ಪುತ್ತೂರು; ಉಪ್ಪಿನಂಗಡಿ -ಪುತ್ತೂರು ರಾಜ್ಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ಅವಧಿ ಮುಗಿದು ಒಂದು ವರ್ಷವಾದರೂ ಇನ್ನೂ ಕುಂಟುತ್ತಾ ಸಾಗುತ್ತಿರುವುದನ್ನು ವಿರೋಧಿಸಿ ರಸ್ತೆ ದುರಸ್ಥಿಗೆ ಆಗ್ರಹಿಸಿ ಬಿಜೆಪಿ ಪಕ್ಷದ ವತಿಯಿಂದ ನೆಕ್ಕಿಲಾಡಿ ಸಮೀಪದ ಆದರ್ಶನಗರದಲ್ಲಿ ಸೋಮವಾರ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ರಾಜ್ಯ ಸರ್ಕಾರ ದಿವಾಳಿಯಾಗಿದೆ. ಪುತ್ತೂರು ಕ್ಷೇತ್ರದ ಎಲ್ಲಾ ರಸ್ತೆಗಳ ಸ್ಥಿತಿ ಅಧೋಗತಿಯಾಗಿದೆ. ರಸ್ತೆಯಲ್ಲಿನ ಹೊಂಡಗುAಡಿಗಳಲ್ಲಿ ವಾಹನ ಸವಾರರ ಬದುಕು ಸಂಕಷ್ಟಕ್ಕೀಡಾಗುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕಾಳಜಿಯೇ ಇಲ್ಲ. ಕಳೆದ ಎರಡು ವರ್ಷಗಳಿಂದ ಶಾಸಕರು ಕೇವಲ ಸುಳ್ಳು ಹೇಳಿಯೇ ಕಳೆದಿದ್ದಾರೆ. ಅಭಿವೃದ್ಧಿ ಶೂನ್ಯವಾಗಿದೆ. ಪುತ್ತೂರಿನ ಶಾಸಕರು `ಪೇಪರ್ ಟೈಗರ್’ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಪುತ್ತೂರು ಉಪ್ಪಿನಂಗಡಿ ಗುರುವಾಯನಕೆರೆ ರಾಜ್ಯ ಹೆದ್ದಾರಿಯನ್ನು ದುರಸ್ಥಿ ಮಾಡಬೇಕು. ಇಲ್ಲವಾದರೆ ಉಗ್ರಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.
ಬಿಜೆಪಿ ಮುಖಂಡ ಅರುಣ್‌ಕುಮಾರ್ ಪುತ್ತಿಲ ಅವರು ಮಾತನಾಡಿ,  ರಾಜ್ಯ ಸರ್ಕಾರ ಅಭಿವೃದ್ಧಿ ಮಾಡುವುದನ್ನು ಬಿಟ್ಟು ಹಗರಣಗಳನ್ನು ಮಾಡುತ್ತಾ ಕಾಲಕಳೆಯುತ್ತಿದೆ. ರಸ್ತೆಗಳ ಅವ್ಯವಸ್ಥೆಯಿಂದ ಹಲವು ಜನರು ಆಸ್ಪತ್ರೆ ಸೇರಿದ್ದಾರೆ. ಸಾಮಾನ್ಯ ಜನರ ಜೀವದ ಮೇಲೆ ಆಟ ಆಡುತ್ತಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಎದ್ದುಕಾಣುತ್ತಿದೆ.ರಸ್ತೆಯನ್ನು ಬೇಕಾಬಿಟ್ಟಿ ನಿರ್ವಹಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಕೂಡಲೇ ಈ ರಸ್ತೆಯನ್ನು ದುರಸ್ಥಿ ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾಕಾರರು ರಸ್ತೆತಡೆ ಪರಿಣಾಮ ಕಿಮೀ ವ್ಯಾಪ್ತಿಯಲ್ಲಿ ವಾಹನಗಳ ಸಾಲುಗಟ್ಟಿ ನಿಲ್ಲುವಂತಾಯಿತು.
೧೨ ದಿನಗಳಲ್ಲಿ ಡಾಮಾರೀಕರಣದ ಭರವಸೆ- ಪ್ರತಿಭಟನೆ ವಾಪಾಸು
ಪ್ರತಿಭಟನಾಕಾರರು ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಪುತ್ತೂರು ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದ ತಕ್ಷಣ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ೧೦ ದಿನಗಳ ಒಳಗೆ ಮೊದಲ ಹಂತದ ಡಾಮರೀಕರಣ ನಡೆಸುವುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ೧೨ ದಿನಗಳಲ್ಲಿ ಡಾಮರೀಕರಣ ಮಾಡದಿದ್ದರೆ ಮತ್ತೆ ಇದೇ ಸ್ಥಳದಲ್ಲಿ ಧರಣಿ ಕುಳಿತುಕೊಳ್ಳುವ ಎಚ್ಚರಿಕೆಯನ್ನು ಸಂಜೀವ ಮಠಂದೂರು ಅವರು ಅಧಿಕಾರಿಗಳಿಗೆ ನೀಡಿದರು. 
ಪ್ರತಿಭಟನೆಯಲ್ಲಿ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಬಿಜೆಪಿ ಮುಖಂಡರಾದ ಉಮೇಶ್ ಶೆಣೈ ಉಪ್ಪಿನಂಗಡಿ, ಲಕ್ಷö್ಮಣ ಗೌಡ ಬೆಳ್ಳಿಪ್ಪಾಡಿ, ಮುಕುಂದ ಗೌಡ ಬಜತ್ತೂರು, ಜಯಾನಂದ ಕೋಡಿಂಬಾಡಿ, ಸತೀಶ್ ನಾÊಕ್, ಸುನೀಲ್ ಕುಮಾರ್ ದಡ್ಡು, ಸುರೇಶ್ ಅತ್ರಮಜಲು, ಪುರುಷೋತ್ತಮ ಮುಂಗ್ಲಿಮನೆ, ಧರ್ಮಣ ನಾಯ್ಕ್, ರಾಮಣ್ಣಗೌಡ, ಯತೀಶ್ ಶೆಟ್ಟಿ, ಸಂತೋಷ್ ಪಂರ್ದಾಜೆ, ಸುಜಾತಾ ರೈ ಅಲಿಮಾರ್, ಚಂದ್ರಶೇಖರ ಮಡಿವಾಳ, ವಿದ್ಯಾಧರ್ ಜೈನ್,  ರಾಮಚಂದ್ರ ಪೂಜಾರಿ, ಪ್ರಶಾಂತ್ ನೆಕ್ಕಿಲಾಡಿ, ಸದಾನಂದ ನೆಕ್ಕಿಲಾಡಿ, ಸ್ವಪ್ನ ನೆಕ್ಕಿಲಾಡಿ, ಅನಿಲ್ ತೆಂಕಿಲ, ಸುರೇಶ್ ಆಳ್ವ, ಗೀತಾ ನೆಕ್ಕಿಲಾಡಿ, ಶಿವಾನಂದ ಕಜೆ, ರಮೇಶ್ ಸುಭಾಶ್‌ನಗರ, ಸದಾನಂದ ಶೆಟ್ಟಿ ಅಡೆಕ್ಕಲ್, ಹರೀಶ ದರ್ಬೆ, ಪ್ರಸಾದ್ ಬಂಡಾರಿ, ಕೇಶವ ಸುಣ್ಣಾನ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!