕಾಪು ಪೊಲೀಸರು ಈಗಾಗಲೇ ಸ್ಥಳಕ್ಕೆ ಧಾವಿಸಿದ್ದು ಸ್ಥಳೀಯರ ನೇತೃತ್ವದಲ್ಲಿ ಮರ ತೆರವು ಕಾರ್ಯ ಬರದಿಂದ ಸಾಗುತ್ತಿದೆ.



ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಎಸ್.ಐ. ಅಬ್ದುಲ್ ಖಾದರ್, ಕ್ರೈಂ ಎಸ್.ಐ. ಪುರುಷೋತ್ತಮ್ ಹಾಗೂ ಪೊಲೀಸ್ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳೀಯರು ಮರ ತೆರವು ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸಿದರು.

ಜಾರಿಯಾಯ್ತು ಕಾಂಗ್ರೆಸ್ ಗ್ಯಾರಂಟಿ - ವೈರಲ್ ಆಯ್ತು ಬಿಜೆಪಿಗೆ ಟಾಂಗ್ ನೀಡಿದ ಕೈ ಟ್ವೀಟ್

Posted by Vidyamaana on 2023-06-02 12:05:08 |

Share: | | | | |


ಜಾರಿಯಾಯ್ತು ಕಾಂಗ್ರೆಸ್ ಗ್ಯಾರಂಟಿ - ವೈರಲ್ ಆಯ್ತು ಬಿಜೆಪಿಗೆ ಟಾಂಗ್ ನೀಡಿದ ಕೈ ಟ್ವೀಟ್

ಬೆಂಗಳೂರು: ಕಾಂಗ್ರೆಸ್‌ ಪಕ್ಷವು ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲ 5 ಗ್ಯಾರಂಟಿ ಯೋಜನೆಗಳನ್ನು ಸಹ ಪ್ರಸಕ್ತ ಆರ್ಥಿಕ ವರ್ಷದಲ್ಲಿಯೇ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.


ಇದರ ಬೆನ್ನಲ್ಲೇ ಮಾಜಿ ಸಿಎಂ ಬೊಮ್ಮಾಯಿ ಸೇರಿ ವಿಪಕ್ಷ ಬಿಜೆಪಿ ನಾಯಕರನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯ ಸರಕಾರದ ಉಚಿತ ಯೋಜನೆಗಳನ್ನು ಎಲ್ಲರಿಗೂ ತಲುಪಲಿದೆ ಎಂದು ತಿಳಿಸಿದೆ. 


ನಳಿನ್ ಕುಮಾರ್ ಕಟೀಲ್ ಅವರೇ, ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ!, ಬೊಮ್ಮಾಯಿ ಅವರೇ, ನಿಮ್ಮ ಮನೆಗೂ ಫ್ರೀ!, ಶೋಭಾ ಅವರೇ, ನಿಮಗೂ ಪ್ರಯಾಣ ಫ್ರೀ! ಸಿಟಿ ರವಿ ಅವರೇ, ನಿಮ್ಮ ಮನೆಯವರಿಗೂ ₹2000 ಫ್ರೀ ಎಂದು ಕಾಂಗ್ರೆಸ್  ಕುಟುಕಿದೆ. 


ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ)! ಇದು ನಮ್ಮ ಗ್ಯಾರಂಟಿ. ನಾವು ನುಡಿದಂತೆ ನಡೆಯುವವರು, ನಾವು ಮಾತು ಉಳಿಸಿಕೊಳ್ಳುವವರು. ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ ಇತಿಹಾಸ ಸೃಷ್ಟಿಸಿದ್ದೇವೆ. ಇದು ನಮ್ಮ ಬದ್ಧತೆ ಎಂದು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.



Leave a Comment: