ಪುತ್ತೂರು: ಸಾಮಾಜಿಕ, ಕ್ರೀಡಾ ಹಾಗೂ ಸೌಹಾರ್ದ ಚಟುವಟಿಕೆಗಳ ಮೂಲಕ ಕಳೆದ ಹಲವು ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಪುತ್ತೂರಿನ ದರ್ಬೆಯ ಅಕ್ಕ ವೆಜಿಟೇಬಲ್ಸ್ ಮಾಲಕ ಅಬ್ದುಲ್ ರಝಾಕ್ ಬಪ್ಪಳಿಗೆ ಅವರಿಗೆ 2026ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಹಾಗೂ ಮಮತಾ ಗಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.ಕಳೆದ ಎಂಟು ವರ್ಷಗಳಿಂದ ಬಡ ಹೆಣ್ಣುಮಕ್ಕಳ ಕಲ್ಯಾಣೋತ್ಸವಗಳಿಗೆ ಹಾಗೂ ಸರಕಾರಿ ಶಾಲೆಗಳಿಗೆ ಉಚಿತವಾಗಿ ತರಕಾರಿ ಒದಗಿಸುತ್ತಿರುವ ಅಬ್ದುಲ್ ರಝಾಕ್ ಅವರು, ಪುತ್ತೂರಿನ ಹಲವು ರೋಗಿಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ಅಲ್ಲದೆ, ಪುತ್ತೂರಿನಲ್ಲಿ ಮೃತಪಟ್ಟ ಅನಾಥರ ಅಂತ್ಯಕ್ರಿಯೆಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ನೆರವೇರಿಸಲು ಸಹಕರಿಸುವ ಮೂಲಕ ಮಾನವೀಯ ಸೇವೆ ಸಲ್ಲಿಸಿದ್ದಾರೆ.

ಕೊರೋನಾ ಸಂಕಷ್ಟದ ಸಂದರ್ಭದಲ್ಲಿಯೂ ಇವರು ಸಲ್ಲಿಸಿದ ಸೇವೆ ಗಮನಾರ್ಹ. ತಾಲೂಕಿನ ವಿವಿಧ ಪೊಲೀಸ್ ಠಾಣೆಗಳು, ನಗರಸಭೆ ಹಾಗೂ ಸರಕಾರಿ ಆಸ್ಪತ್ರೆಗಳಿಗೆ ಸ್ಯಾನಿಟೈಸರ್ ಕಿಟ್‌ಗಳನ್ನು ವಿತರಿಸಿದ್ದರು. ಬೆನ್ನಿಗೆ ಸ್ಯಾನಿಟೈಸರ್ ಯಂತ್ರವನ್ನು ಕಟ್ಟಿಕೊಂಡು ಮಂದಿರ, ಮಸೀದಿ, ಚರ್ಚ್, ಶಾಲಾ ಆವರಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವತಃ ಸ್ಯಾನಿಟೈಸರ್ ಸಿಂಪಡಿಸಿದ್ದರು.ಅಂದಿನ ಎಸ್ಪಿ ಅವರ ಅನುಮತಿಯೊಂದಿಗೆ ಎಚ್‌ಎಂಸಿ (ಹಿಂದೂ-ಮುಸ್ಲಿಂ-ಕ್ರೈಸ್ತ) ಜನಜಾಗೃತಿ ದಳವನ್ನು ಸ್ಥಾಪಿಸಿ, ದಾನಿಗಳ ಸಹಕಾರದೊಂದಿಗೆ ಸುಮಾರು 1,200 ಮನೆಗಳಿಗೆ ಕೊರೋನಾ ಪರಿಹಾರ ಕಿಟ್‌ಗಳನ್ನು ವಿತರಿಸಿದ್ದರು. ಊರಿನಲ್ಲಿರುವ ಸೈನಿಕರ ಕುಟುಂಬಗಳಿಗೆ ಒಂದು ತಿಂಗಳ ಕಾಲ ಅಗತ್ಯ ದಿನಬಳಕೆಯ ವಸ್ತುಗಳನ್ನು ಉಚಿತವಾಗಿ ಒದಗಿಸಿದ್ದರು.ಆಗಸ್ಟ್ 15ರಂದು ಪೊಲೀಸ್ ಇಲಾಖೆ ಹಾಗೂ ಸಿಟಿ ಫ್ರೆಂಡ್ಸ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಜಂಟಿ ಆಶ್ರಯದಲ್ಲಿ ನಡೆದ ಮಾದಕ ದ್ರವ್ಯ ಮುಕ್ತ ಪುತ್ತೂರು ಮತ್ತು ರಸ್ತೆ ಸುರಕ್ಷತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ್ದರು. ಅಲ್ಲದೆ, ತಾಲೂಕಿನ 30 ಆಂಬುಲೆನ್ಸ್ ಚಾಲಕರು, 50 ಮಾಜಿ ಸೈನಿಕರು, ಮೆಸ್ಕಾಂನ 50ಕ್ಕೂ ಅಧಿಕ ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಿದ್ದರು.ಕಳೆದ 15 ವರ್ಷಗಳಿಂದ ನಿರಂತರವಾಗಿ ಸಾಮಾಜಿಕ ಹಾಗೂ ಸೌಹಾರ್ದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಇವರ ಸೇವೆಯನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು ಈಗಾಗಲೇ ಸನ್ಮಾನಿಸಿವೆ. ಇದೀಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಇವರ ಸಾಮಾಜಿಕ ಸೇವೆಗೆ ಸಂದ ಗೌರವವಾಗಿದೆ..!!

Leave a Reply

Your email address will not be published. Required fields are marked *

You missed

Join WhatsApp Group
error: Content is protected !!