ಪುತ್ತೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಧಾರ್ಮಿಕ, ಶೈಕ್ಷಣಿಕ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸಭಾಭವನ ಮತ್ತು ವಿದ್ಯಾರ್ಥಿ ವಸತಿನಿಲಯ ನಿರ್ಮಾಣ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಪುತ್ತೂರಿನಲ್ಲಿ ಒಂದು ಅಥವಾ ಎರಡು ಎಕರೆ ನಿವೇಶನ ಮಂಜೂರು ಮಾಡುವಂತೆ ಬ್ರಾಹ್ಮಣ ಸಮಾಜದ ಪ್ರಮುಖರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಎಸ್. ರಘುನಾಥ್ ಹಾಗೂ ಉಪಾಧ್ಯಕ್ಷ, ವಕೀಲ ಮಹೇಶ್ ಕಜೆ ಅವರ ನೇತೃತ್ವದಲ್ಲಿ ನ. 3ರಂದು ಸಮಾಜದ ಪ್ರಮುಖರು ಶಾಸಕರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು.
ಯಾವುದೇ ಆದಾಯವಿಲ್ಲದಿದ್ದರೂ ಬ್ರಾಹ್ಮಣ ಸಮಾಜದವರು ಅನೇಕ ದೇವಸ್ಥಾನಗಳಲ್ಲಿ ಪೂಜೆ-ಪುನಸ್ಕಾರಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ನಮ್ಮ ಧಾರ್ಮಿಕ ಕ್ಷೇತ್ರಗಳು ಉಳಿದುಕೊಂಡು ಬಂದಿರುವುದಕ್ಕೆ ನಿಮ್ಮಂತಹ ಸಮಾಜದ ಬಂಧುಗಳ ಕೊಡುಗೆ ಮಹತ್ವದ್ದಾಗಿದೆ. ಈ ವಿಚಾರವನ್ನು ಎಲ್ಲ ವೇದಿಕೆಗಳಲ್ಲಿಯೂ ಹೇಳುತ್ತೇನೆ ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಮಾಜಿ ಆಡಳಿತ ಮೊಕ್ತೇಸರ ಎನ್.ಕೆ. ಜಗನ್ನಿವಾಸ್ ರಾವ್, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ದೇರ್ಕಜೆ ವೆಂಕಟ್ರಮಣ ಭಟ್, ಎಂ.ಟಿ. ಜಯರಾಮ ಭಟ್, ಉಮಾಶಂಕರ ಎ., ವೇಣುಗೋಪಾಲ ಭಟ್ ಮಾಂಬಾಡಿ, ಬೇರಿಕೆ ಈಶ್ವರ ಭಟ್, ಶ್ಯಾಮ್ ಜಿ., ಶ್ರೀಕಾಂತ್ ಕೆ., ಸುರೇಶ್ ಬಲ್ವಾಡ್, ಎಂ. ಕೃಪಾಶಂಕರ, ಶ್ರೀಕೃಷ್ಣ, ಎಂ. ಗೋವಿಂದ ಶಾಸ್ತ್ರಿ, ಎನ್. ಕೃಷ್ಣಮೂರ್ತಿ ಶಾಸ್ತ್ರೀ, ಸಿ. ಕೃಷ್ಣಮೂರ್ತಿ ಶಾಸ್ತ್ರಿ, ಮಹಾಬಲೇಶ್ವರ, ಕೆ. ಕೃಷ್ಣ ಭಟ್, ಸುಬ್ರಹ್ಮಣ್ಯ ಭಟ್, ದ್ವಾರಕ ಸಮೂಹ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಚಂದ್ರಶೇಖರ ಭಟ್, ಶ್ಯಾಮ್ ಭಟ್, ಪ್ರಸನ್ನ ಎಂ.ಎಸ್. ಕೆದಿಲ, ವಿವೇಕಾನಂದ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಉದಯಕೃಷ್ಣ ಬಿ., ಕೆ. ರವೀಂದ್ರ, ಗಣೇಶ್ ಭಟ್, ರವಿಶಂಕರ ಭಟ್ ಉಪ್ಪಂಗಳ, ಚಂದ್ರಶೇಖರ್ ಪಿ.ಜಿ., ಮಧುಸೂದನ ಮತ್ತಿತರರು ಉಪಸ್ಥಿತರಿದ್ದರು.









