ನವದೆಹಲಿ: ಸೌರ ವಿದ್ಯುತ್ ಗುತ್ತಿಗೆಗೆ ಸಂಬಂಧಿಸಿದಂತೆ ಬಹುಕೋಟಿ ಡಾಲರ್ ಲಂಚ ಮತ್ತು ವಂಚನೆ ಕೇಸ್ನಲ್ಲಿ ಭಾರತದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ವಿರುದ್ಧ ಯುಎಸ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಇದೀಗ ಷೇರುಪೇಟೆಯಲ್ಲಿ ಅದಾನಿ ಷೇರುಗಳು (Adani Shares) ಶೇ.20ರಷ್ಟು ದಿಢೀರ್ ಕುಸಿತ ಕಂಡಿದೆ.
ಶೇ. 20 ರಷ್ಟು!ಅದಾನಿ ಸ್ಟಾಕ್‌ಗಳ ಒಟ್ಟು ಮಾರುಕಟ್ಟೆ ಮೌಲ್ಯವಾರೆಂಟ್ನಿಂದ ಭಾರೀ ಹೊಡೆತ
2,227 ಕೋಟಿ ರೂ. ಲಂಚದ ಆರೋಪದಲ್ಲಿ ಸಾಗರ್ ಆರ್.ಅದಾನಿ, ಗೌತಮ್ ಅದಾನಿ ಮತ್ತು ವಿನೀತ್ ಎಸ್.ಜೈನ್ ವಿರುದ್ಧ ಐದು ಅಂಶಗಳ ಕ್ರಿಮಿನಲ್ ಆರೋಪಪಟ್ಟಿಯನ್ನು ನ್ಯೂಯಾರ್ಕ್ನ ಪೂರ್ವ ಜಿಲ್ಲಾ ನ್ಯಾಯಾಲಯಕ್ಕೆ ಯುಎಸ್ನ ಪ್ರಾಸಿಕ್ಯೂಟರ್ ಸಲ್ಲಿಸಿದ್ದರು ಎಂದು ವರದಿ ಉಲ್ಲೇಖಿಸಿದೆ. ಈ ಆರೋಪದಡಿ ಗೌತಮ್ ಅದಾನಿ ಸೇರಿದಂತೆ 7 ಜನರ ವಿರುದ್ಧ ಅಮೆರಿಕದ ನ್ಯಾಯಾಲಯ ಅರೆಸ್ಟ್ ವಾರೆಂಟ್ ಹೊರಡಿಸಿದೆ.
ಶೇ. 20 ರಷ್ಟು!
ಇದರ ಅನ್ವಯ ಅದಾನಿ ನೇತೃತ್ವದ ಪ್ರಮುಖ ಕಂಪನಿಗಳಾದ ಅದಾನಿ ಎಂಟರ್‌ಪ್ರೈಸಸ್ ಷೇರು ಶೇ. 20 ರಷ್ಟು ತೀವ್ರ ಕುಸಿತ ಕಂಡರೆ, ಅದಾನಿ ಎನರ್ಜಿ ಸೊಲ್ಯೂಷನ್ಸ್ ಕೂಡ ಅಷ್ಟೇ ಪ್ರಮಾಣದ ಕುಸಿತವನ್ನು ಎದುರಿಸಿದೆ. ಅದಾನಿ ಗ್ರೀನ್ ಎನರ್ಜಿ 19.17ರಷ್ಟು, ಅದಾನಿ ಟೋಟಲ್ ಗ್ಯಾಸ್ 18.14ರಷ್ಟು, ಅದಾನಿ ಪವರ್ 17.79ರಷ್ಟು ಮತ್ತು ಅದಾನಿ ಪೋರ್ಟ್ಸ್ 15ರಷ್ಟು ಇಳಿಕೆ ಕಂಡಿದೆ.
ಅದಾನಿ ಸ್ಟಾಕ್‌ಗಳ ಒಟ್ಟು ಮಾರುಕಟ್ಟೆ ಮೌಲ್ಯ
ಇನ್ನು ಅಂಬುಜಾ ಸಿಮೆಂಟ್ಸ್ 14.99ರಷ್ಟು ಗಮನಾರ್ಹ ಕುಸಿತ ದಾಖಲಿಸಿದರೆ, ACC ಷೇರುಗಳು 14.54ರಷ್ಟು ಇಳಿಕೆಯಾಗಿದೆ. ಗುಂಪಿನೊಳಗಿನ ಹಲವಾರು ಕಂಪನಿಗಳು ವ್ಯಾಪಾರದ ಅವಧಿಯಲ್ಲಿ ತಮ್ಮ ದೈನಂದಿನ ಕಡಿಮೆ ಸರ್ಕ್ಯೂಟ್ ಮಿತಿಗಳನ್ನು ತಲುಪಿವೆ. ಇಂದು ಬೆಳಗ್ಗೆ ಮೂರು ಅದಾನಿ ಗ್ರೂಪ್ ಷೇರುಗಳಲ್ಲಿ 20ರಷ್ಟು ಕುಸಿತ ಕಂಡ ಬೆನ್ನಲ್ಲೇ ಎಲ್ಲಾ 11 ಅದಾನಿ ಸ್ಟಾಕ್‌ಗಳ ಒಟ್ಟು ಮಾರುಕಟ್ಟೆ ಮೌಲ್ಯವು ಸರಿಸುಮಾರು 2 ಲಕ್ಷ ಕೋಟಿ ರೂ.ಯಿಂದ 12.3 ಲಕ್ಷ ಕೋಟಿ ರೂ.ಗೆ ಕುಸಿದಿದೆ. ಇದು 2023ರ ಆರಂಭದಲ್ಲಿ ಹಿಂಡೆನ್‌ಬರ್ಗ್ ಘಟನೆಯ ಬಳಿಕ ಸಮೂಹದ ಅತ್ಯಂತ ಕಳಪೆ ವ್ಯಾಪಾರ ಪ್ರದರ್ಶನ ಎಂದು ಹೇಳಲಾಗಿದೆ.
ವಾರೆಂಟ್ನಿಂದ ಭಾರೀ ಹೊಡೆತ
ಮೂಡೀಸ್ ರೇಟಿಂಗ್ಸ್ ಪ್ರಕಾರ, ‘ಅದಾನಿ ಗ್ರೂಪ್‌ನ ಅಧ್ಯಕ್ಷ ಮತ್ತು ಇತರ ಹಿರಿಯ ಅಧಿಕಾರಿಗಳ ವಿರುದ್ಧ ಲಂಚ ಆರೋಪ ಹೊರಬಿದ್ದ ಸುದ್ದಿ ಸಂಸ್ಥೆಯ ಮೇಲೆ ಭಾರೀ ಪ್ರಭಾವ ಬೀರಿದೆ. ಅಮೆರಿಕ ನ್ಯಾಯಾಲಯ ಬಂಧನ ವಾರೆಂಟ್ ಜಾರಿಗೊಳಿಸಿದ ನಂತರದಲ್ಲಿ ಅದಾನಿ ಷೇರುಗಳು ದಿಢೀರ್ ಕುಸಿತ ಕಂಡಿದೆ. ಇದು ಅವರ ಉದ್ಯಮದ ಬೆಳವಣಿಗೆಗೆ ದೊಡ್ಡ ಹೊಡೆತ ನೀಡಿದೆ’ ಎಂದು ಉಲ್ಲೇಖಿಸಿದೆ.