ಮುಕ್ವೆ: ಗರೀಬ್ ನವಾಜ್ ಚಾರಿಟೇಬಲ್ ಟ್ರಸ್ಟ್ ಮುಕ್ವೆಯ 2026-27ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ನ. 6ರಂದು ಮುಕ್ವೆಯ RJM ಆಡಿಟೋರಿಯಂನಲ್ಲಿ ಅಬ್ದುಲ್ ರಹಿಮಾನ್ ಹಾಜಿ ಬಾಲಯ ಅವರ ಅಧ್ಯಕ್ಷತೆಯಲ್ಲಿ ಟ್ರಸ್ಟ್‌ನ ಮಹಾಸಭೆ ನಡೆಯಿತು. 2025-26ನೇ ಸಾಲಿನ ಅಧ್ಯಕ್ಷ ಉಸ್ಮಾನ್ ಹಾಜಿ ಚಿಕ್ಕಳ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಹಾಜಿ ಬಾಲಯ ಹಾಗೂ ಅಧ್ಯಕ್ಷರಾಗಿ ಸಮಾಜಸೇವಕ PM ಅಶ್ರಫ್ ನೆರಿಗೆರಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಶಿಹಾಬ್ ಪಿ.ಕೆ. ಹಾಗೂ ಖಜಾಂಚಿಯಾಗಿ TA ಸಿದ್ದೀಕ್ ಚಿಕ್ಕಳ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಲತೀಫ್ ನೆರಿಗೆರಿ ಮತ್ತು ಯೂಸುಫ್ ಮಣಿಯ, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಕರ್ಗಲ್ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉಸ್ಮಾನ್ ಹಾಜಿ ಚಿಕ್ಕಳ, ಸಲೀಂ ಮಾಯಾಂಗಲ, ನಾಸಿರ್ ಬಾಂಬೆ, ನಯಾಜ್ ಸಾಹೇಬ್, ಹನೀಫ್ ಪಿ.ಕೆ., ಹುಸೈನ್ ಸರಳಿಕಟ್ಟೆ ಹಾಗೂ ನಿಜ್ಹಾಮ್ ಸಾಹೇಬ್ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಮುಕ್ವೆ ರಹ್ಮಾನಿಯಾ ಜುಮಾ ಮಸೀದಿಯ ಕೋಶಾಧಿಕಾರಿ ಉಮ್ಮರ್ ಹಾಜಿ ರೋಯಲ್ ಸೇರಿದಂತೆ ಒಟ್ಟು 29 ಮಂದಿ ಸದಸ್ಯರು ಉಪಸ್ಥಿತರಿದ್ದರು.









