ಪುತ್ತೂರು : ವಿಜಯದಶಮಿ ಹಾಗೂ ನವರಾತ್ರಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ವಿಶೇಷಗೊಳಿಸುವ ಉದ್ದೇಶದಿಂದ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಸಂಸ್ಥೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ಘೋಷಿಸಿದೆ.ಸಂಸ್ಥೆಯ ಪ್ರಕಟಣೆಯ ಪ್ರಕಾರ, ಚಿನ್ನಾಭರಣಗಳ ಮೇಕಿಂಗ್ ಚಾರ್ಜ್‌ನಲ್ಲಿ ಗರಿಷ್ಠ ₹600ರವರೆಗೆ ರಿಯಾಯಿತಿ ನೀಡಲಾಗುತ್ತಿದೆ. ವಜ್ರಾಭರಣಗಳ ಖರೀದಿಗೆ ಪ್ರತಿ ಕ್ಯಾರೆಟ್‌ಗೆ ಫ್ಲಾಟ್ ₹8,000 ರಿಯಾಯಿತಿ ಹಾಗೂ ಬೆಳ್ಳಿ ಆಭರಣಗಳ ಖರೀದಿಗೆ ಪ್ರತಿ ಕೆ.ಜಿ.ಗೆ ಫ್ಲಾಟ್ ₹8,000 ರಿಯಾಯಿತಿ ಲಭ್ಯವಿದೆ. ವಜ್ರಾಭರಣಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಒದಗಿಸುವುದರ ಜೊತೆಗೆ ಈ ವಿಶೇಷ ರಿಯಾಯಿತಿಯನ್ನೂ ನೀಡಲಾಗುತ್ತಿದೆ.ಗ್ರಾಹಕರು ಚಿನ್ನದ ಉಳಿತಾಯ ಯೋಜನೆಗೆ ಸೇರ್ಪಡೆಯಾಗುವ ಅವಕಾಶವನ್ನೂ ಸಂಸ್ಥೆ ಕಲ್ಪಿಸಿದೆ. ಯೋಜನೆಯ ನಿಗದಿತ ಅವಧಿಯನ್ನು ಪೂರ್ಣಗೊಳಿಸಿದ ಬಳಿಕ ಮುಂದಿನ ವರ್ಷದ ಹಬ್ಬದ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಸಲು ಈ ಯೋಜನೆ ಸಹಕಾರಿಯಾಗಲಿದೆ.ಇದಲ್ಲದೆ, ಇತರ ಮಳಿಗೆಗಳಿಂದ ಖರೀದಿಸಿದ ಹಳೆಯ ಚಿನ್ನಾಭರಣಗಳನ್ನು ಶೇಕಡಾ 0ರಷ್ಟು ರೇಟ್ ಡಿಡಕ್ಷನ್‌ನೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಅವಕಾಶವನ್ನೂ ನೀಡಲಾಗಿದೆ.ವಿಜಯದಶಮಿ ಹಾಗೂ ನವರಾತ್ರಿ ಪ್ರಯುಕ್ತ ಗ್ರಾಹಕರಿಗಾಗಿ ಸಾಂಪ್ರದಾಯಿಕ ಮತ್ತು ಆಧುನಿಕ ವಿನ್ಯಾಸಗಳ ವೈವಿಧ್ಯಮಯ ಚಿನ್ನಾಭರಣ ಸಂಗ್ರಹವನ್ನು ಸಂಸ್ಥೆ ಸಿದ್ಧಪಡಿಸಿದೆ. ಗ್ರಾಹಕರ ಅಭಿರುಚಿ ಹಾಗೂ ಅಗತ್ಯಗಳಿಗೆ ತಕ್ಕಂತೆ ವಿವಿಧ ವಿನ್ಯಾಸಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಹೆಚ್ಚಿನ ಉಳಿತಾಯದ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಕೊಡುಗೆಗಳನ್ನು ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.ಈ ಕೊಡುಗೆಗಳು ಚಿನ್ನದ ನಾಣ್ಯಗಳು, ಚಿನ್ನದ ಗಟ್ಟಿಗಳು ಹಾಗೂ ಎಲ್ಲೋ ಟ್ಯಾಗ್ ಹೊಂದಿರುವ ಆಭರಣಗಳಿಗೆ ಅನ್ವಯಿಸುವುದಿಲ್ಲ. ಅಲ್ಲದೆ, ಯಾವುದೇ ಚಿನ್ನದ ಉಳಿತಾಯ ಯೋಜನೆ ಅಥವಾ ಇತರ ಯೋಜನೆಗಳೊಂದಿಗೆ ಈ ಕೊಡುಗೆಗಳನ್ನು ಸಂಯೋಜಿಸಲು ಅವಕಾಶವಿಲ್ಲ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.ಪುತ್ತೂರಿನಲ್ಲಿ ಆರಂಭಗೊಂಡಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಆರು ದಶಕಗಳಿಗೂ ಹೆಚ್ಚು ಕಾಲ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡು ಮುನ್ನಡೆಯುತ್ತಿದೆ. ಗುಣಮಟ್ಟ, ಸೊಬಗು, ಪಾರದರ್ಶಕತೆ ಹಾಗೂ ಗ್ರಾಹಕರ ಹಿತಕ್ಕೆ ಆದ್ಯತೆ ನೀಡುತ್ತಾ ಸಂಸ್ಥೆ ತನ್ನ ಸೇವೆಯನ್ನು ಮುಂದುವರಿಸಿಕೊಂಡು ಬರುತ್ತಿದೆ.









