ಬ ಹುತೇಕರು ಹೋಟೆಲ್ ಒಳಗೆ ಎಂಟ್ರಿ ಕೊಟ್ಟಾಗ ಅಥವಾ ಹೊರಗಿನ ಬೋರ್ಡ್‌ನಲ್ಲಿ ಇಲ್ಲಿನ ಮೆನು ಏನಿರಬಹುದು ಎಂದು ನೋಡಿ ಊಟಕ್ಕೆ ಅಥವಾ ತಿಂಡಿಗೆ ಕೂರುತ್ತಾರೆ. ಆದರೆ ರೆಡ್ಡಿಟ್‌ನಲ್ಲಿ ಒಂದು ಪೋಸ್ಟ್ ವೈರಲ್ ಆಗಿದೆ. ಅದನ್ನು ನೋಡಿದ ನಂತ್ರ ನೀವು ತಿನ್ನಬೇಕೋ ಬೇಡ್ವೋ ಎಂದು ಸಾವಿರ ಬಾರಿ ಯೋಚಿಸುತ್ತೀರಿ.
ಯಾಕೆ ಅಂಥದ್ದು ಅದರಲ್ಲೇನಿದೆ ಎಂದು ನೀವಂದು ಅಂದುಕೊಳ್ಳಬಹುದು. ಅಲ್ಲೇ ಇರುವುದು ಟ್ವಿಸ್ಟ್.
ಇತ್ತೀಚೆಗೆ ಒಂದು ಹೋಟೆಲ್‌ನ ಮೆನು ಬೋರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ಮೆನು ವಿಶೇಷವಾಗಿರುವುದು ಆಹಾರಕ್ಕಾಗಿ ಅಲ್ಲ, ಬದಲಾಗಿ ಉಪಯೋಗಿಸಿದ ತಪ್ಪು ಕನ್ನಡ ಪದಗಳಿಂದ. ಒಂದಲ್ಲ, ಎರಡಲ್ಲ, ಅಲ್ಲಿರುವ ಎಲ್ಲಾ ಪದಗಳನ್ನು ತಪ್ಪಾಗಿ ಉಚ್ಛರಿಸಿದ್ದು, ಕನ್ನಡ ಬರೆಯುವ ವಿಧಾನದಲ್ಲೂ ಅಪಾರ ದೋಷಗಳು ಕಂಡುಬಂದಿವೆ.
ಪಾಪ ಅಲ್ಲಿನ ಶೆಫ್‌ಗಳು ಒಂದು ವೇಳೆ ಅಡುಗೆ ಚೆನ್ನಾಗಿ ಮಾಡಿದ್ದರೂ ಮೆನು ಬೋರ್ಡ್ ನೋಡಿದವ ತಿನ್ನಲು ಹಿಂದೇಟು ಹಾಕಿದರೂ ಅಡ್ಡಿಯೇನಿಲ್ಲ ಬಿಡಿ. ಯಾಕೆ ಅಂತೀರಾ?, ಸದ್ಯ ವೈರಲ್ ಆಗಿರುವ ಪೋಸ್ಟ್‌ನ ಬೋರ್ಡ್ ನೋಡಿದರೆ ನೀವು ಹಾಗೆ ಅನ್ನುತ್ತೀರಿ. ಹಾಗಾದರೆ ಬೋರ್ಡ್ ಮೇಲೆ ಏನು ಬರೆಯಲಾಗಿದೆ ಎಂದು ನೋಡುವುದಾದರೆ…ಕುಚ್ಚಾ, ಪನೀರ್ ತಿಕಾ, ಹಣಬೆ ತಿಕಾ, ತಂದೂರಿ ಚಕ್ಕನ್, ಫಿಶ್ ತಿಕಾ, ದೌಲಾ ಮಕ್ಕನಿ, ಬಟರೌ ಚಿಕ್ಕನ್, ಮಟನ್, ಕೂಲಾ ಡಿಕ್ಸ್, ಹಲವ ಎಂದು ಕನ್ನಡದಲ್ಲಿ ಬರೆಯಲಾಗಿದೆ.














