ವರದಿ: ನಿಝಾರ್ ಅಜ್ಜಿಕಟ್ಟೆ:
ಪುತ್ತೂರು: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕುರಿಯದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಸ್ಮೃತಿ ಪ್ರಶಾಂತ್ ನಾಯಕ್ ಅವರು 42 ಇಂಚಿನ ಎಲ್‌ಇಡಿ ಟಿವಿಯನ್ನು ಕೊಡುಗೆಯಾಗಿ ನೀಡಿದರು.
ಡಿಂಬ್ರಿ ಗುತ್ತು ಸರ್ವಾಣಿ ಮತ್ತು ಮುತ್ತಣ್ಣ ಶೆಟ್ಟಿ ಅವರ ಪುತ್ರಿಯಾದ ಸ್ಮೃತಿ ಪ್ರಶಾಂತ್ ನಾಯಕ್ ಅವರು ನೀಡಿದ ಟಿವಿಯನ್ನು ಶಾಲಾ ಹಿತೈಷಿ ಬಳಗದ ಅಧ್ಯಕ್ಷ ಶಿವರಾಮ ಆಳ್ವ ಬಲ್ಲಮಜಲು ಹಾಗೂ ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ ಅವರ ಉಪಸ್ಥಿತಿಯಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಕುರಿಯ ಮತ್ತು ಮುಖ್ಯ ಶಿಕ್ಷಕಿ ಪೆಲಿಸ್ಟ ಡಿ. ಕುನ್ನ ಅವರಿಗೆ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಸಂತೋಷ್ ರೈ ಉಪಸ್ಥಿತರಿದ್ದರು.









