ಪುತ್ತೂರು: ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ ದಾಖಲಾಗಿದ್ದ ಮಹಿಳಾ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ತೆ ಹಾಗೂ ನಾದಿನಿ ಸೇರಿದಂತೆ ಮೂವರು ಮಹಿಳಾ ಆರೋಪಿಗಳಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ರಮ್ಲತ್, ನೆಬೀಸಾ ಹಾಗೂ ಜುವೇರಿಯಾ ನಿರೀಕ್ಷಣಾ ಜಾಮೀನು ಪಡೆದ ಆರೋಪಿಗಳು.ಫಾತಿಮತ್ ಅನಿಸಾ ಅವರು ನೀಡಿದ ದೂರಿನ ಆಧಾರದಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಶೂನ್ಯ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ಸಂಖ್ಯೆ 01/2026ರಂತೆ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಅಲ್ಲಿ ಎಫ್‌ಐಆರ್ ಸಂಖ್ಯೆ 90/2026ರಂತೆ ದಾಖಲಿಸಲಾಗಿತ್ತು.ಆರೋಪಿಗಳ ವಾದವೇನು?ದೂರುದಾರರು ಸುಮಾರು ಒಂದು ವರ್ಷಕ್ಕೂ ಅಧಿಕ ಕಾಲ ಪತಿಯಿಂದ ದೂರವಾಗಿ ತವರು ಮನೆಯಲ್ಲಿ ವಾಸವಾಗಿದ್ದು, ಪತಿಯೊಂದಿಗೆ ಸಂಪರ್ಕ ಸಾಧಿಸಲು ಅಥವಾ ಮಾತನಾಡಲು ಪ್ರಯತ್ನಿಸಿಲ್ಲ. ಅಲ್ಲದೆ, ಪತಿಯ ಮೊಬೈಲ್ ಫೋನ್ ಅನ್ನೂ ತಡೆಹಿಡಿದು, ಪತಿ ಹಾಗೂ ಅವರ ಸಂಬಂಧಿಕರಿಗೆ ತೊಂದರೆ ನೀಡುವ ಉದ್ದೇಶದಿಂದ ಸುಳ್ಳು ದೂರು ನೀಡಿದ್ದಾರೆ ಎಂದು ಆರೋಪಿಗಳ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು.ಮೂರನೇ ಆರೋಪಿ ಜುವೇರಿಯಾ ಹಲವು ವರ್ಷಗಳಿಂದ ಕೇರಳದಲ್ಲಿ ವಾಸವಾಗಿದ್ದು, ಪ್ರಕರಣದಲ್ಲಿ ಉಲ್ಲೇಖಿಸಿರುವ ಘಟನೆ ನಡೆದ ಸಮಯದಲ್ಲೂ ಕೇರಳದಲ್ಲಿಯೇ ಇದ್ದರು ಎಂಬ ಅಂಶವನ್ನೂ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.ಆರೋಪಿಗಳ ಪರ ಮಂಡಿಸಲಾದ ವಾದಗಳು ಹಾಗೂ ಪ್ರಕರಣದ ಇತರ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯವು ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಆರೋಪಿಗಳ ಪರ ಹಿರಿಯ ನ್ಯಾಯವಾದಿ ನೂರುದ್ದೀನ್ ಸಾಲ್ಮರ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!