ಅನಾಮಿಕ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ 200 ಕೋಟಿ ರೂ. ಮೌಲ್ಯದ ಖಾಸಗಿ ಜೆಟ್ ವಿಮಾನವೊಂದನ್ನು ಖರೀದಿಸಿ ಈಗ ಸುದ್ದಿಯಾಗಿದ್ದಾರೆ. ಅಲ್ಲದೇ ದೇಶದ ಸಿರಿವಂತ ವ್ಯಕ್ತಿಗಳ ಪೈಕಿ ಒಬ್ಬರಾಗಿರುವ ಅನಿಲ್ ಅಂಬಾನಿ ಸೇರಿದಂತೆ ಹಲವು ಪ್ರತಿಷ್ಠಿತ ಗಣ್ಯರ ಪುರೋಹಿತರೆಂದೇ ಪ್ರಸಿದ್ಧರಾಗಿರುವ ಪಂಡಿತ್ ಚಂದ್ರಶೇಖರ್ ಶರ್ಮಾ ಅವರ ಕೈಲಿ ಪೂಜೆ ಮಾಡಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಕುಳಿತು ಗಲ್ಫ್ ಸ್ಟ್ರೀಮ್ ಜಿ 280 ಮಾಡೆಲ್ ನ ಜೆಟ್ ವಿಮಾನಕ್ಕೆ ಪೂಜಿಸುತ್ತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲೆಡೆ ವೈರಲ್ ಆಗಿದೆ.
ವಿಮಾನವು ಯುಎಸ್ ನ ಕ್ಯಾಲಿಫೋರ್ನಿಯಾ ಮೂಲದ ಎಂಪೈರ್ ಏವಿಯೇಷನ್ ಹೆಸರಿನಲ್ಲಿ ನೋಂದಣಿಯಾಗಿದೆ. ಆದರೆ ಇದನ್ನು ಖರೀದಿಸಿರುವ ವ್ಯಕ್ತಿ ಯಾರು, ಈತನಿಗೂ ಬೆಂಗಳೂರಿಗೂ ಇರುವ ನಂಟೇನು ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.














