ಪುತ್ತೂರು ಜು. 4: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಸಂಘಟನೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಕ್ಷೇತ್ರದ ವಕ್ತಾರರಾಗಿ ರಾಜೇಶ್ ಬನ್ನೂರು ಹಾಗೂ ಮಾಧ್ಯಮ ಪ್ರಮುಖರಾಗಿ ಸತೀಶ್ ನಾಯಕ್ ಪರ್ಲಡ್ಕ ಅವರನ್ನು ನೇಮಕ ಮಾಡಲಾಗಿದೆ.ಈ ಕುರಿತು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆದೇಶ ಹೊರಡಿಸಿದ್ದಾರೆ.ಪಕ್ಷದ ತತ್ವ–ಸಿದ್ಧಾಂತಗಳು, ಸಂಘಟನೆಯ ಚಟುವಟಿಕೆಗಳು ಹಾಗೂ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಉದ್ದೇಶದಿಂದ ಈ ನೇಮಕಾತಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.ವಕ್ತಾರರಾಗಿ ರಾಜೇಶ್ ಬನ್ನೂರು ಅವರು ಪಕ್ಷದ ಅಧಿಕೃತ ನಿಲುವುಗಳನ್ನು ಸಾರ್ವಜನಿಕ ವೇದಿಕೆಗಳು ಹಾಗೂ ಮಾಧ್ಯಮಗಳ ಮುಂದೆ ಮಂಡಿಸಲಿದ್ದಾರೆ. ಮಾಧ್ಯಮ ಪ್ರಮುಖರಾಗಿ ಸತೀಶ್ ನಾಯಕ್ ಪರ್ಲಡ್ಕ ಅವರು ಪತ್ರಿಕಾ ಸಮನ್ವಯ ಮತ್ತು ಮಾಹಿತಿ ಪ್ರಸಾರದ ಜವಾಬ್ದಾರಿ ನಿರ್ವಹಿಸಲಿದ್ದಾರೆ.







