ಪುತ್ತೂರು: ಇಂಡಿಯನ್ ಡೆಂಟಲ್ ಅಸೋಸಿಯೇಷನ್ (ಬಿಡಿಎ) ಇದರ ಪುತ್ತೂರು ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಐಡಿಎ ಭವನ ಪುತ್ತೂರು ಇಲ್ಲಿ ನಡೆಯಿತು. ಜಿಲ್ಲಾ ಗೃಹ ರಕ್ಷಕದಳದ ಗೌರವ ಸಮಾದೇಷ್ಠರಾಗಿ ಕಾರ್ಯನಿರ್ವಹಿಸಿದ್ದ, ಬಾಯಿ ಮತ್ತು ಮುಖ ರೋಗತಜ್ಞ ಡಾ.ಮುರಳೀ ಮೋಹನ್ ಚೂಂತಾರು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ಪುತ್ತೂರು ದಂತ ವೈದ್ಯರ ಶಾಖೆ ಮಾಡುತ್ತಿರುವ ಕಾರ್ಯ ಹಾಗೂ ಸಾಧನೆಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಉಪಸ್ಥಿತರಿದ್ದ ಎಲ್ಲಾದಂತ ವೈದ್ಯರಿಗೂ ಸ್ಮರಣಿಕೆಯನ್ನು ಹಂಚಿದರು ಐಡಿಎ ಪುತ್ತೂರು ಶಾಖೆಯ ನೂತನ ಅಧ್ಯಕ್ಷೆ ಡಾ.ಆಶಾ ರಾಘವೇಂದ್ರ ಅವರಿಗೆ ಡಾ. ರಾಜಾರಾಮ ಕೆ.ಬಿ ಅವರು ಪ್ರಮಾಣ ವಚನ ಬೋಧಿಸಿದರು.

ಸಂಘದ ಕೇಂದ್ರ ಕೌನ್ಸಿಲ್ ಸದಸ್ಯ ಡಾ. ರಾಘವೇಂದ್ರ ಪಿದಮಲೆ, ಸಂಘದ ಕೋಶಾಧಿಕಾರಿ ಡಾ. ಚರಣ್ ಕಜೆ, ಪದಾಧಿಕಾರಿಗಳಾದ ಡಾ. ಎಲ್. ಕೃಷ್ಣ ಪ್ರಸಾದ್, ಡಾ. ಶ್ರೀ ಕೃಷ್ಣ ಭಟ್, ಡಾ. ಶ್ರೀ ಪ್ರಕಾಶ್ ಭಟ್, ಡಾ. ವಿಶು ಕುಮಾರ್, ಡಾ.ಮುರಳೀಧರ್ ರೈ, ಡಾ. ಶಿವಾನಂದ ಹೆಚ್, ಡಾ.ಮುರಳೀಧರ್ ಭಟ್, ಡಾ. ರಿತೇಶ್ ಕೆ.ಬಿ, ಡಾ.ಶೃತಿ ಹೆಗ್ಡೆ,ಡಾ. ವಾಣಿರಿತೇಶ್ ಡಾ. ಆಶಾ ಜಿ.ಕೆ, ಡಾ. ಗಣೇಶ್ ಚಿಂತನ್, ಡಾ. ಹರ್ಷ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿಕಟಪೂರ್ವಾಧ್ಯಕ್ಷೆ ಡಾ. ಆಶಾ ಅಮಾನ್ ಕಲ್ಲು ಸ್ವಾಗತಿಸಿ, ಕಾರ್ಯದರ್ಶಿ ಡಾ. ಕೀರ್ತನ್ ಕಜೆ ವಂದಿಸಿದರು. ಡಾ. ದೀಪಾಲಿ ಡೋಂಗ್ರೆ ಡಾ.ರಮ್ಯಾ ಕಜೆ ಹಾಗೂ ಡಾ. ಅಮೃತ ಪ್ರಸಾದ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಐಡಿಎ ಸದಸ್ಯರು ಮತ್ತು ಸದಸ್ಯರ ಕುಟುಂಬ, ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *

Join WhatsApp Group
error: Content is protected !!