ಇಸ್ರೇಲ್- ಅಮೆರಿಕ ಇರಾನ್‌ ಮೇಲೆ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ ನ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಮೃತಪಟ್ಟಿದ್ದಾರೆ ಎಂದು ಇರಾನ್ ಸರಕಾರಿ ಮಾಧ್ಯಮ ದೃಢಪಡಿಸಿದೆ ಎಂದು Al Jazeera ವರದಿ ಮಾಡಿದೆ.

ದಾಳಿಯಲ್ಲಿ ಆಯತುಲ್ಲಾ ಅಲಿ ಖಾಮಿನೈ ಪುತ್ರಿ, ಅಳಿಯ ಮತ್ತು ಮೊಮ್ಮಗ ಕೂಡ ಮೃತಪಟ್ಟಿದ್ದಾರೆ ಎಂದು ಇರಾನ್ ಸರಕಾರಿ ಮಾಧ್ಯಮಗಳು ತಿಳಿಸಿವೆ.

ಶನಿವಾರ ಬೆಳಗಿನ ಜಾವ ಖಾಮಿನೈ ಅವರು ತಮ್ಮ ಕಚೇರಿಯಲ್ಲಿ “ತಮ್ಮ ನಿಯೋಜಿತ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾಗ” ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ.

ಖಾಮಿನೈಯವರ ಹತ್ಯೆಯ ಹಿನ್ನೆಲೆಯಲ್ಲಿ ಇರಾನ್ ಸರಕಾರ 40 ದಿನಗಳ ಸಾರ್ವಜನಿಕ ಶೋಕಾಚರಣೆಯನ್ನು ಘೋಷಿಸಿದೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದಲ್ಲದೆ ದಕ್ಷಿಣ ಇರಾನ್‍ನ ಶಾಲೆಯ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 108 ಮಂದಿ ಮೃತಪಟ್ಟಿದ್ದು, 24 ಪ್ರಾಂತ್ಯಗಳಲ್ಲಿ ಒಟ್ಟು 201 ಮಂದಿ ಮೃತಪಟ್ಟಿದ್ದಾರೆ ಎಂದು ಇರಾನ್ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!