ಆನೇಕಲ್: ಹತ್ತು ವರ್ಷಗಳ ದಾಂಪತ್ಯ ಜೀವನ, ಆರು ವರ್ಷದ ಮಗನೊಂದಿಗೆ ನೆಮ್ಮದಿಯ ಸಂಸಾರದ ಕನಸು ಕಂಡಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದೆ. ಪತ್ನಿ ಹಾಗೂ ಸಂಬಂಧಿಯ ನಡುವಿನ ವಿವಾಹೇತರ ಸಂಬಂಧದ ಆರೋಪದಿಂದ ಮನನೊಂದು ಮುನಿಕೃಷ್ಣ (ಹೆಸರು) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.ದೊಡ್ಡಬಳ್ಳಾಪುರದ ನಾಗದೇವನಹಳ್ಳಿಯ ನಯನಾ ಅವರನ್ನು ಮುನಿಕೃಷ್ಣ ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಆರು ವರ್ಷದ ಮಗನಿದ್ದಾನೆ. ಆದರೆ, ನಯನಾ ಹಾಗೂ ಮುನಿಕೃಷ್ಣ ಅವರ ಸಂಬಂಧಿ ಕುಮಾರ ನಡುವೆ ವಿವಾಹೇತರ ಸಂಬಂಧವಿತ್ತು ಎಂಬ ಆರೋಪ ಕುಟುಂಬದಲ್ಲಿ ಮನಸ್ತಾಪಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.









