ಪುತ್ತೂರು: ನಗರದ ದರ್ಬೆಯ ಬುಶ್ರಾ ಟವರ್‌ನಲ್ಲಿರುವ ನಯಾ ಚಪ್ಪಲ್ ಬಜಾರ್ ವತಿಯಿಂದ ನವೆಂಬರ್ 14ರಂದು ಶನಿವಾರ ಸಂಜೆ 4 ಗಂಟೆಗೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಕ್ಕಳ ದಿನಾಚರಣೆಯ ಅಂಗವಾಗಿ ವಿಶೇಷ ಚೇತನ ಮಕ್ಕಳಿಗೆ ಪ್ರೀತಿಯ ಕಾಣಿಕೆಯಾಗಿ ಉಡುಗೊರೆ ಕಿಟ್‌ಗಳನ್ನು ವಿತರಿಸಲಾಗುವುದು. ಇದರೊಂದಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೂವರು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವು
ಕಾರ್ಯಕ್ರಮದಲ್ಲಿ ನಯಾ ಚಪ್ಪಲ್ ಬಜಾರ್‌ನಲ್ಲಿ ನವಜಾತ ಶಿಶುಗಳು ಹಾಗೂ ಪುಟಾಣಿ ಮಕ್ಕಳಿಗೆ ಅಗತ್ಯವಿರುವ ಬಟ್ಟೆ ಮತ್ತು ವಿವಿಧ ಉತ್ಪನ್ನಗಳ ವಿಶೇಷ ಸಂಗ್ರಹ ಈ ವಿಭಾಗವನ್ನು ಉದ್ಘಾಟಿಸಲಾಗುವುದು.
ಏಷ್ಯನ್ ವುಡ್‌ನ ಮಾಲಕ ಇಸ್ಮಾಯಿಲ್ ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಅವರು ಉದ್ಘಾಟಿಸಲಿದ್ದಾರೆ.
ಗೌರವ ಅತಿಥಿಗಳಾಗಿ ರೋಟರಿ ಕ್ಲಬ್ ಪುತ್ತೂರಿನ ಅಧ್ಯಕ್ಷ ದತ್ತಾತ್ರೇಯ ರಾವ್ ಹಾಗೂ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಮನೋಜ್ ಭಾಗವಹಿಸಲಿದ್ದಾರೆ. ನವಜಾತ ಶಿಶುಗಳ ವಿಭಾಗದ ಮೊದಲ ಗ್ರಾಹಕರಾಗಿ ರಝೀಮ್ ರಫೀಕ್ ಎಂ.ಜಿ. ಅವರು ಖರೀದಿ ಮಾಡಲಿದ್ದಾರೆ.
ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ನಯಾ ಚಪ್ಪಲ್ ಬಜಾರ್ ಕುಟುಂಬದವರು ಆಹ್ವಾನಿಸಿದ್ದಾರೆ.









