ಶಿಕ್ಷಕರು ಎಂದರೆ ವಿದ್ಯಾರ್ಥಿಗಳನ್ನು ತಿದ್ದಿ ತೀಡಿ ಸರಿದಾರಿಗೆ ತರುವ ಮಾರ್ಗದರ್ಶಕರು. ಶಿಕ್ಷಕರಿಗೆ ವಿದ್ಯಾರ್ಥಿಗಳು ಮಕ್ಕಳ ಸಮಾನ ಎನ್ನಲಾಗುತ್ತದೆ. ಆದರೆ ಇಲ್ಲೊಬ್ಬ ಶಿಕ್ಷಕಿ ತನ್ನ ವಿದ್ಯಾರ್ಥಿಯೊಬ್ಬನ ಜತೆಗೆ ಲೈಂಗಿಕ ಸಂಬಂಧ ಹೊಂದಿದ್ದಳು! ಮೇರಿಲ್ಯಾಂಡ್‌ (Maryland)ನ ಮಾಜಿ ಶಿಕ್ಷಕಿ ತನ್ನ ಹದಿಹರೆಯದ ವಿದ್ಯಾರ್ಥಿಯೊಂದಿಗೆ ಲೈಗಿಂಕ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದ್ದು, ಆಕೆಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ (Physical Abuse).

ಮೇರಿಲ್ಯಾಂಡ್‌ನ ಮಾಜಿ ಶಿಕ್ಷಕಿ 32 ವರ್ಷದ ಮೆಲಿಸ್ಸಾ ಕರ್ಟಿಸ್‌ಗೆ ಸದ್ಯ ಕೋರ್ಟ್‌ ಶಿಕ್ಷೆಯನ್ನು ವಿಧಿಸಿದೆ ಹಾಗೂ ಆಕೆಯನ್ನು ಅಮಾನತುಗೊಳಿಸಿದೆ. ಕಳೆದ ವರ್ಷ ಆಕೆ ತನ್ನ ಶಿಕ್ಷಕಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪೊಲೀಸ್‌ ಸೇವೆ ಸೇರಿದ್ದಳು ಎಂದು ತಿಳಿದು ಬಂದಿದೆ.

ಮೆಲಿಸ್ಸಾ ಕರ್ಟಿಸ್ ಒಂದು ವರ್ಷಗಳ ಸರೆಮನೆ ವಾಸ ಅನುಭವಿಸಿದ ನಂತರ ಐದು ವರ್ಷಗಳ ಮೇಲ್ವಿಚಾರಣೆಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಬಿಡುಗಡೆಯಾದ ನಂತರ ಅವಳು ತನ್ನನ್ನು 25 ವರ್ಷಗಳ ಕಾಲ ಲೈಂಗಿಕ ಅಪರಾಧಿ ಎಂದು ನೋಂದಾಯಿಸಿಕೊಳ್ಳಬೇಕಾಗುತ್ತದೆ. ನಿಯಮಗಳ ಪ್ರಕಾರ ಕರ್ಟಿಸ್ ತನ್ನ ಸ್ವಂತ ಮಕ್ಕಳನ್ನು ಹೊರತುಪಡಿಸಿ, ಬೇರೆ ಯಾವುದೇ ಅಪ್ರಾಪ್ತ ವಯಸ್ಕರೊಂದಿಗೆ ಮಾತನಾಡಲೂ ಕೋರ್ಟ್‌ ಅನುಮತಿ ನೀಡುವುದಿಲ್ಲ.
ಕರ್ಟಿಸ್ ಲೇಕ್‌ಲ್ಯಾಂಡ್ಸ್ ಪಾರ್ಕ್ ಮಿಡಲ್ ಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದಾಗ ವರ್ಷಗಳ ಹಿಂದೆ ವಿದ್ಯಾರ್ಥಿಯೊಂದಿಗೆ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿದ್ದಳು ಎಂಬ ಆರೋಪ ಕೇಳಿ ಬಂದಿತ್ತು. ಇಷ್ಟೇ ಅಲ್ಲದೆ ಎಂಟನೇ ತರಗತಿಯ ವಿದ್ಯಾರ್ಥಿಗೆ ಮದ್ಯ ಮತ್ತು ಗಾಂಜಾವನ್ನು ಒದಗಿಸಿದ್ದಾಳೆ ಸನ್ನುವ ದೂರು ಕೂಡ ಇತ್ತು. ಹೀಗಾಗಿ ಈ ಬಗ್ಗೆ 2023ರ ಅಕ್ಟೋಬರ್‌ನಿಂದ ತನಿಖೆ ಪ್ರಾರಂಭಗೊಂಡಿತ್ತು.

ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳ ಪ್ರಕಾರ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕರ್ಟಿಸ್ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಪರಿಚಯ ಮಾಡಿಕೊಳ್ಳುತ್ತಿದ್ದಳು ಎಂದು ತಿಳಿದು ಬಂದಿದೆ.

ಪ್ರತ್ಯೇಕ ಘಟನೆಯಲ್ಲಿ, ಇತ್ತೀಚೆಗೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಇರುವ ಡಾಲ್ಟನ್ ಶಾಲೆಯ ಇಂಗ್ಲಿಷ್‌ ಭಾಷೆ ಬೋಧನೆ ಮಾಡುತ್ತಿದ್ದ ಶಿಕ್ಷಕಿ ವಿರುದ್ಧ ವಿದ್ಯಾರ್ಥಿಗಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಶಾಲೆಯಿಂದ ಆಕೆಯನ್ನು ವಜಾ ಮಾಡಲಾಗಿತ್ತು.

ಶಿಕ್ಷಕಿ ಮಾರಾ ನಾಮನ್ ವಿರುದ್ಧ ಪ್ರಕರಣ ಕೂಡಾ ದಾಖಲಾಗಿತ್ತು. ಪ್ರತಿಷ್ಠಿತ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕಿ ಲೈಂಗಿಕ ದೌರ್ಜನ್ಯ ನೀಡುತ್ತಿದ್ಧಾಳೆ ಎಂಬ ಆರೋಪವನ್ನ ವಿದ್ಯಾರ್ಥಿಯೊಬ್ಬ ಮೊಟ್ಟ ಮೊದಲ ಬಾರಿಗೆ ಮಾಡಿದ್ದ. 50 ವರ್ಷ ವಯಸ್ಸಿನ ಮಾರಾ ನಾಮನ್ ಅವರನ್ನು ಮೊದಲಿಗೆ ಕಡ್ಡಾಯ ರಜೆ ಮೇಲೆ ಕಳಿಸಲಾಗಿತ್ತು. ಬಳಿಕ ಆಕೆಯಿಂದ ರಾಜೀನಾಮೆ ಪಡೆಯಲಾಗಿದೆ ಎಂದು ಶಾಲೆಯ ಮುಖ್ಯಸ್ಥ ಜೆ ಜೀಸಸ್ ಅವರು ಇಮೇಲ್ ಮೂಲಕ ಮಾಹಿತಿ ನೀಡಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!