ಜಿಲ್ಲೆಯಾದ್ಯಂತ ಮೈಕ್ರೊ ಫೈನಾನ್ಸ್‌ ಹೆಸರಿನಲ್ಲಿ ಅಕ್ರಮವಾಗಿ ಕಿರುಸಾಲ, ಬಡ್ಡಿ ವ್ಯವಹಾರ (ಲೇವಾದೇವಿ) ನಡೆಸುತ್ತಿದ್ದ 104 ವ್ಯಕ್ತಿಗಳ ಮನೆ ಮತ್ತು ಕಚೇರಿ ಮೇಲೆ ಜಿಲ್ಲಾ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿ ವೇಳೆ 37 ಜನರ ಬಳಿ ಅನಧಿಕೃತ ಲೇವಾದೇವಿಗೆ ಸಂಬಂಧಿಸಿದ ನಗದು ಹಣ, ಖಾಲಿ ಬಾಂಡ್, ಚೆಕ್, ಕೈಗಡ ಪತ್ರ, ಪಹಣಿ ಪತ್ರ ಮತ್ತು ಬ್ಯಾಂಕ್ ಪಾಸ್‌ಬುಕ್‌ಗಳು ಸೇರಿ ಇತರೆ ದಾಖಲೆಪತ್ರಗಳು ಸಿಕ್ಕಿವೆ.

₹62.29 ಲಕ್ಷ ನಗದು, 55 ಗ್ರಾಂ ಚಿನ್ನಾಭರಣ, 489 ಖಾಲಿ ಬಾಂಡ್, 285 ಖಾಲಿ ಚೆಕ್, 95 ಪಾಸ್‌ಬುಕ್, 26 ಕರಾರು ಪತ್ರ ಮತ್ತು 245 ಇತರೆ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲವನ್ನೂ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿ, ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!