ಪುತ್ತೂರು: 2024–25ನೇ ಶೈಕ್ಷಣಿಕ ವರ್ಷದ ಮಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿಗಳು ನಾಲ್ಕು ರ್ಯಾಂಕ್‌ಗಳನ್ನು ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ.
ಬಿಎಸ್ಸಿ ವಿಭಾಗದಲ್ಲಿ ಕುಮಾರಿ ಶ್ರೀದೇವಿ ಎನ್. (ನಾರಾಯಣ ಎ.ಕೆ. ಹಾಗೂ ಶೈಲಾಶ್ರೀ ಅಜಿರಂಗಲ್ ದಂಪತಿ ಪುತ್ರಿ) ಅವರು 4065 ಅಂಕಗಳು, 9.89 ಸಿಜಿಪಿಎ ಹಾಗೂ 97.95 ಶೇಕಡಾ ಅಂಕಗಳನ್ನು ಪಡೆದು ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
ಅದೇ ವಿಭಾಗದಲ್ಲಿ ಕುಮಾರಿ ಆಯಷತ್ ಶಮಾ ಎ. (ಅಬ್ದುಲ್ ರಹಿಮಾನ ವಿ. ಹಾಗೂ ಜೈನಬ ಬಡಕೋಡಿ ದಂಪತಿ ಪುತ್ರಿ) ಅವರು 4036 ಅಂಕಗಳು, 9.87 ಸಿಜಿಪಿಎ ಹಾಗೂ 97.35 ಶೇಕಡಾ ಅಂಕಗಳನ್ನು ಪಡೆದು ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ.
ಬಿ.ಎ ವಿಭಾಗದಲ್ಲಿ ಮಾದ್ರಿ ಅರ್ಚನಾ ಅವರು 4186 ಅಂಕಗಳು, 9.49 ಸಿಜಿಪಿಎ ಹಾಗೂ 92 ಶೇಕಡಾ ಅಂಕಗಳನ್ನು ಪಡೆದು ಎಂಟನೇ ರ್ಯಾಂಕ್ ಗಳಿಸಿದ್ದಾರೆ.
ಬಿ.ಬಿ.ಎ ವಿಭಾಗದಲ್ಲಿ ಕುಮಾರಿ ಶೈರಿನ್ ಬಾನು (ದಿ. ಸಬ್ಬಾನ್ ಸಾಹೇಬ್ ಹಾಗೂ ಶಹಿದಾ ನೆಲ್ಲಿಕಟ್ಟೆ ದಂಪತಿ ಪುತ್ರಿ) ಅವರು 3855 ಅಂಕಗಳು, 9.56 ಸಿಜಿಪಿಎ ಹಾಗೂ 92.89 ಶೇಕಡಾ ಅಂಕಗಳನ್ನು ಪಡೆದು ಹತ್ತನೇ ರ್ಯಾಂಕ್ ಪಡೆದಿದ್ದಾರೆ.
ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಆ್ಯಂಟನಿ ಪ್ರಕಾಶ್ ಮೊಂತೆರೋ, ವಿದ್ಯಾರ್ಥಿಗಳ ಪರಿಶ್ರಮ, ಶಿಸ್ತು ಹಾಗೂ ಉಪನ್ಯಾಸಕರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದರು. ವಿಶ್ವವಿದ್ಯಾಲಯ ಮಟ್ಟದಲ್ಲಿ ನಾಲ್ಕು ರ್ಯಾಂಕ್‌ಗಳನ್ನು ಗಳಿಸಿರುವುದು ಕಾಲೇಜಿಗೆ ಅಪಾರ ಹೆಮ್ಮೆಯ ಸಂಗತಿ ಎಂದು ಅವರು ತಿಳಿಸಿದ್ದಾರೆ.
ಕ್ಯಾಥೋಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ವಂದನೀಯ ಪ್ರವೀಣ್ ಲಸ್ರಾದೋ, ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಕಾಲೇಜಿನ ಸಂಚಾಲಕರಾದ ಅತಿ ವಂ. ಲಾರೆನ್ಸ್ ಮಸ್ಕರೇನಸ್, ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ಸಾಧಕರಿಗೆ ಅಭಿನಂದನೆ ಸಲ್ಲಿಸಿ, ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!