ಪುತ್ತೂರು: ಪುತ್ತೂರು ದಸರಾ ಪ್ರಯುಕ್ತ ಅ.21ರಂದು ಸಂಜೆ 5ರಿಂದ ರಾತ್ರಿ 10ರವರೆಗೆ ಪುತ್ತೂರು ಪೇಟೆಯಲ್ಲಿ ಶೋಭಾಯಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಪುತ್ತೂರು ಸಂಚಾರ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.ಶೋಭಾಯಾತ್ರೆಯ ಸಂದರ್ಭದಲ್ಲಿ ವಾಹನಗಳ ಸುಗಮ ಸಂಚಾರ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಸಾರ್ವಜನಿಕರು ಪುತ್ತೂರು ಪೇಟೆಯ ಒಳಭಾಗದ ರಸ್ತೆಗಳನ್ನು ಬಳಸದೆ, ಅಶ್ವಿನಿ ಸರ್ಕಲ್, ಪರ್ಲಡ್ಕ ಹಾಗೂ ಲಿನೇಟ್ ಜಂಕ್ಷನ್ ಮೂಲಕ ಹಾದುಹೋಗುವ ಹೆದ್ದಾರಿ ರಸ್ತೆಯನ್ನು ಬಳಸುವಂತೆ ಸೂಚಿಸಲಾಗಿದೆ.ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನ ಸವಾರರು ಪಡೀಲ್ ಜಂಕ್ಷನ್ ಮೂಲಕ ಹಾಗೂ ಪುತ್ತೂರು ಪೇಟೆಯ ಕಡೆಗೆ ಬರುವವರು ಕೊಟೆಚ ಕ್ರಾಸ್ ಮೂಲಕ ಸಂಚರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!