ಸುಳ್ಯ: ಇಲ್ಲಿನ ಕೆಮ್ರಾಜೆಯ ಕೋಡಿಮಜಲು ಎಂಬಲ್ಲಿ ಪತಿಯೇ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ ಘಟನೆ ಜ. 17 ರಾತ್ರಿ ನಡೆದಿದೆ.
ಸುಮಾರು 52 ವರ್ಷದ ಆತ್ಮಹತ್ಯೆ ಮಾಡಿಕೊಂಡ ರಾಮಚಂದ್ರ ಹಾಗೂ ಕೊಲೆಗೀಡಾದ ರಾಮಚಂದ್ರಅವರ ಪತ್ನಿಯನ್ನು ವಿನೋದ (42 ವರ್ಷ) ಎಂದು ಗುರುತಿಸಲಾಗಿದೆ. ಕೊಲೆಗೆ ಕೌಟುಂಬಿಕ ಕಲಹ ಕಾರಣ ಎಂದು ಹೇಳಲಾಗುತ್ತಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.