Author: Vidyamaana

ಗುರುಪ್ರಸಾದ್‌ರ ಅಕಾಲಿಕ ನಿಧನ: ಮಿಲಾದ್‌ ಕಾರ್ಯಕ್ರಮ ಮುಂದೂಡಿ ಸೌಹಾರ್ದತೆ ಮೆರೆದ ಮಸೀದಿ ಆಡಳಿತ..!!

ರಾಮಕುಂಜ: ಕೊಯಿಲ ಗ್ರಾಮದ ಕುದುಲೂರು ನಿವಾಸಿ, ರಿಕ್ಷಾ ಚಾಲಕ ಗುರುಪ್ರಸಾದ್‌ (35) ಅವರು ಆ.22ರಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.ಗೋಳಿತ್ತಡಿ ಪೇಟೆಯಲ್ಲಿ ರಿಕ್ಷಾ ಓಡಿಸುತ್ತಿದ್ದ ಗುರುಪ್ರಸಾದ್‌, ಸಬಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಪ್ರತಿದಿನ ರಿಕ್ಷಾದಲ್ಲಿ ಮನೆಗೆ ಕರೆದೊಯ್ಯುತ್ತಿದ್ದರು. ಆ.22ರಂದು ಶಾಲೆಗೆ…

9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಬಂಧನ

ಬಂಟ್ವಾಳ: ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 9 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಪೊಲೀಸರು ಚಿಕ್ಕಮಗಳೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಪುಂಜಾಲಕಟ್ಟೆ ಠಾಣಾ ಅ.ಕ್ರ. 156/2016ರಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 379 ಹಾಗೂ…

ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ: ಪ್ರಮುಖ ಆರೋಪಿ ಚೇತನ್‌ಗೆ ಹೈಕೋರ್ಟ್ ಜಾಮೀನು..!!

ಪುತ್ತೂರು: ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕೃಷ್ಣನಗರದ ಚೇತನ್‌ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.2023ರ ನ.6ರಂದು ರಾತ್ರಿ ನೆಹರುನಗರದಲ್ಲಿ ಅಕ್ಷಯ್ ಕಲ್ಲೇಗ ಅವರನ್ನು ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕೃಷ್ಣನಗರದ ಚೇತನ್, ಪಡೀಲು…

10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ಆರೋಪಿ ಅರೆಸ್ಟ್

ಮಂಗಳೂರು: ಸುಮಾರು 10 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ಪ್ರಕರಣದ ಆರೋಪಿಯನ್ನು ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.ಕುದ್ರೋಳಿ ಕರ್ಬಲ ರಸ್ತೆಯ ಇಂಪೀರಿಯಲ್ ಹೋಟೆಲ್ ನಿವಾಸಿ ಹೈದರ್ ಅವರ ಪುತ್ರ ನೌಫಾಲ್ (34) ಬಂಧಿತ ಆರೋಪಿಯಾಗಿದ್ದಾನೆ.ಮಂಗಳೂರು ದಕ್ಷಿಣ…

ಸತ್ಯಶಂಕರ್‌ಗೆ ‘ಸಾಧನಾ ಶ್ರೀ’ ಪ್ರಶಸ್ತಿ ಪ್ರದಾನ..!!:ಆ.23ರಂದು ಮಡಂತ್ಯಾರಿನಲ್ಲಿ ನಡೆಯುವ ‘ಮೃದಿನಿ ವ್ಯವಹಾರ ಸಮ್ಮೇಳನ’ದಲ್ಲಿ ಗೌರವ..!!

ಪುತ್ತೂರು: ಜೆಸಿಐ ವಲಯ 15ರ ‘ಸಾಧನಾ ಶ್ರೀ’ ಪ್ರಶಸ್ತಿಗೆ ಪುತ್ತೂರು ಜೆಸಿಐ ಸದಸ್ಯ ಹಾಗೂ ಟಿವಿ ಕ್ಲಿನಿಕ್ ಮಾಲೀಕ ಸತ್ಯಶಂಕರ್ ಆಯ್ಕೆಯಾಗಿದ್ದಾರೆ.ಮಡಂತ್ಯಾರಿನ ಕಲಾ ಸಭಾಂಗಣದಲ್ಲಿ ಆ. 23ರಂದು ನಡೆಯಲಿರುವ ‘ಮೃದಿನಿ ವ್ಯವಹಾರ ಸಮ್ಮೇಳನ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಐಟಿಸಿ ಡಿಪ್ಲೊಮಾ ವ್ಯಾಸಂಗದ ಬಳಿಕ…

ದರ್ಬೆ ಗಲಾಟೆ: ಪೊಲೀಸ್ ಸಿಬ್ಬಂದಿ ಮದ್ಯಪಾನ ಮಾಡಿರಲಿಲ್ಲ-ಆಲ್ಕೋಮೀಟರ್ ಪರೀಕ್ಷೆಯಲ್ಲಿ ದೃಢ:ದೂರು-ಪ್ರತಿದೂರುಗಳ ತನಿಖೆ ಮುಂದುವರಿಕೆ; ಮಾಹಿತಿ, ದಾಖಲೆಗಳಿದ್ದರೆ ಠಾಣಾಧಿಕಾರಿಗಳನ್ನು ಸಂಪರ್ಕಿಸಲು ಮನವಿ..!!

