ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರು ಗದ್ದೆಯಲ್ಲಿ ಡಿ. 8ರಂದು ಪುತ್ತೂರು ದೀಪೋತ್ಸವ ಸಮಿತಿ (ರಿ.) ಪುತ್ತೂರು ವತಿಯಿಂದ ಪುತ್ತೂರು ದೀಪೋತ್ಸವ ನಡೆಯಲಿದೆ.
ಈ ಪ್ರಯುಕ್ತ ಸಮಸ್ತ ಹಿಂದೂ ಬಾಂಧವರ ಸಹಭಾಗಿತ್ವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ದೀಪೋತ್ಸವದ ಪ್ರಚಾರಾರ್ಥ ನ. 30ರಂದು ಸೋಮವಾರ ಬೆಳಗ್ಗೆ 9.30ರಿಂದ ಪ್ರಚಾರ ರಥಯಾತ್ರೆ ನಡೆಯಲಿದೆ. ಧ್ವಜ ಹಸ್ತಾಂತರದೊಂದಿಗೆ ರಥಯಾತ್ರೆಗೆ ಬೆಂಗಳೂರು ಉದ್ಯಮಿ ಶ್ರೀ ಕಿರಣ್ ಚಂದ್ರ ಪುಷ್ಪಗಿರಿ ಚಾಲನೆ ನೀಡಲಿದ್ದಾರೆ.ಕಾರ್ಯಕ್ರಮದಲ್ಲಿ ದಕ್ಷ ಕನ್ಸ್ಟ್ರಕ್ಷನ್ಸ್‌ನ ಶ್ರೀ ರವೀಂದ್ರ ಪಿ., ಬೆಳ್ಳಾರೆಯ ಉದ್ಯಮಿ ಶ್ರೀ ಮಿಥುನ್ ಶೆಣೈ, ಮಂಗಳೂರಿನ ಉದ್ಯಮಿ ಶ್ರೀ ರಾಮ ಮುಗೇರೋಡಿ, ಪಡುಮಲೆ ಶ್ರೀ ಕೂವೆ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀ ಶ್ರೀನಿವಾಸ್ ಭಟ್ ಚಂದುಕುಡ್ಲು ಹಾಗೂ ಎಸ್‌ಕೆಡಿಆರ್‌ಡಿಪಿಯ ಯೋಜನಾಧಿಕಾರಿ ಶ್ರೀ ಶಶಿಧರ್ ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಡಿ. 8ರಂದು ಮಂಗಳವಾರ ಬೆಳಗ್ಗಿನಿಂದ ದಿನಪೂರ್ತಿ ನಡೆಯುವ ಪುತ್ತೂರು ದೀಪೋತ್ಸವದಲ್ಲಿ ಸಮಸ್ತ ಭಕ್ತಾದಿಗಳು ಭಾಗವಹಿಸಿ ಮಹಾಲಿಂಗೇಶ್ವರ ದೇವರ ಕೃಪೆಗೆ ಪಾತ್ರರಾಗುವಂತೆ ಸಮಿತಿ ಮನವಿ ಮಾಡಿದೆ.ಪುತ್ತೂರು ದೀಪೋತ್ಸವ ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು, ಉಪಾಧ್ಯಕ್ಷರು, ಸಂಚಾಲಕರು, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ, ಸಹ ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು, ಸ್ವಾಗತ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಮಂತ್ರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!