ಪುತ್ತೂರು: ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ನವೆಂಬರ್ 14ರಂದು (ಶನಿವಾರ) ಪುತ್ತೂರು 110/33/11 ಕೆ.ವಿ. ವಿದ್ಯುತ್ ಉಪಕೇಂದ್ರದಿಂದ ಹೊರಡುವ ನಗರ, ಕಬಕ, ಬಲ್ನಾಡು, ಕಾಂಚನ ಹಾಗೂ ಉಪ್ಪಿನಂಗಡಿ ಎಕ್ಸ್‌ಪ್ರೆಸ್ ಫೀಡರ್‌ಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಫೀಡರ್‌ಗಳ ಮೂಲಕ ವಿದ್ಯುತ್ ಸರಬರಾಜಾಗುವ ಪುತ್ತೂರು ನಗರ, ಬನ್ನೂರು, ರಾಜೇಶ್ವರಿ ವಠಾರ, ಪೆರಿಯತ್ತೋಡಿ, ಕೊಡಿಪ್ಪಾಡಿ, ಪಡ್ಯೂರು, ಕಬಕ, ಬಲ್ನಾಡು, ಸೇಡಿಯಾಪು, ಕೋಡಿಂಬಾಡಿ, ಮಠಂತಬೆಟ್ಟು, ಬೊಳ್ಳಾಜೆ, ನಿಡ್ಯ, ಬರೆಪುಣಿ ಹಾಗೂ ಕಜೆ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!