ಪುತ್ತೂರು: ಪುತ್ತೂರುದ ಪಿಲಿಗೊಬ್ಬು ಸೀಸನ್‌-4ರ ಕಾರ್ಯಕ್ರಮದಲ್ಲಿ ಈ ಬಾರಿ ವಿಶೇಷವಾಗಿ ಬಿರುಮಲೆ ಬೆಟ್ಟದಲ್ಲಿರುವ ಪ್ರಜ್ಞಾ ವಿಶೇಷ ಚೇತನ ಮಕ್ಕಳ ಆಶ್ರಮದ ನಿವಾಸಿಗಳಿಗೆ ಹುಲಿಕುಣಿತ ವೀಕ್ಷಿಸಲು ಅವಕಾಶ ಕಲ್ಪಿಸುವ ಮೂಲಕ ವಿಜಯಸಾಮ್ರಾಟ್ ಸಂಸ್ಥೆಯ ಕಾರ್ಯ ಸಮಾಜದ ಗಮನ ಸೆಳೆದಿದೆ. ಈ ಮೂಲಕ ಪ್ರೀತಿ, ಮಾನವೀಯತೆ ಹಾಗೂ ಸಮಾನತೆಯ ಸಂದೇಶ ಸಾರಲಾಗಿದೆ.ಆಶ್ರಮದ ನಿವಾಸಿಗಳು ಪಿಲಿಗೊಬ್ಬಿನ ಸಂಭ್ರಮವನ್ನು ಕಣ್ಣುಂಬಿಕೊಳ್ಳಬೇಕು ಎಂಬ ಆಶಯದೊಂದಿಗೆ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಹುಲಿಕುಣಿತದ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಯಿತು. ಸಹಜ್ ರೈ ಬಳಜ್ಜ ಅವರ ಈ ಮಾನವೀಯ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

Leave a Reply

Your email address will not be published. Required fields are marked *

Join WhatsApp Group
error: Content is protected !!