ರೀಲ್ಸ್ ಹುಚ್ಚು ಏನೆಲ್ಲಾ ಅಬದ್ಧಗಳನ್ನು ಜನರ ಕೈಯಲ್ಲಿ ಮಾಡಿಸುತ್ತದೆಯೆಂದ್ರೆ, ಇಲ್ಲೊಬ್ಬ ಭೂಪ ಬ್ರಾ ಧರಿಸಿ ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಲು ಹೋಗಿ ಅಲ್ಲಿನ ಸಾರ್ವಜನಿಕರ ಕೈಯಲ್ಲಿ ಸಖತ್ ಒದೆ ತಿಂದಿದ್ದಾನೆ! ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ರಾತ್ರೋರಾತ್ರಿ ಫೇಮಸ್ ಆಗುವ ಹುಚ್ಚು ಬಯಕೆಯಿಂದ ಯುವಕ -ಯುವತಿಯರು ರೀಲ್ಸ್ ಹೆಸರಿನಲ್ಲಿ ಏನೇನೋ ಮಾಡುತ್ತಾ ಕೊನೆಗೆ ನಗೆಪಾಟಲಿಗಗೀಡಾಗುವುದನ್ನು ನಾವು ನೋಡುತ್ತಿರುತ್ತೇವೆ. ಇಂತದ್ದೇ ಒಂದು ಘಟನೆ ಹರ್ಯಾಣದ ಪಾಣಿಪತ್‌ನಿಂದ ವರದಿಯಾಗಿದ್ದು, ಇಲ್ಲಿನ ಜನ ನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಯುವಕನೊಬ್ಬ ಮಹಿಳೆಯರ ಹಾಗೆ ಡ್ರೆಸ್ ಮಾಡ್ಕೊಂಡು ರೀಲ್ಸ್ ಮಾಡ್ತಿದ್ದ ಸಂದರ್ಭದಲ್ಲಿ ಅಲ್ಲಿನ ಅಂಗಡಿ ಮಾಲೀಕನೊಬ್ಬ ಈ ಯುವಕನನ್ನು ಹಿಡಿದು ಯದ್ವಾತದ್ವಾ ಥಳಿಸಿದ್ದಾನೆ. ಅಂಗಡಿ ಮಾಲಿಕ ಹೇಳೋ ಪ್ರಕಾರ ಈ ಯುವಕ ಜನನಿಬಿಡ ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲವಾಗಿ ವರ್ತಿಸುತ್ತಿದ್ದನಂತೆ!

ಸಾಧಾರಣವಾಗಿ ಯಾವಾಗಲೂ ಜನರಿಂದ ತುಂಬಿಕೊಂಡಿರುವ ಪಾಣಿಪತ್ ನಿನ್ಸಾರ್ ಮಾರುಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಇಂತಹ ಪ್ರದೇಶದಲ್ಲಿ ಯುವಕನೊಬ್ಬ ಮಹಿಳೆಯರಂತೆ ಡ್ರೆಸ್ ಮಾಡ್ಕೊಂಡು, ಮೊಬೈಲ್ ಕ್ಯಾಮರಾ ಆನ್ ಮಾಡಿ ರೀಲ್ ಶುರು ಹಚ್ಕೊಂಡಿದ್ದಾನೆ.

