ಪುತ್ತೂರು: ಕೇಪು ಗ್ರಾಮದ ಉಳ್ಳಾಲ್ತಿ ದೇವಸ್ಥಾನದ ವಠಾರದಲ್ಲಿ ನಡೆದ ಕೋಳಿ ಅಂಕಕ್ಕೆ ಸಂಬಂಧಿಸಿದಂತೆ ಶಾಸಕ ಅಶೋಕ್ ರೈ ಸೇರಿದಂತೆ 26 ಮಂದಿಯ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಈ ಮೂಲಕ ಪ್ರಕರಣದ ಆರೋಪದಿಂದ ಎಲ್ಲ 26 ಮಂದಿಗೂ ಮುಕ್ತಿ ದೊರೆತಿದೆ.
2025ರ ಡಿಸೆಂಬರ್ 20ರಂದು ಕೇಪು ಗ್ರಾಮದ ಉಳ್ಳಾಲ್ತಿ ದೇವಸ್ಥಾನದ ವಠಾರದಲ್ಲಿ ವರ್ಷಂಪ್ರತಿ ಹರಕೆಯ ರೂಪದಲ್ಲಿ ನಡೆಯುವ ಕೋಳಿ ಅಂಕ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಲಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ, ಶಾಸಕ ಅಶೋಕ್ ರೈ ಸೇರಿದಂತೆ ಒಟ್ಟು 26 ಮಂದಿಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದ್ದು, ಶಾಸಕ ಅಶೋಕ್ ರೈ ಸಹಿತ 26 ಮಂದಿಯ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ. ಇದರಿಂದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಎಲ್ಲರಿಗೂ ಕಾನೂನು ಹೋರಾಟದಲ್ಲಿ ರಿಲೀಫ್ ದೊರೆತಂತಾಗಿದೆ.









