ಯುವತಿಯನ್ನ ಪ್ರೀತಿಸಿ ಮದುವೆ ಆದ ಹುಡುಗನನ್ನ ಯುವತಿ ಕುಟುಂಬಸ್ಥರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಚಿತ್ರದುರ್ಗದ ಕೋಣ ನೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಕಳೆದ 3 ತಿಂಗಳ ಹಿಂದೆ ಇದೇ ಗ್ರಾಮದ ರಕ್ಷಿತಾ ಮತ್ತು ಮಂಜುನಾಥ್ ಯುವ ಪ್ರೇಮಿಗಳು ದೇವಸ್ಥಾನದಲ್ಲಿ ಮದುವೆಯಾಗಿದ್ದರು.
ಈ ಮದುವೆಗೆ ರಕ್ಷಿತಾ ಪೋಷಕರ ತೀವ್ರ ವಿರೋಧವಿತ್ತು.
ಮಂಜುನಾಥ್ ಮೇಲೆ ಕೋಪಗೊಂಡಿದ್ದ ರಕ್ಷಿತಾ ಕುಟುಂಬ ಬುಧವಾರ ಮಧ್ಯಾಹ್ನ ಏಕಾಏಕಿ ಹಲ್ಲೆ ನಡೆಸಿದೆ. ಸುಮಾರು 20 ಮಂದಿ ಮಂಜುನಾಥ್ ಗೆ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಮಂಜುನಾಥ್ ತಂದೆ ಚಂದ್ರಪ್ಪ ಹಾಗೂ ತಾಯಿ ಅನಸೂಯಮ್ಮಗೂ ಗಂಭೀರ ಗಾಯವಾಗಿದೆ .ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಕ್ಷಿತಾ ತಂದೆ ಜಗದೀಶ್ ಸೇರಿದಂತೆ ಕೊಲೆ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಬ್ರಹ್ಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.