ಪುತ್ತೂರು : ಇಲ್ಲಿನ ದರ್ಬೆಯಲ್ಲಿರುವ ಏಷಿಯನ್ ವುಡ್ & ನ್ಯೂ ಮಂಗಳೂರು ಎಲೆಕ್ಟ್ರಾನಿಕ್ಸ್ ಮಳಿಗೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಡ್ಯೂ ರೋಪ್ಲೆಕ್ಸ್ ಟಾಪ್ ಡೀಲರ್ ಅವಾರ್ಡ್ ಸತತ 6ನೇ ಬಾರಿಗೆ ಲಭಿಸಿದೆ.ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಡ್ಯೂ ರೋಪ್ಲೆಕ್ಸ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಮ್ಯಾಥ್ಯೂ ಹ್ಯಾಂಡಿ ಅವರು ಏಷಿಯನ್ ವುಡ್‌ನ ಮಾಲೀಕರಾದ ಇಸ್ಮಾಯಿಲ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.ಸತತ ಆರನೇ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ಸಂಸ್ಥೆಯ ಗ್ರಾಹಕ ಸೇವೆ ಹಾಗೂ ಮಾರಾಟ ಕ್ಷೇತ್ರದಲ್ಲಿನ ಸಾಧನೆಗೆ ಸಂದ ಗೌರವವಾಗಿದೆ













