ಸ ಮಯಕ್ಕೆ ಸರಿಯಾಗಿ ಆಟೋ ಸಿಗದ್ದಕ್ಕೆ ರಾಪಿಡೋ ಬೈಕ್(Rapido bike) ಬುಕ್ ಮಾಡಿದ್ದ ಬೆಂಗಳೂರಿನ ಯುವತಿಯೊಬ್ಬಳು ಆ ರಾತ್ರಿ ತನಗಾದ ಆಘಾತಕಾರಿ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ ಯುವತಿಯ ಅನುಭವ ಕೇಳಿದಾಗ ನಿಜವಾಗಿಯೂ ಮಹಿಳೆಯರಿಗೆ ಬೆಂಗಳೂರು ಸುರಕ್ಷಿತವೇ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡುತ್ತೆ.

ಅಲ್ಲದೆ ತಡರಾತ್ರಿ ಆಫೀಸ್‌ನಿಂದ ಹೊರಡುವ ಮಹಿಳಾ ಉದ್ಯೋಗಿಗಳ ಸುರಕ್ಷಿತ ಬಗ್ಗೆ ಕಂಪನಿಗಳು ಚಿಂತಿಸುವಂತೆ ಮಾಡಿದೆ. ಅಷ್ಟಕ್ಕೂ ಆ ರಾತ್ರಿ ರಾಪಿಡ್ ಬೈಕ್ ಬುಕ್ ಮಾಡಿದ್ದು ಎಲ್ಲಿಗೆ, ಚಲನೆ ವೇಳೆ ನಡೆದಿದ್ದೇನು? ಈ ಲೇಖನ ಓದಿದರೆ ಮುಂದೆ ಬುಕ್ ಮಾಡುವಾಗ ಎಚ್ಚರಿಕೆಯಿಂದಿರುವಂತೆ ಮಾಡಬಹುದು.

ಹತ್ರ ಬಾ.. ಬೈಕ್ ಹಿಂಬದಿ ಕುಳಿತ ಯುವತಿಗೆ ಶಾಕ್

ಈ ಘಟನೆ ಕಳೆದ ಅಕ್ಟೋಬರ್ 30 ರಂದು ನಡೆದಿದ್ದರೂ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯುವತಿ ಹೇಳಿಕೊಂಡಂತೆ, ಯುವತಿ ವೈಟ್‌ ಫೀಲ್ಡ್‌ಗೆ ಹೋಗಬೇಕಿತ್ತು. ಆದರೆ ಆ ಸಮಯಕ್ಕೆ ಆಟೋಗಳು ಸಿಗಲಿಲ್ಲವಾದ್ದರಿಂದ ಅನಿವಾರ್ಯವಾಗಿ ಕೊನೆಗೆ ರಾಪಿಡೋ ಬೈಕ್ ಬುಕ್ ಮಾಡಿದ್ದಳು. ರಾಪಿಡೋ ಬೈಕ್ ಚಿಕ್ಕದಾಗಿದ್ದರಿಂದ ಅದರಲ್ಲಿ ಕುಳಿತುಕೊಳ್ಳಲೇ ಸ್ಥಳ ಕಡಿಮೆ ಇತ್ತು. ಹೀಗಿರುವಾಗ ರಾಪಿಡೋ ಬೈಕ್ ಸವಾರ ಮುಂದಕ್ಕೆ ಸರಿಯುವಂತೆ ಹೇಳಿದ್ದಾನೆ. ಮೊದ ಮೊದಲು ಬೈಕ್‌ ಬ್ಯಾಲೆನ್ಸ್ ಮಾಡಲು ಹೇಳುತ್ತಿದ್ದಾನೆ ಎಂದು ನಂಬಿದ್ದ ಯುವತಿಗೆ ಬಳಿಕ ಅದೇ ರೀತಿ ‘ಹತ್ರ ಬಾ.. ಮುಂದೆ ಸರಿದು ಕೂಡು’ ಎನ್ನುವಂತೆ ಹೇಳಿದ್ದಾನೆ. ರಾಪಿಡೋ ಬೈಕ್ ಸವಾರನ ಈ ವರ್ತನೆಯಿಂದ ಯುವತಿ ಆಘಾತಗೊಂಡಿದ್ದಾಳೆ. ರಾತ್ರಿ ಹೊತ್ತು ಬೇರೆ. ಯುವತಿಗೆ ಇಳಿಯಲಾಗದೆ, ಮುಂದೆ ಹೋಗಲಾಗದೆ ಭಯದ ಪರಿಸ್ಥಿತಿ ಅನುಭವಿಸಿದ್ದಾಳೆ.

