ಚಿತ್ರದುರ್ಗ: 250 ಗ್ರಾಂ ತೂಕದ ನಕಲಿ ಚಿನ್ನದ ಬಿಲ್ಲೆಗಳನ್ನು ನೀಡಿ 10 ಲಕ್ಷ ರೂ. ನಗದು ಹಾಗೂ ಮೊಬೈಲ್ ಫೋನ್ ಪಡೆದು ವಂಚಿಸಿದ್ದ ಆರೋಪಿಯನ್ನು ನಾಯಕನಹಟ್ಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣದ ಬೊಡಿಗೆ ಶ್ರೀನಿವಾಸ್ ವಂಚನೆಗೊಳಗಾದವರು. ಡಿ. ರಾಜು (39) ಬಂಧಿತ ಆರೋಪಿ.

ಸೆಪ್ಟೆಂಬರ್ 26ರಂದು ಚಳ್ಳಕೆರೆ ತಾಲೂಕಿನ ಕೊರಡಿಹಳ್ಳಿ ಗ್ರಾಮದ ಸಮೀಪದ ಚಿನ್ನಹಗರಿ ಹಳ್ಳಕ್ಕೆ ತೆರಳುವ ರಸ್ತೆಗೆ ಶ್ರೀನಿವಾಸ್ ಅವರನ್ನು ಕರೆಸಿಕೊಂಡಿದ್ದ ಆರೋಪಿ, 250 ಗ್ರಾಂ ತೂಕದ ನಕಲಿ ಚಿನ್ನದ ಬಿಲ್ಲೆಗಳನ್ನು ನೀಡಿ ಅವು ಅಸಲಿ ಚಿನ್ನವೆಂದು ನಂಬಿಸಿದ್ದ. ಬಳಿಕ ಅವರಿಂದ 10 ಲಕ್ಷ ರೂ. ನಗದು ಹಾಗೂ ಒಂದು ಮೊಬೈಲ್ ಫೋನ್ ಪಡೆದು ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಶ್ರೀನಿವಾಸ್ ಅವರು ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿ ಡಿ. ರಾಜುನನ್ನು ಪತ್ತೆಹಚ್ಚಿ ಬಂಧಿಸಿದ್ದು, ಆತನಿಂದ 4.50 ಲಕ್ಷ ರೂ. ನಗದು ಹಾಗೂ ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ನಾಯಕನಹಟ್ಟಿ ಠಾಣೆಯ ಪಿಎಸ್‌ಐ ಪಾಂಡುರಂಗ ಜಿ. ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಷೆ ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!