ಪಂಜಾಬ್‌ನ ಲುಧಿಯಾನದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಇಲ್ಲಿನ ಒಂದು ಪಿಜಿ ಹಾಸ್ಟೆಲ್‌ನ ಹತ್ತಿರದ ಒಳಚರಂಡಿ ಕೊಳಚೆ ನೀರಿನಿಂದ ತುಂಬಿ ಹೋಗಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಳಚರಂಡಿಯನ್ನು ಸ್ವಚ್ಛಗೊಳಿಸಿದಾಗ ಅದರಲ್ಲಿ ರಾಶಿಗಟ್ಟಲೆ ಕಾಂಡೋಮ್ ಸಿಕ್ಕಿವೆ.
ಇದರಿಂದಾಗಿ ಆ ಹಾಸ್ಟೆಲ್‌ನಲ್ಲಿ ವ್ಯಭಿಚಾರ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಲುಧಿಯಾನದ 20ನೇ ವಾರ್ಡ್‌ನಲ್ಲಿರುವ ಸಂಜಯ ಗಾಂಧಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರು ಆ ಪಿಜಿ ಹಾಸ್ಟೆಲ್‌ನ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಹಾಸ್ಟೆಲ್‌ನಲ್ಲಿ ವಾಸಿಸುವ ಯುವಕರು ವ್ಯಭಿಚಾರದಲ್ಲಿ ತೊಡಗಿದ್ದಾರೆ ಮತ್ತು ಪ್ರತಿದಿನ ಹಲವು ಹುಡುಗಿಯರು ಇಲ್ಲಿಗೆ ಬಂದು ಅನೈತಿಕ ಕೆಲಸ ಮಾಡುತ್ತಾರೆ ಎಂದು ದೂರಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಹಲವಾರು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಸ್ಥಳೀಯ ನಿವಾಸಿ ಗುರ್ಮೀಲ್ ಸಿಂಗ್ ಮಾತನಾಡಿ, ಈ ಹಾಸ್ಟೆಲ್‌ನಲ್ಲಿ ಅಶ್ಲೀಲ ಕೆಲಸಗಳು ನಡೆಯುತ್ತಿವೆ. ಇದರಿಂದಾಗಿ ಸ್ಥಳೀಯ ನಿವಾಸಿಗಳಿಗೆ ತಮ್ಮ ಮನೆಯಿಂದ ಹೊರಬರಲು ಕಷ್ಟವಾಗಿದೆ. ಒಳಚರಂಡಿ ತುಂಬಿ ಹೋಗಿರುವುದರಿಂದ ಮನೆಯೊಳಗೆ ಕೂಡ ಸಮಸ್ಯೆಯಾಗಿದೆ ಎಂದು ಹೇಳಿದರು.
ಗುರ್ಮೀಲ್ ಸಿಂಗ್ ಅವರ ಪ್ರಕಾರ, ಒಳಚರಂಡಿ ಆಗಾಗ ತುಂಬಿ ಹೋಗುತ್ತಿದೆ. ಈ ಬಾರಿ ಸ್ವಚ್ಛಗೊಳಿಸಿದಾಗ ಅದರಲ್ಲಿ ನೂರಾರು ಕಾಂಡೋಮ್‌ಗಳು ಸಿಕ್ಕಿವೆ. ಸ್ಥಳೀಯರು, ಪೊಲೀಸರು ಈ ವ್ಯವಹಾರದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ಪ್ರತಿದಿನ ಈ ಸ್ಥಳಕ್ಕೆ ಬಂದು ಹೋಗುತ್ತಾರೆ ಎಂದು ಹೇಳಿದ್ದಾರೆ.
ಇಲ್ಲಿ ವಾಸಿಸುವ ಒಬ್ಬ ಮಹಿಳೆ ಮಾತನಾಡಿ, ಪಿಜಿಯಲ್ಲಿ ವಾಸಿಸುವ ಹುಡುಗರು ರಾತ್ರಿಯಿಡಿ ಗಲಾಟೆ ಮಾಡುತ್ತಾರೆ. ಇದರಿಂದ ಇಲ್ಲಿನ ಶಾಂತಿ ಕೆಡುತ್ತಿದೆ ಎಂದು ಹೇಳಿದ್ದಾರೆ. ಆದರೆ ಪಿಜಿ ಮಾಲೀಕರು ಈ ಸ್ಥಳವನ್ನು ಬಾಡಿಗೆಗೆ ಪಡೆದಿದ್ದೇನೆ ಮತ್ತು ತನ್ನ ಪಿಜಿಯಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.
ಯಾವುದೇ ಅಕ್ರಮ ಚಟುವಟಿಕೆ ನಡೆಯುತ್ತಿದ್ದರೆ ಅದನ್ನು ತಕ್ಷಣವೇ ತೆರವುಗೊಳಿಸುವುದಾಗಿ ಹೇಳಿದ್ದಾರೆ. ಸಮಾಜ ಸೇವಕ ಕಮಲ್, ಪೊಲೀಸರು ಈ ವಿಷಯದಲ್ಲಿ ತಕ್ಷಣ ಹಸ್ತಕ್ಷೇಪ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.