ಆ ರಾತ್ರಿ ನಡೆದಿದ್ದೆಲ್ಲ ಆಘಾತಕಾರಿ ಅನುಭವ…!

ರಾಪಿಡೋ ಡ್ರೈವರ್ ವೈಟ್‌ಫೀಲ್ಡ್ ತಲುಪುವವರೆಗೆ ಮೂರು ನಾಲ್ಕು ಬಾರಿ ಹತ್ತಿರಕ್ಕೆ ಬರುವಂತೆ ಹೇಳಿದ್ದಾನೆ. ಮೊದಲಿಗೆ ಇದು ಸಾಮಾನ್ಯ ಎಂದುಕೊಂಡಿದ್ದಾಕೆಗೆ ಈಗ ರಾಪಿಡ್ ಡ್ರೈವ್‌ ಮಾಡುವವನ ವರ್ತನೆಗೆ ಬೆಚ್ಚಿಬಿದ್ದಿದ್ದಾಳೆ. ಅವನಿಂದ ಅಂತರ ಕಾಪಾಡಿಕೊಂಡು ಸೀಟಿನ ಹಿಂಬದಿ ಕುಳಿತಾಗೆಲ್ಲ ಹತ್ರ ಜರುಗುವಂತೆ ಕೇಳಿದ್ದಾನೆ. ಅಲ್ಲದೆ ಇನ್ನಷ್ಟು ಹಿಂಬದಿ ಸರಿಯಲು ಸ್ಥಳಾವಕಾಶವಿಲ್ಲ. ಇನ್ನೊಂದೆಡೆ ಉದ್ದೇಶಪೂರ್ವಕವಾಗಿ ವೇಗವಾಗಿ ಓಡಿಸುವುದು, ಏಕಾಏಕಿ ಬ್ರೇಕ್ ಹಾಕುವುದು ಮಾಡಿದ್ದರಿಂದ ಅಷ್ಟೆಲ್ಲ ಕಿರಿಕಿರಿ ನಡುವೆಯೂ ಬೈಕ್‌ನ ಹಿಂಬದಿ ಹಿಡಿದು ಕುಳಿತಿದ್ದಾಳೆ. ಒಂದು ಹಂತದಲ್ಲಿ ಧೈರ್ಯ ತಂದುಕೊಂಡು ಬೈಕ್ ನಿಧಾನವಾಗಿ ಚಲಿಸುವ ಎಂದಿದ್ದಕ್ಕೆ ‘ಬ್ಯಾಗ್‌ನ ಸ್ಟ್ರಾಪ್ ಹಿಡಿದುಕೊಳ್ಳಿ, ಅದಕ್ಕಿಂತ ಒಳ್ಳೆಯದು’ ಎಂದು ದುರ್ವರ್ತನೆ ತೋರಿದ್ದಾನೆಂದು ಮಹಿಳೆ ಲಿಂಕ್ಡ್‌ ಇನ್‌(LinkedIn) ನಡೆದ ಘಟನೆ ಬಗ್ಗೆ ಬರೆದಿದ್ದಾಳೆ. ಅಲ್ಲದೆ ರಾಪಿಡೋ ಸರ್ವಿಸ್ ಬಗ್ಗೆ ತುಂಬಾ ನಂಬಿಕೆ ಇತ್ತು. ಈ ಘಟನೆ, ಅನುಭವದ ಬಳಿಕ ಮತ್ತೊಮ್ಮೆ ಬುಕ್ ಮಾಡಲು ಯೋಚಿಸುವಂತಾಗಿದೆ ಎಂದಿದ್ದಾರೆ.

ಒಟ್ಟಾರೆ ರಾಪಿಡ್ ಬೈಕ್ ಮಾಡಿದ ಈ ಮಹಿಳೆಯ ಅನುಭವ ಇತತರಿಗೆ ಎಚ್ಚರಿಕೆ ಗಂಟೆಯಾಗಿದೆ. ರಾತ್ರಿವೇಳೆ ಒಂಟಿಯಾಗಿ ಪ್ರಯಾಣಿಸುವುದಿದ್ದರ ಆಟೋದಲ್ಲಿ ಹೋಗುವುದೇ ಇದಕ್ಕಿಂತ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!