ಪುತ್ತೂರು: ದರ್ಬೆಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಘಟನಾ ಸ್ಥಳದಲ್ಲಿ ಲಾಠಿಚಾರ್ಜ್ ನಡೆಸಿದ್ದ ಕಾನ್‌ಸ್ಟೆಬಲ್‌ವೊಬ್ಬರು, ದೂರುದಾರರು ಹಾಗೂ ಪ್ರತಿದೂರುದಾರರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆ ಬಳಿ ಕರ್ತವ್ಯದಲ್ಲಿದ್ದ ವೇಳೆ ಮದ್ಯಪಾನ ಮಾಡಿರುವುದಾಗಿ ಕೆಲವರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಆಲ್ಕೋಮೀಟರ್ ಪರೀಕ್ಷೆಗೆ ಒಳಪಡಿಸಲಾಗಿದ್ದು,…

ಪುತ್ತೂರು ಗಲಾಟೆ ಪ್ರಕರಣ:ಗಾಯಾಳುವನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಶಾಸಕ ಅಶೋಕ್ ರೈ

ಪುತ್ತೂರು: ದರ್ಬೆಯಲ್ಲಿ ನಿನ್ನೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಗಾಯಗೊಂಡು ಪುತ್ತೂರಿನ ಮೆಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುವನ್ನು ಶಾಸಕ ಅಶೋಕ್ ರೈ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.ಬಳಿಕ ಘಟನೆಯ ಕುರಿತು ಗಾಯಾಳುವಿನಿಂದ ಮಾಹಿತಿ ಪಡೆದುಕೊಂಡ ಶಾಸಕ ಅಶೋಕ್ ರೈ ಅವರು,…

ಕೋವಿ ಪರವಾನಗಿ ನವೀಕರಣ ಸರಳೀಕರಿಸಿ; ಇಲ್ಲವಾದರೆ ಉಗ್ರ ಹೋರಾಟ: ಕಿಶೋರ್ ಕುಮಾರ್..!!

ಪುತ್ತೂರುಪುತ್ತೂರು:ಕಾಡುಪ್ರಾಣಿಗಳಿಂದ ಕೃಷಿ ಹಾಗೂ ಜೀವ ರಕ್ಷಿಸಿಕೊಳ್ಳಲು ರೈತರು ಹೊಂದಿರುವ ಕೋವಿ (ಬಂದೂಕು) ಪರವಾನಗಿ ನವೀಕರಣದಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಕಿರುಕುಳ ನೀಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪಿಸಿದ್ದಾರೆ.ಕೋವಿ ಪರವಾನಗಿ ನವೀಕರಣದ ವಿಳಂಬ ಕುರಿತು ವಿಧಾನ…

ಪುತ್ತೂರು ಗಲಾಟೆ ಪ್ರಕರಣ-ಚಿಕ್ಕಮುಡ್ನೂರು ಯುವಕನ ವಿರುದ್ಧ ಸ್ವಯಂಪ್ರೇರಿತ ಪ್ರಕರಣ; ವಿಡಿಯೋ ಪರಿಶೀಲಿಸಿ ಕ್ರಮ..!!

ಪುತ್ತೂರು: ಆ.21ರಂದು ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಚಿಕ್ಕಮುಡ್ನೂರು ನಿವಾಸಿ ಮಹಮ್ಮದ್ ನೌಶಾದ್ (30) ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ.ಮಹಮ್ಮದ್ ನೌಶಾದ್ ವಿರುದ್ಧ ಈ ಹಿಂದೆ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ. 79/2024ರಂತೆ ಭಾರತೀಯ…

ದರ್ಬೆ ಜೆರಾಕ್ಸ್ ಅಂಗಡಿ ಮಾಲಕಿ ಮೇಲಿನ ಗುಂಪು ಹಲ್ಲೆ ಖಂಡನೀಯ,ಕಠಿಣ ಕ್ರಮಕ್ಕೆ ಆಗ್ರಹ: ಅರುಣ್ ಪುತ್ತಿಲ

ಪುತ್ತೂರು: ದರ್ಬೆಯಲ್ಲಿ ಜೆರಾಕ್ಸ್ ಅಂಗಡಿಯಲ್ಲಿ ನಡೆದ ಪ್ರಮಾದಕ್ಕೆ ಸಂಬಂಧಿಸಿ ಅಂಗಡಿ ಮಾಲಕಿ ಅಂಜನಾ ಪೈ ಅವರ ಮೇಲೆ ನಡೆದ ಗುಂಪು ಹಲ್ಲೆ ಖಂಡನೀಯ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹೇಳಿದರು.ಗುಂಪು ಹಲ್ಲೆಯಿಂದ ಅಂಜನಾ ಪೈ…

Join WhatsApp Group
error: Content is protected !!