ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆಯುತ್ತಿರುವ 92ನೇ ವರ್ಷದ ನವರಾತ್ರಿ ಉತ್ಸವದ ಅಂಗವಾಗಿ, ‘ಪುತ್ತೂರು ದಸರಾ’ ಹೆಸರಿನಲ್ಲಿ ಅ.21ರಂದು ನಡೆಯಲಿರುವ ಶೋಭಾಯಾತ್ರೆಯ ಕುರಿತು ಇನ್‌ಸ್ಟಾಗ್ರಾಂ ರೀಲ್ಸ್ ಸ್ಪರ್ಧೆ ಆಯೋಜಿಸಲಾಗಿದೆ.ಪುತ್ತೂರು ಶಾರದಾ ಮಾತೆಯ ಭವ್ಯತೆ ಹಾಗೂ ದಸರಾ ಉತ್ಸವದ ವೈಭವವನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಶೋಭಾಯಾತ್ರೆಯ ಉದ್ಘಾಟನೆಯಿಂದ ದೇವಿಯ ವಿಗ್ರಹದ ಜಲಸ್ಥಂಭನದವರೆಗಿನ ವಿಶೇಷ ಕ್ಷಣಗಳನ್ನು ಸೆರೆಹಿಡಿದು ರೀಲ್ಸ್ ರೂಪದಲ್ಲಿ ಪ್ರಸ್ತುತಪಡಿಸಬಹುದಾಗಿದೆ.ಸ್ಪರ್ಧೆಯ ನಿಬಂಧನೆಗಳು: ರೀಲ್ಸ್‌ನಲ್ಲಿ ಪುತ್ತೂರು ಶಾರದಾ ಮಾತೆಗೆ ಸಂಬಂಧಿಸಿದ ಅತ್ಯುತ್ತಮ ಛಾಯಾಚಿತ್ರಗಳು ಮತ್ತು ದೃಶ್ಯಗಳಿರಬೇಕು. ದೈವಿಕ ಸಂಗೀತ ಹಾಗೂ ಉತ್ತಮ ಎಡಿಟಿಂಗ್‌ಗೆ ಆದ್ಯತೆ ನೀಡಲಾಗುತ್ತದೆ. ಪುತ್ತೂರು ದಸರಾ ಅಧಿಕೃತ ಲೋಗೋ ಬಳಸುವುದು ಕಡ್ಡಾಯವಾಗಿದ್ದು, ರೀಲ್ಸ್‌ನ ಅವಧಿ ಒಂದು ನಿಮಿಷಕ್ಕಿಂತ ಕಡಿಮೆ ಇರಬೇಕು. ಅಪ್‌ಲೋಡ್ ಮಾಡಿದ ವೀಡಿಯೋವನ್ನು ‘ಪುತ್ತೂರು ದಸರಾ’ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಗೆ ಟ್ಯಾಗ್ ಮಾಡಿ, ಕೊಲ್ಯಾಬ್ ಮಾಡಬೇಕು. ವೀಡಿಯೋ ಅಪ್‌ಲೋಡ್ ಮಾಡಲು ಅ.24 ಕೊನೆಯ ದಿನವಾಗಿದೆ.ವೀಕ್ಷಣೆಗಳ ಸಂಖ್ಯೆಯ ಆಧಾರದಲ್ಲಿ ವಿಜೇತರನ್ನು ಆಯ್ಕೆ ಮಾಡದೆ, ತೀರ್ಪುಗಾರರ ಮೂಲಕ ವೀಡಿಯೋಗಳ ವಿಷಯ, ಗುಣಮಟ್ಟ ಮತ್ತು ಪ್ರಸ್ತುತಿಯನ್ನು ಪರಿಗಣಿಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ.ಸ್ಪರ್ಧೆಯ ಪ್ರಥಮ ಬಹುಮಾನವಾಗಿ ₹10,000, ದ್ವಿತೀಯ ಬಹುಮಾನವಾಗಿ ₹6,000 ಹಾಗೂ ತೃತೀಯ ಬಹುಮಾನವಾಗಿ ₹4,000 ನೀಡಲಾಗುವುದು ಎಂದು ಶ್ರೀ ಶಾರದಾ ಭಜನಾ ಮಂದಿರದ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!