ಪುತ್ತೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನ. 8ರಂದು ರಾತ್ರಿ ಸಂಪ್ರದಾಯದಂತೆ ಶ್ರೀ ದೇವರ ಬಲಿ ಉತ್ಸವ ನಡೆಯಲಿದೆ.
ಅಂದು ಭಾನುವಾರ ರಾತ್ರಿ 7.30ರ ಬಳಿಕ ಶ್ರೀ ದೇವರ ಬಲಿ ಹೊರಡಲಿದೆ. ನ. 9ರಂದು ಸೋಮವಾರ ಸಂಜೆ 5 ಗಂಟೆಗೆ ದೇವಸ್ಥಾನದ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ ನಡೆಯಲಿದೆ.
ಗೋಪೂಜೆ ಮಾಡಿಸಲು ಇಚ್ಛಿಸುವ ಭಕ್ತಾದಿಗಳಿಗೆ ಅವಕಾಶವಿದ್ದು, ಪೂಜೆ ಮಾಡಿಸುವವರು ಅಂದು ಸಂಜೆ 4.30ಕ್ಕೆ ಗೋಶಾಲೆಯಲ್ಲಿ ಸಂಕಲ್ಪ ಮಾಡಿಸಿ ಪೂಜೆಯಲ್ಲಿ ಭಾಗವಹಿಸಬೇಕು.
ದೇವಸ್ಥಾನದಲ್ಲಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸುವಂತೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!