ಪುತ್ತೂರು: ಸ್ತನ ಕ್ಯಾನ್ಸರ್ ಹಾಗೂ ಮಧುಮೇಹದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪುತ್ತೂರು ರೋಟರಿ ಕ್ಲಬ್ ಆಫ್ ಪುತ್ತೂರು ಯುವ, ಪ್ರಗತಿ ಗ್ರೂಪ್ ಆಫ್ ಕಾಲೇಜಸ್ ಹಾಗೂ ಐಎಂಎ ಪುತ್ತೂರು ಘಟಕದ ಸಹಯೋಗದಲ್ಲಿ ನ.15ರಂದು ಜಾಗೃತಿ ವಾಕಥಾನ್ ಆಯೋಜಿಸಲಾಗಿದೆ.
‘ವಾಕ್ ಫಾರ್ ಅವೇರ್‌ನೆಸ್, ವಾಕ್ ಫಾರ್ ಲೈಫ್’ ಎಂಬ ಘೋಷವಾಕ್ಯದೊಂದಿಗೆ ನಡೆಯುವ ವಾಕಥಾನ್ ಬೆಳಗ್ಗೆ 7 ಗಂಟೆಗೆ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಆರಂಭವಾಗಲಿದೆ. ಅಲ್ಲಿಂದ ಪುತ್ತೂರು ಬಸ್ ನಿಲ್ದಾಣದವರೆಗೆ ತೆರಳಿ ಮತ್ತೆ ಪ್ರಗತಿ ಆಸ್ಪತ್ರೆಗೆ ವಾಪಸಾಗಲಿದ್ದು, ಒಟ್ಟು ಸುಮಾರು 3 ಕಿ.ಮೀ. ನಡಿಗೆ ನಡೆಯಲಿದೆ.
ವಾಕಥಾನ್ ಬಳಿಕ ಸ್ತನ ಆರೋಗ್ಯದ ಕುರಿತು ಡಾ. ಸ್ಮಿತಾ ರಾವ್ ಹಾಗೂ ಮಧುಮೇಹದ ಕುರಿತು ಡಾ. ಶ್ರೀರಾಮ್ ಅವರು ವಿಶೇಷ ಜಾಗೃತಿ ಮಾಹಿತಿ ನೀಡಲಿದ್ದಾರೆ.
ಸ್ತನ ಕ್ಯಾನ್ಸರ್ ಮತ್ತು ಮಧುಮೇಹದ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಸಾರುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.