ಇದನ್ನು ನೋಡಿದ ಅಲ್ಲಿನ ಅಂಗಡಿ ಮಾಲೀಕರೊಬ್ಬರು, ಈ ಯುವಕನನ್ನು ತಡೆದು, ಇಲ್ಲಿ ಮಹಿಳೆಯರೆಲ್ಲಾ ಓಡಾಡುತ್ತಿರುವುದರಿಂದ ಅವರಿಗೆ ಮುಜುಗರವಾಗುತ್ತದೆ, ಹಾಗಾಗಿ ಇಲ್ಲಿ ರೀಲ್ ಮಾಡದಂತೆ ಆ ಯುವಕನಿಗೆ ಕಿವಿಮಾತು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಅಂಗಡಿ ಮಾಲೀಕರು ಹಾಗೂ ಈ ಯುವಕನ ನಡುವೆ ವಾಗ್ವಾದ ನಡೆದಿದೆ. ಮಾತ್ರವಲ್ಲದೇ, ಈ ಯುವಕ, ‘ನಾನು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಫೇಮಸ್ ಆಗಿದ್ದು ಇಂತಹ ಕಂಟೆಂಟ್ ಗಳನ್ನು ಈ ಮೊದಲೂ ಮಾಡಿರುವುದಾಗಿ’ ಅವರ ಮುಂದೆ ಬಿಟ್ಟಿ ಪೋಸ್ ಕೊಟ್ಟಿದ್ದಾನೆ. ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ಅಂಗಡಿ ಮಾಲೀಕರು ಈ ಯುವಕನ ಚಳಿ ಬಿಡಿಸಿದ್ದಾರೆ! ತನ್ನ ರೀಲ್ಸ್ ಹಲವು ಬಾರಿ ವೈರಲ್ ಆಗಿದ್ದು, ತನ್ನ ಫಾಲೋವರ್ಸ್ ಇಂತಹ ಕಂಟೆಂಟ್ ಗಳನ್ನು ಇಷ್ಟಪಡುತ್ತಾರೆ ಎಂದೂ ಆ ಯುವಕ ಹೇಳಿಕೊಂಡಿರುವುದು ವರದಿಯಾಗಿದೆ.

ಈ ರೀಲ್ ಹೀರೋ ಮತ್ತು ಅಂಗಡಿ ಮಾಲೀಕರ ನಡುವಿನ ವಾಗ್ವಾದ ಮತ್ತು ಯುವಕನಿಗೆ ಪೆಟ್ಟು ಬೀಳುವುದನ್ನು ಅಲ್ಲಿದ್ದವರು ತಮ್ಮ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ಸದ್ಯಕ್ಕೆ ಈ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಕಾಣಿಸುವಂತೆ, ಈ ಯುವಕ ಆ ಬ್ಯುಸಿ ಏರಿಯಾದಲ್ಲಿ ಅರೆ ನಗ್ನ ಸ್ಥಿತಿಯಲ್ಲಿದ್ದು, ಮಹಿಳೆಯರ ಒಳ ಉಡುಪುಗಳನ್ನು ಮಾತ್ರ ತೊಟ್ಟಿರುವುದು ಕಾಣಿಸುತ್ತದೆ.

ಏಟು ಬೀಳುವಲ್ಲಿ ಬಿದ್ದ ಮೇಲೆ ಆ ಯುವಕ ಅಲ್ಲಿದ್ದವರಲ್ಲಿ ತನ್ನ ಹುಚ್ಚಾಟಕ್ಕೆ ಕ್ಷಮೆ ಕೇಳಿದ್ದಾನೆ ಮತ್ತು ತನಗೆ ಹೊಡೆಯದಂತೆ ಬೇಡಿಕೊಂಡಿದ್ದಾನೆ. ಆದರೆ ಈ ಯುವಕನ ಹುಚ್ಚಾಟಕ್ಕೆ ಸರಿಯಾದ ‘ರಿವಾರ್ಡ್’ ಸಿಕ್ಕಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ದೂರೂ ದಾಖಲಾಗಿದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ರೀಲ್ ಹುಚ್ಚಾಟದಲ್ಲಿ ಮತ್ತು ಲೈಕ್ಸ್ ಪಡೆಯುವ ಭರದಲ್ಲಿ ಏನೇನೋ ಮಾಡುವವರಿಗೊಂದು ಪಾಠದಂತೆ ಈ ಘಟನೆ ನಡೆದಿರುವುದಂತೂ ಸತ್ಯ!

Leave a Reply

Your email address will not be published. Required fields are marked *

Join WhatsApp Group
error: Content is protected !!