ಪುತ್ತೂರು: ವಿವಿಧ ಬ್ರಾಂಡೆಡ್ ಕಂಪನಿಗಳ ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ವಸ್ತುಗಳ ಮಳಿಗೆಯಾದ ‘ಎಚ್.ಎಂ. ಹೋಮ್ ಅಪ್ರೈಯನ್ಸಸ್ ಆ್ಯಂಡ್ ಎಲೆಕ್ಟ್ರಾನಿಕ್ಸ್’ ಕುಂಬ್ರ ಸೆಂಟರ್‌ನಲ್ಲಿ ಜುಲೈ 6ರಂದು ಶುಭಾರಂಭಗೊಳ್ಳಲಿದೆ.ಉದ್ಘಾಟನಾ ಸಮಾರಂಭದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಬ್ರಾಂಡ್ ಅಂಬಾಸಿಡರ್ ಅರುಣ್ ಕುಮಾರ್ ಪುತ್ತಿಲ, ಎಸ್‌ಡಿಪಿಐ ಮುಖಂಡ ರಿಯಾಝ್ ಕಡಂಬು ಸೇರಿದಂತೆ ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಹಲವು ಗಣ್ಯರು ಭಾಗವಹಿಸಲಿದ್ದಾರೆ.ಮಳಿಗೆಯಲ್ಲಿ ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಏರ್ ಕೂಲರ್, ಮಿಕ್ಸಿ, ಫ್ಯಾನ್, ಟಿವಿ, ಹೋಮ್ ಥಿಯೇಟರ್, ಹೊಲಿಗೆ ಯಂತ್ರ, ಗೇರ್ ಸೈಕಲ್, ಮಕ್ಕಳ ಆಟಿಕೆಗಳು ಹಾಗೂ ತೊಟ್ಟಿಲುಗಳು ಸೇರಿದಂತೆ ವಿವಿಧ ಗೃಹೋಪಯೋಗಿ ವಸ್ತುಗಳು ಲಭ್ಯವಿರಲಿವೆ.ಉದ್ಘಾಟನಾ ಅಂಗವಾಗಿ ಆಯ್ದ ವಸ್ತುಗಳ ಮೇಲೆ ಶೇ.10ರಿಂದ ಶೇ.80ರವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಎಲ್‌ಜಿ, ಸ್ಯಾಮ್‌ಸಂಗ್ ಸೇರಿದಂತೆ ವಿವಿಧ ಕಂಪನಿಗಳ ರೆಫ್ರಿಜರೇಟರ್‌ಗಳ ಮೇಲೆ ಶೇ.30ರಿಂದ 40ರವರೆಗೆ ಹಾಗೂ ಟಿವಿಗಳ ಮೇಲೆ ಶೇ.30ರಿಂದ 50ರವರೆಗೆ ರಿಯಾಯಿತಿ ದೊರೆಯಲಿದೆ. ಇತರೆ ಗೃಹೋಪಯೋಗಿ ವಸ್ತುಗಳ ಮೇಲೂ ವಿಶೇಷ ರಿಯಾಯಿತಿ ಇರಲಿದೆ.ಗ್ರಾಹಕರ ಅನುಕೂಲಕ್ಕಾಗಿ ಬಜಾಜ್ ಹಾಗೂ ಎಚ್‌ಡಿಬಿ ಫೈನಾನ್ಸ್ ಮೂಲಕ ಸುಲಭ ಕಂತಿನ ಸಾಲ ಸೌಲಭ್ಯವೂ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9187376838 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ







